ಕೋಲ್ಪೆ ನೂರಾನಿಯ್ಯ ಮದ್ರಸ ಕಟ್ಟಡ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ – ಸೋಂಕಿಗೆ ಒಳಗಾಗುವ ಜಮಾಅತ್‌ನವರಿಗೆ ತಂಗಲು ಸೂಕ್ತ ವ್ಯವಸ್ಥೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕೋವಿಡ್-೧೯ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತ ಜಮಾಅತ್‌ನವರಿಗೆ ತಂಗಲು ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿ ಇರುವ ಕೋಲ್ಪೆ ನೂರಾನಿಯ್ಯ ಮದ್ರಸವನ್ನು ಕೋವಿಡ್ ಕೇರ್ ಸೆಂಟರ್ ಆಗಿ ತಾತ್ಕಾಲಿಕವಾಗಿ ಪರಿವರ್ತನೆ ಮಾಡಲಾಗಿದೆ.

ಕೊಣಾಲು ಕೋಲ್ಪೆ ಪರಿಸರದಲ್ಲಿ ಕೋವಿಡ್-೧೯ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಸೋಂಕಿತರು ಹೋಮ್ ಐಸೋಲೇಷನ್ ಆದಲ್ಲಿ ಅವರ ಮನೆಯವರಿಗೂ ಸೋಂಕು ಹರಡುವ ಭೀತಿ ಇದೆ. ಸೋಂಕಿತರು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾದಲ್ಲಿ ಇತರರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜಮಾಅತ್‌ನವರು ಕೋವಿಡ್ ಸೋಂಕಿಗೆ ಒಳಗಾದಲ್ಲಿ ಅವರಿಗೆ ಕೋಲ್ಪೆ ನೂರಾನಿಯ್ಯಾ ಮದ್ರಸ ಹಾಲ್‌ನಲ್ಲಿ ತಂಗಲು ಕೋಲ್ಪೆ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಇಲ್ಲಿ ತಂಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಈಗಾಗಲೇ ಐವರು ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಿಗೆ ಅವರ ಮನೆಯಿಂದಲೇ ತಿಂಡಿ, ಊಟ ಪೂರೈಸಲಾಗುತ್ತಿದೆ. ಕೋವಿಡ್ ಕಾರ್ಯಪಡೆ ಸದಸ್ಯರು ಭೇಟಿ ನೀಡಿ ಆರೋಗ್ಯ ಸಲಹೆ ನೀಡುತ್ತಿದ್ದಾರೆ.


ಜಮಾಅತ್ ಸಮಿತಿ ಅಧ್ಯಕ್ಷ ಎಂ.ಆದಂ, ಉಪಾಧ್ಯಕ್ಷರಾದ ಅಬ್ದುಲ್ಲಾ ಕುಂಞಿ ಕೊಂಕೋಡಿ, ಯು.ಕೆ.ಹಮೀದ್ ಕೋಲ್ಪೆ, ಪ್ರಧಾನ ಕಾರ್ಯದರ್ಶಿ ಯು.ಕೆ.ಉಮ್ಮರ್, ಕೆ.ಎಂ.ಹನೀಫ್, ಕೋಲ್ಪೆ ಖಲಂದರ್ ಷಾ ದಫ್ ಸಮಿತಿ ಅಧ್ಯಕ್ಷ ಕೆ.ಕೆ.ಇಸ್ಮಾಯಿಲ್ ಸೇರಿದಂತೆ ಸಮಿತಿಯ ಸದಸ್ಯರು ಸಭೆ ಸೇರಿ ಕೋಲ್ಪೆ ಪರಿಸರದಲ್ಲಿ ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮದ್ರಸ ಕಟ್ಟಡವನ್ನು ತಾತ್ಕಾಲಿಕವಾಗಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತ್‌ನ ಗಮನಕ್ಕೂ ತಂದಿದ್ದಾರೆ. ಮಸೀದಿಯಲ್ಲಿ ನಮಾಜು ಮಾಡಲು ನಿರ್ಬಂಧವಿದ್ದು ಮದ್ರಸ ತರಗತಿಗಳು ನಡೆಯುತ್ತಿಲ್ಲ. ಆದ್ದರಿಂದ ಮದ್ರಸ ಕಟ್ಟಡ ಕೋವಿಡ್ ಕೇರ್ ಸೆಂಟರ್ ಆದರೂ ಯಾರಿಗೂ ಸೋಂಕು ಹರಡುವ ಭೀತಿ ಇಲ್ಲ. ಸೋಂಕಿಗೆ ಒಳಗಾದ ಜಮಾಅತ್‌ನವರು ಇಲ್ಲಿ ೧೪ ದಿನ ತಂಗಲು ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಕೊರೋನಾ ಸೋಂಕು ಇತರರಿಗೆ ಹರಡದಂತೆ ಜಮಾಅತ್ ಸಮಿತಿ ಸೂಕ್ತ ವ್ಯವಸ್ಥೆ ಮಾಡಿದೆ.

ಕೋಲ್ಪೆ ಪರಿಸರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಸೋಂಕಿತರು ಹೋಮ್ ಐಸೋಲೇಷನ್ ಆದಲ್ಲಿ ಮನೆಯ ಸದಸ್ಯರಿಗೂ ಸೋಂಕು ಹರಡಲಿದೆ. ಆದ್ದರಿಂದ ಜಮಾಅತ್‌ನವರು ಕೊರೋನಾ ಸೋಂಕಿಗೆ ಒಳಗಾದಲ್ಲಿ ಅವರಿಗೆ ತಂಗಲು ಅನುಕೂಲವಾಗುವ ನಿಟ್ಟಿನಲ್ಲಿ ಕೋಲ್ಪೆ ನೂರಾನಿಯಾ ಮದ್ರಸ ಕಟ್ಟಡವನ್ನು ತಾತ್ಕಾಲಿಕವಾಗಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದೇವೆ. ಸೋಂಕಿತರಿಗೆ ಉಳಿದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಈಗಾಗಲೇ ೫ ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ – ಎಂ.ಆದಂ ಅಧ್ಯಕ್ಷರು ಬದ್ರಿಯಾ ಜುಮಾ ಮಸೀದಿ, ಕೋಲ್ಪೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.