ಬೊಳ್ಳಾವು: ಮುಗಿಯುವ ಹಂತ ತಲುಪಿದ ಚರಂಡಿ ಕಾಮಗಾರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ. ಸದಸ್ಯರ ಮುತುವರ್ಜಿಯಿಂದಾಗಿ ಈ ಬಾರಿ ಉಪ್ಪಿನಂಗಡಿ ಗ್ರಾ.ಪಂ.ನ ವಾರ್ಡ್ ನಂಬರ್ ೫ರಲ್ಲಿ ಮಳೆಗಾಲ ಪೂರ್ವಭಾವಿಯಾಗಿ ನಡೆಯಬೇಕಾಗಿದ್ದ ಕೆಲಸಗಳು ಈಗಾಗಲೇ ಭರದಿಂದ ಸಾಗುತ್ತಿದ್ದು, ಮಳೆಗಾಲ ಆರಂಭಗೊಳ್ಳುವ ಮೊದಲೇ ಮುಗಿಯುವ ಹಂತಕ್ಕೆ ಬಂದಿದೆ.

ಪ್ರತಿ ವರ್ಷ ಈ ವಾರ್ಡ್‌ನಲ್ಲಿ ಚರಂಡಿ ನಿರ್ವಹಣೆದ್ದೇ ಪ್ರಮುಖ ಕೆಲಸ. ಮಳೆಗಾಲಕ್ಕೆ ಮೊದಲೇ ಇದನ್ನು ಮುಗಿಸದಿದ್ದರೆ ಮತ್ತೆ ಹಲವು ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಸಕಾಲದಲ್ಲಿ ಚರಂಡಿ ನಿರ್ವಹಣೆ ಕೆಲಸಗಳು ನಡೆಯದ್ದಿದ್ದುದರಿಂದ ಇಲ್ಲಿ ಜನರು ಹಲವು ಬಾರಿ ಸಮಸ್ಯೆ ಅನುಭವಿಸಿದ್ದಿದಿದೆ. ಆದರೆ ಈ ಬಾರಿ ಮಾತ್ರ ಈ ವಾರ್ಡ್‌ನ ಗ್ರಾ.ಪಂ. ಸದಸ್ಯರ ಮುತುವರ್ಜಿಯಿಂದ ರಸ್ತೆ ಬದಿ ಚರಂಡಿಯ ಹೂಳು ತೆಗೆಯುವುದು ಸೇರಿದಂತೆ ಚರಂಡಿ ನಿರ್ವಹಣೆ ಕಾಮಗಾರಿಯನ್ನು ಕಳೆದ ೫ ದಿನಗಳ ಹಿಂದೆ ಆರಂಭಿಸಿದ್ದು, ಮುಗಿಯುವ ಹಂತದಲ್ಲಿದೆ.

ಬೊಳ್ಳಾವು ಎಂಬಲ್ಲಿ ಚರಂಡಿ ನಿರ್ವಹಣೆ ಕಾಮಗಾರಿಯನ್ನು ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು ಪರಿಶೀಲನೆ ನಡೆಸಿದರು. ಈ ಸಂದರ್ಭ ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಸ್ಥಳೀಯರಾದ ಚಂದ್ರ ಗೌಡ, ರಾಮಣ್ಣ ಶೆಟ್ಟಿ, ದುರ್ಗಾಪ್ರಸಾದ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.