ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಶಿಕ್ಷಕಿ ರೂಪಕಲಾ ಕೆ ಯವರು ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ದ.ಕ ಮಂಗಳೂರು ಇವರಿಂದ ನಡೆಸಲ್ಪಡುವ ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ೩೧ ವರ್ಷ ಕನ್ನಡ ಶಿಕ್ಷಕಿಯಾಗಿ ೪ ವರ್ಷ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಇದೀಗ ಸೇವಾ ನಿವೃತ್ತಿ ಹೊಂದುತ್ತಿರುವ ಶ್ರೀಮತಿ ರೂಪಕಲಾ ಕೆ ರವರ ವಿದಾಯ ಸಮಾರಂಭ ಸರಕಾರದ ಕೊವಿಡ್ ನಿಯಮಗಳನ್ನು ಅನುಸರಿಸಿ ಮೇ ೩೧ ರಂದು ಅತ್ಯಂತ ಸರಳವಾಗಿ ಸಂಸ್ಥೆಯ ಅಟಲ್ ಲ್ಯಾಬ್ ನಲ್ಲಿ ಜರಗಿತು. ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿಯವರು ಶ್ರೀಮತಿ ರೂಪಕಲಾ ಕೆ ಯವರು ಸಮರ್ಪಣಾ ಭಾವದಿಂದ ಭಾಷಾ ಬೋಧನೆಯನ್ನು ಮಾಡುವ ರೀತಿ ಅನನ್ಯವಾದುದು, ಎಲ್ಲರಲ್ಲೂ ಹೊಂದಾಣಿಕೆಯಿಂದ ಸಂಸ್ಥೆಯ ಜವಾಬ್ಧಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ಅವರ ಕರ್ತವ್ಯಪರತೆಗೆ ಸಾಕ್ಷಿಯಾಗಿದೆ ಎಂದು ತಿಳಿಸುತ್ತಾ ಶ್ರೀಮತಿ ರೂಪಕಲಾ ಕೆ ಮತ್ತು ಅವರ ಪತಿ ಶ್ರೀ ಜಗನ್ನಾಥ ರೆ ಕೆ ಯವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮುಂದಿನ ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸಲಿರುವ ಶ್ರೀಮತಿ ಜಯಲಕ್ಷ್ಮಿ ಎ ಯವರನ್ನು ಸ್ವಾಗತಿಸಿ, ಹಲವಾರು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ಸಮಾವೇಶಗಳಲ್ಲಿ ವಿಜ್ಞಾನದ ಯೋಜನಾ ವರದಿಯನ್ನು ಮಂಡಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಪಡೆದಿದ್ದು, ತಮ್ಮ ಕರ್ತವ್ಯಾವಧಿಯಲ್ಲಿ ಸಂಸ್ಥೆಯು ಇನ್ನಷ್ಟು ವಿಜ್ಞಾನ ಯೋಜನೆಗಳನ್ನು ಮಂಡಿಸಿ, ಅಂತರರಾಷ್ಟ್ರೀಯ ಮಟದಲ್ಲಿ ಪ್ರಜ್ವಲಿಸಲಿ ಎಂದು ಶುಭ ಹಾರೈಸಿದರು.


ಈ ಹಿಂದಿನ ಸಂಚಾಲಕರಾದ ಸವಣೂರು ಸೀತಾರಾಮ ರೈ ಯವರು ತನ್ನ ಅವಧಿಯಲ್ಲಿ ಸಂಸ್ಥೆಯ ಸಾಧನೆಗಳನ್ನು ಗಮನಿಸಿದ್ದೇನೆ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವಲ್ಲಿ ಶ್ರೀಮತಿ ರೂಪಕಲಾ ರವರು ಸಾಕಷ್ಟು ಶ್ರಮಿಸಿದ್ದಾರೆ. ಈಗಿನ ಉತ್ತಮ ಹೆಸರನ್ನು ಉಳಿಸಿಕೊಳ್ಳಲು ಪರಿಶ್ರಮ ಪಡಬೇಕು ಎಂದು ತಿಳಿಸಿದರು.

ರಕ್ಷಕ ಶಿಕ್ಷಕ ಸಂಘದ ಪರವಾಗಿ ಅಧ್ಯಕ್ಷರಾದ ಡಾ ಶ್ರೀಪ್ರಕಾಶ್ ಶ್ರೀಮತಿ ರೂಪಕಲಾ ಕೆ ದಂಪತಿಗಳನ್ನು ಸನ್ಮಾನಿಸಿ ಎಲ್ಲರಲ್ಲೂ ಪ್ರೀತಿಯಿಂದ ಬೆರೆತು ಸೂಕ್ತವಾದ ಮಾರ್ಗದರ್ಶನ ನೀಡಿ ಯಾವುದೇ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ನಿಭಾಯಿಸಬಲ್ಲ ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸಿದ್ದು ಅವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಶುಭಹಾರೈಸಿದರು. ಶಿಕ್ಷಕ ವೃಂದದ ಪರವಾಗಿ ಶಿಕ್ಷಕಿ ಶ್ರೀಮತಿ ಗಾಯತ್ರಿ ಮಾತನಾಡಿದರು.

ಇಂದು ನಿವೃತ್ತಿಗೊಳ್ಳುತ್ತಿರುವ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೂಪಕಲಾ ಕೆ ತನಗೆ ದೊರೆತ ಈ ಗೌರವಕ್ಕೆ ಕಾರಣರಾದ ಸರ್ವರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ತಾನು ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಂಸ್ಥೆ ನೀಡಿದ ಪ್ರೋತ್ಸಾಹವೇ ಕಾರಣ ಎಂದು ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾ ಪ್ರಸಾದ್ ಭಂಡಾರಿ, ಚಂದ್ರಹಾಸ ರೈ ನಡುಬೈಲು, ಜಯಪ್ರಕಾಶ್ ರೈ ನೂಜಿಬೈಲು, ರಮೇಶ್ ರೈ ಸಾಂತ್ಯ, ನಿರಂಜನ ರೈ ಮಠಂತಬೆಟ್ಟು, ದುರ್ಗಾಪ್ರಸಾದ್ ರೈ ಕುಂಬ್ರ, ದ.ಕ.ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳಾದ ರಘುನಾಥ ರೈ, ರಾಮಣ್ಣ ರೈ, ಪ್ರತಿಮಾ ಯು ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಧಿರೇನ್, ರವಿಪ್ರಸಾದ್ ಶೆಟ್ಟಿ ಬನ್ನೂರು, ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಎಂ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಸಂಧ್ಯಾ ಕೆ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.