ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಭಾಸ್ಕರ ರೈ ದೇರಾಜೆಯವರಿಗೆ ಶ್ರದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತ್ತೀಚೆಗೆ ನಿಧನರಾದ ಕೆಯ್ಯೂರು ಗ್ರಾಮದ ತೆಗ್ಗು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ, ತೆಗ್ಗು ಸ್ನೇಹ ಫ್ರೆಂಡ್ಸ್ ಕ್ಲಬ್‌ನ ಗೌರವ ಸಲಹೆಗಾರರಾಗಿದ್ದ ಭಾಸ್ಕರ ರೈ ದೇರಾಜೆಯವರಿಗೆ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ತೆಗ್ಗು ಸ್ನೇಹ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಶ್ರದ್ಧಾಂಜಲಿ ಸಭೆಯು ಜೂ.೦೧ ರಂದು ತೆಗ್ಗು ಶಾಲಾ ವಠಾರದಲ್ಲಿ ನಡೆಯಿತು. ಭಾಸ್ಕರ ರೈಯವರು ಓರ್ವ ಸಜ್ಜನ ವ್ಯಕ್ತಿಯಾಗಿದ್ದರು, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಇವರು ಹಾಲು ಉತ್ಪಾದಕರ ಸಂಘವನ್ನು ಲಾಭದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೆ ಭಗವಾನ್ ಸತ್ಯ ಸಾಯಿ ಬಾಬಾರ ಭಕ್ತರಾಗಿದ್ದ ಇವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಓರ್ವ ಸರಳ ಸಜ್ಜನ ವ್ಯಕ್ತಿಯನ್ನು ಊರು ಕಳೆದುಕೊಂಡಿರುವುದು ಎಲ್ಲರಿಗೆ ದುಃಖವನ್ನು ತಂದಿದೆ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಅವರ ಭಾವಚಿತ್ರ ಮುಂದೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ನುಡಿನಮನ ಸಲ್ಲಿಸಲಾಯಿತು. ತೆಗ್ಗು ಶಾಲಾ ಮುಖ್ಯ ಶಿಕ್ಷಕ ಕಿರಣ್‌ರಾಜ್, ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಕ್ಲಬ್‌ನ ಅಧ್ಯಕ್ಷ ಶುಭಪ್ರಕಾಶ್ ಎರಬೈಲು, ಕ್ಲಬ್‌ನ ಗೌರವ ಸಲಹೆಗಾರ ಮೋಹನ್ ಗೌಡ ಎರೆಕ್ಕಲರವರುಗಳು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿದ ಗಣೇಶ್ ರೈ ನೂಜಿಬರಮೇಲು, ಗಂಗಾಧರ ಗೌಡ ಎರಕ್ಕಲ, ಹರಿಕೃಷ್ಣ ಜೋಡುಕಾವಲು, ಡೊಂಬಯ್ಯ ಗೌಡ, ಮೋನಪ್ಪ ಗೌಡ ಕೋಡಂಬು, ಚಂದ್ರಶೇಖರ ಎರಕ್ಕಲ, ನವೀನ್ ಎರಬೈಲು, ದಿನೇಶ್ ಕಲ್ಲಗುಡ್ಡೆ, ಉಮೇಶ್ ಕಲ್ಲಗುಡ್ಡೆ, ಗೋಪಾಲಕೃಷ್ಣ ಬಂಗಾರ್‌ಗುಡ್ಡೆ, ದಿನೇಶ್ ಕುಮಾರ್ ತೆಗ್ಗು, ಶರೀಫ್ ಬಲ್ಕಾಡ್, ಅರ್ಪಣಾ, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪಾವತಿ ಸೊರಕೆ, ಪಾರ್ವತಿ ಎರಕ್ಕಲ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.