ಬಡಗನ್ನೂರುಃ ಗ್ರಾ.ಪಂ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಬಡಗನ್ನೂರುಃ ಮೂರು ವರ್ಷಗಳಿಂದ ವಸತಿ ರಹಿತ ಫಲಾನುಭವಿಗಳಿಗೆ ವಸತಿ ಮಂಜೂರಾತಿ ಆಗಿಲ್ಲ ಈ ಬಗ್ಗೆ  ಸರ್ಕಾರಕ್ಕೆ ಬರೆಯಲು ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕನ್ನಡ್ಕ ರವರ ಅಧಕ್ಷತೆಯಲ್ಲಿ ಮೇ31 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ವಸತಿ ರಹಿತ ಫಲಾನುಭವಿಗಳಿಗೆ ಮೂರು ವರ್ಷಗಳಿಂದ ಯಾವುದೇ ಯೋಜನೆಯಲ್ಲಿ ಮನೆ ಮಂಜೂರಾತಿ ಗೊಂಡಿಲ್ಲ. ಈ ಹಿಂದೆ ಬಸವ ವಸತಿ ಯೋಜನೆಯಲ್ಲಿ 20 ಮನೆಗಳಿಗೆ ಕ್ರಿಯಾ ಯೋಜನೆ ಮಾಡಿ ನಿಗಮಕ್ಕೆ ಕಳುಹಿಸಲಾಗಿತ್ತು ಅದರೆ ಈ ವರೆಗೆ ಮನೆ ಮಂಜೂರು ಗೊಂಡಿಲ್ಲ ಇದರಿಂದಾಗಿ ವಸತಿ ರಹಿತ ಕುಟುಂಬ ಮನೆ ನಿರ್ಮಾಣ ಮಾಡುವಲ್ಲಿ ಕಂಗಳಾಗಿದ್ದಾರೆ  ಈ ಬಗ್ಗೆ ಸರ್ಕಾರಕ್ಕೆ ಬರೆಯಲು  ಸದಸ್ಯ ರವಿರಾಜ ರೈ ಸಜಂಕಾಡಿ ಆಗ್ರಹಿಸಿದರು ಈ ಬಗ್ಗೆ ಉಪಾಧ್ಯಕ್ಷ ಸಂತೋಷ್ ಆಳ್ವ ಪ್ರತಿಕ್ರಿಯಿಸಿ ಸರ್ಕಾರ 15 ಮನೆ ಹೆಚ್ಚುವರಿ ನೀಡಿ ಒಟ್ಟು 35 ಮನೆ ನೀಡಿದೆ ನೆರೆ ಪೀಡಿತರಿಗೆ ಮನೆ ಹಂಚಿಕೆ ಮಾಡಲಾಗಿದೆ ಅನಂತರ   ಕೋವಿಡ್  ನಿಂದ ಮನೆ ಮಂಜೂರು ಗೊಂಡಿಲ್ಲ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ರವಿರಾಜ ರೈ ಸಜಂಕಾಡಿ ಕೋವಿಡ್ ಮಹಾಮಾರಿ ರೋಗ ಬಂದು ಒಂದು ವರ್ಷ ಕ್ರಿಯಾ ಯೋಜನೆ ಮಾಡಿ ಮೂರು ವರ್ಷ ಕಳೆಯಿತು ಮನೆ ಕಟ್ಟಲು ಅಡಿಪಾಯ ಹಾಕಿದವರು ಏನು ಮಾಡಬೇಕು ಎಂದು ಪ್ರಶ್ನಿಸಿದರು  ಇವರೊಂದಿಗೆ ಸದಸ್ಯೆ ಕಲಾವತಿ ಎಸ್ ಗೌಡ ಪಟ್ಲಡ್ಕ ಧ್ವನಿ ಗೂಡಿಸಿದರು ಬಳಿಕ  ಈ  ಬಗ್ಗೆ ಚರ್ಚಿಸಿ ಸರ್ವಾನುಮತದಿಂದ  ಸರ್ಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ವಸ್ತು ಸ್ಥಿತಿ ರಸ್ತೆ ನಿರ್ಮಾಣ ಅಗಲಿ:-
ಈಶ್ವರಮಂಗಲ – ಸುಳ್ಯಪದವು ರಸ್ತೆ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 5 ಕೋಟಿ ಅನುದಾದಲ್ಲಿ ಕಾಮಗಾರಿ ಪ್ರಗತಿ ಹಂತದಲ್ಲಿದ್ದು  ಕಾಮಗಾರಿ ಸಂದರ್ಭದಲ್ಲಿ  ಚರಂಡಿ ನೀರು ಹರಿದು ಹೋಗುವ ಅವಶ್ಯಕತೆ ಇರುವ ಕಡೆ ಮೋರಿ ನಿರ್ಮಾಣ ಆಗಿಲ್ಲ  ಪಂಚಾಯತ್ ಪ್ರತಿನಿಧಿಗಳು ಸಲಹೆ ನೀಡಲು ಗುತ್ತಿಗೆದಾರರಿಗೆ ಕರೆ ಮಾಡಿ ಬರುವಂತೆ ಹೇಳಿದ್ದರು ಹೇಳಿದ ದಿವಸ ಬರುವುದಿಲ್ಲ. ಹೋಗಿಲ್ಲಿ ಸದಸ್ಯರ ಸಲಹೆ ಬೇಕಿಲ್ಲದ್ರೂ ವಸ್ತು ಸ್ಥಿತಿ ನೋಡಿ ಕೊಂಡು ಕೆಲಸ ಮಾಡಬಹುದಾಲ್ವಾ ಎಂದು ಸದಸ್ಯ ರವಿರಾಜ ರೈ ಸಜಂಕಾಡಿ ಸಭೆಯ ಗಮನಕ್ಕೆ ತಂದರು.  ಈ ಬಗ್ಗೆ  ಅವಶ್ಯಕತೆ ಇರುವ ಕಡೆ ನೂರು ಮೀಟರ್ ಅಂತರದಲ್ಲಿ ಮೋರಿ ರಚನೆ ಮಾಡುವಂತೆ ಪಿಡಬ್ಲ್ಯೂಡಿ ಇಂಜಿನಿಯರ್ ಬರೆಯಲು ನಿರ್ಣಯ ಮಾಡಲಾಯಿತು.
 ಪಡುವನ್ನೂರು ಗ್ರಾಮದ ಕೆಲಂದೂರು ಬಳಿ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿದ ಬಗ್ಗೆ ಸರ್ವೆಮಾಡಲು ತೀರ್ಮಾನಿಸಲಾಯಿತು.
ಪಟ್ಟೆ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ತೆರವು ಪಡಿಸುವಂತೆ ಸಾಮಾಜಿಕ ಅರಣ್ಯ ಇಲಾಖೆಗೆ ಹಾಗೂ ವಲಯ ಅರಣ್ಯ ಇಲಾಖೆಗೆ ಬರೆಯಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸದಸ್ಯರಾದ ವೆಂಕಟೇಶ್ ಸುಳ್ಯಪದವು, ಕುಮಾರ ಅಂಬಟೆಮೂಲೆ, ಸವಿತಾ ನೆರೋತ್ತಡ್ಕ, ಸುಶೀಲಾ ಪಕ್ಯೊಡ್, ರವಿಚಂದ್ರ ಸಾರೆಪ್ಪಾಡಿ, ದಮಯಂತಿ ಕೆಮ್ಮನಡ್ಕ, ಧರ್ಮೇಂದ್ರ ಪದಡ್ಕ, ಸುಜಾತ ಎಂ,  ಪುಷ್ಪವತಿ,, ವಸಂತ ಗೌಡ  ಪೆರೀಗೇರಿ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಉಪಸ್ಥಿತರಿದ್ದರು.
ಗ್ರಾ.ಪಂ ಗುಮಾಸ್ತ ಜಯಾಪ್ರಸಾದ್ ರೈ ಕುತ್ಯಾಳ ಸ್ವಾಗತಿಸಿ  ಪಿಡಿಒ ವಸೀಮ ಗಂಧದ ವಂದಿಸಿದರು ಸಿಬ್ಬಂದಿಗಳಾದ ಸುಕನ್ಯ, ಶಾರದಾ, ಹೇಮಾವತಿ, ಲೀಲಾವತಿ ಹಾಗೂ ಪ್ರೀಯಾ ಸಹಕಾರಿಸಿದರು..
ಕೋವಿಡ್ ಸಂದರ್ಭದಲ್ಲಿ ಗ್ರಾ.ಪಂ ವ್ಯಾಪ್ತಿಯ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮದಲ್ಲಿ ಯಾವುದೇ ಸಭೆ ಸಮಾರಂಭಗಳನ್ನು ರದ್ದು ಮಾಡಲಾಗಿದೆ. ಕದ್ದು ಮುಚ್ಚಿ ಯಾವುದೇ ಸಭೆ ಸಮಾರಂಭಗಳನ್ನು ಮಾಡಿದ್ದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ
ಪಿಡಿಒ ವಸೀಮ ಗಂಧದ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.