ಪುರುಷೋತ್ತಮ ಗೌಡ ಪನ್ಯಾಡಿ ಅವರ 60ನೇ ಹುಟ್ಟುಹಬ್ಬ(ಷಷ್ಠಬ್ಧಿ) ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಬಲ್ಯ ಗ್ರಾಮದ ಪನ್ಯಾಡಿ ನಿವಾಸಿ ಪುರುಷೋತ್ತಮ ಗೌಡ ಅವರ ೬೦ನೇ ಹುಟ್ಟುಹಬ್ಬ(ಷಷ್ಠಬ್ಧಿ) ಆಚರಣೆ ಇತ್ತಿಚ್ಚೆಗೆ ನಡೆಯಿತು.
ಲಾಕ್‌ಡೌನ್ ಹಿನ್ನಲೆಯಲ್ಲಿ ಕುಟುಂಬಸ್ಥರೊಂದಿಗೆ ಹುಟ್ಟುಹಬ್ಬವನ್ನು ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು, ದೇವರ ಪೂಜೆಯ ಬಳಿಕ ಕೇಕ್ ಕತ್ತರಿಸುವ ಮೂಲಕ ಕುಟುಂಬಸ್ಥರೊಂದಿಗೆ ಪುರುಷೋತ್ತಮ ಗೌಡರು ತಮ್ಮ ಜೀವನದ ಪ್ರಮುಖ ಘಟ್ಟ ೬೦ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮಾತೃಶ್ರೀಯವರಾದ ನೀಲಮ್ಮ ಕುಟುಂಬದ ಪ್ರಮುಖರಾದ ಚೆನ್ನಪ್ಪ ಗೌಡ ಪನ್ಯಾಡಿ, ನಾಗರಾಜ ಪನ್ಯಾಡಿ, ರಾಧಾಕೃಷ್ಣ ಪನ್ಯಾಡಿ, ಪುರುಷೋತ್ತಮ ಗೌಡರ ಪತ್ನಿ ಜಯ ಮಕ್ಕಳಾದ ಕು.ವಂದನಾ ಪಿ. ಕು| ಸಹನ ಪಿ. ಮತ್ತು ದೀಪಕ್ ಗೌಡ ಸೇರಿದಂತೆ ಸಹೋದರ, ಸಹೋದರಿಯರು ಸೇರಿದಂತೆ ಹಲವಾರು ಬಂಧು-ಮಿತ್ರರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಾಮಾಜಿಕ, ಧಾರ್ಮಿಕ ಮುಂದಾಳು
೬೦ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ ಪುರುಷೋತ್ತಮ ಗೌಡ ಪನ್ಯಾಡಿಯವರು, ಧಾರ್ಮಿಕ, ಸಾಮಾಜಿಕ ಅಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ, ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಪ್ರಸ್ತುತ ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಂತೆಯೇ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಪುರುಷೋತ್ತಮ ಗೌಡರು, ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ, ವಲಯ ಮಟ್ಟದ ಉಪಾಧ್ಯಕ್ಷನಾಗಿ ಅಲ್ಲದೆ ಅಯೋದ್ಯೆಯ ಕರಸೇವೆಯಲ್ಲಿ ಭಾಗವಹಿಸಿ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದರು. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷನಾಗಿ, ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು. ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಪುರುಷೋತ್ತಮ ಗೌಡರು ೧೯೮೪-೮೫ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.