ಕೆಮ್ಮಿಂಜೆ ನಿವಾಸಿ ಅಲ್ಬರ್ಟ್ ವರ್ಗೀಸ್ ನಿಧನ – ಪುತ್ತೂರು ಶಾಸಕರ ವಾರ್‌ರೂಮ್ ಮೂಲಕ ಅಂತ್ಯಸಂಸ್ಕಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಮ್ಮಿಂಜೆ ನಿವಾಸಿ ಅಲ್ಬರ್ಟ್ ವರ್ಗೀಸ್(66ವ) ಎಂಬವರು ಕೋವಿಡ್‌ನಿಂದಾಗಿ ಜೂ.3ರಂದು ನಸುಕಿನ ಜಾವ ಮಂಗಳೂರು ಫಾದರ್‌ಮುಲ್ಲರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆಯಾ ಸಮುದಾಯದ ಧರ್ಮದಂತೆ ಮೃತ ದೇಹದ ಅಂತ್ಯಸಂಸ್ಕಾರ ಮಾಡಿದ ಪುತ್ತೂರು ಶಾಸಕರ ವಾರ್‌ರೂಮ್.

ಅಲ್ಬರ್ಟ್ ವರ್ಗೀಸ್ ಅವರು ಅನಾರೋಗ್ಯದಿಂದ ಮಂಗಳೂರು ಫಾದರ್‌ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಅವರ ಕೋವಿಡ್ ವರದಿ ಪಾಸಿಟಿವ್ ಬಂದಿದ್ದು, ಚಿಕಿತ್ಸೆಗೆ ಸ್ಪಂಧಿಸದ ಅವರು ಮೃತಪಟ್ಟಿದ್ದಾರೆ. ಅವರ ಮೃತ ದೇಹವನ್ನು ಜೂ.3ರಂದು ಬೆಳಿಗ್ಗೆ ಪುತ್ತೂರಿಗೆ ತಂದು ಕೆಮ್ಮಿಂಜೆ ಗ್ರಾಮದ ಸೀಮೆತರಿಯಲ್ಲಿ ಅವರ ಸಮುದಾಯದ ಧಪನ ಭೂಮಿಯಲ್ಲಿ ಅವರ ಅಂತ್ಯಸಂಸ್ಕಾರನ್ನು ಮಾಡಲಾಯಿತು.

ಶಾಸಕರ ವಾರ್‌ರೂಮ್ ಮೂಲಕ ದಪನ ಕಾರ್ಯ:
ಅಲ್ಬರ್ಟ್ ವರ್ಗೀಸ್ ಅವರಿಗೆ ಕೋವಿಡ್ ದೃಢಗೊಂಡಿದ್ದರಿಂದ ಅವರ ಧಪನ ಕಾರ್ಯವನ್ನು ಶಾಸಕರ ವಾರ್‌ರೂಮ್‌ನ ತುರ್ತು ಸೇವಾ ವಿಭಾಗದ ಪಿ.ಜಿ. ಜಗನ್ನಿವಾಸ ರಾವ್ ಅವರ ನೇತೃತ್ವದಲ್ಲಿ ರಾಜೇಶ್ ಬನ್ನೂರು, ಕಿರಣ್‌ಶಂಕರ್ ಮಲ್ಯ, ನಾಗೇಶ್ ಪ್ರಭು ಅವರು ಕೋವಿಡ್ ನಿಯಮದಂತೆ ಪಿಪಿಇ ಕಿಟ್ ಧರಿಸಿ ದಫನ ಕಾರ್ಯ ಮಾಡಿದರು. ಶಾಸಕರ ವಾರ್‌ರೂಮ್‌ನ ಆರ್.ಸಿ.ನಾರಾಯಣ, ನಗರಸಭಾ ಸದಸ್ಯ ಬಾಲಚಂದ್ರ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.