ಮಮತೆ ಮರೆತ ಮಮತಾ-ಪಶ್ಚಿಮ ಬಂಗಾಳ ಹಿಂದೂಗಳ ರಕ್ಷಣೆಗಾಗಿ ದೈವದ ಮೊರೆ ಹೋದ ಯುವಕರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ : ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯ ಬಳಿಕ ಸರಕಾರಿ ಪ್ರಾಯೋಜಿತ ಹಿಂಸಾಚಾರದಲ್ಲಿ ಅಮಾಯಕ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ, ಅಲ್ಲಿನ ಜನತೆಗೆ ಸೂಕ್ತ ರಕ್ಷಣೆಯನ್ನು ಒದಗಿಸುವಂತಾಗಲು ದೈವೀ ಶಕ್ತಿಯು ಪ್ರಭಾವ ಬೀರಬೇಕೆಂದು ಪ್ರಾರ್ಥಿಸಿ ಹಿರೆಬಂಡಾಡಿ ಗ್ರಾಮದ ಯುವಕರು ಕೊರಗಜ್ಜ ದೈವಸ್ಥಾನದಲ್ಲಿ ಪ್ರಾರ್ಥನೆ ನಡೆಸಿದ ಘಟನೆ ವರದಿಯಾಗಿದೆ.

ಯುವ ಸಾಮಾಜಿಕ ಮುಂದಾಳು ಕಿರಣ್ ಹರಿನಗರ ನೇತೃತ್ವದಲ್ಲಿ ಯುವಕರ ತಂಡವೊಂದು ಹಿರೆಬಂಡಾಡಿ ಗ್ರಾಮದ ನೆಹರುತೋಟ ಎಂಬಲ್ಲಿನ ಕೊರಗಜ್ಜನ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತವನ್ನು ನೀಡಲಿಲ್ಲವೆಂದು ಅಲ್ಲಿನ ಆಡಳಿತಾರೂಢ ಮಮತಾ ಬ್ಯಾನರ್ಜಿಯ ಟಿಎಂಸಿ ಪಕ್ಷದ ಪ್ರಾಯೋಜಕತ್ವದಲ್ಲಿ ಹಿಂದೂಗಳ ಮೇಲೆ ವ್ಯಾಪಕ ದೌರ್ಜನ್ಯ ನಡೆಸಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಅಸಹಾಯಕತೆಯನ್ನು ಪ್ರದರ್ಶಿಸಿರುವುದು, ೭೦೦೦ ಕ್ಕೂ ಮಿಕ್ಕ ಪ್ರಕರಣಗಳು ನಡೆದಿದ್ದರೂ ಯಾವುದೇ ಪ್ರಕರಣಗಳು ದಾಖಲಾಗದಂತೆ ನೋಡಿಕೊಂಡಿರುವುದು , ಒಟ್ಟಾರೆ ಗೂಂಡಾ ರಾಜ್ಯದ ರೀತಿಯಲ್ಲಿ ಹಿಂದೂಗಳ ಮೇಲಿನ ಆಕ್ರಮಣವನ್ನು ಅಲ್ಲಿನ ಆಡಳಿತ ವ್ಯವಸ್ಥೆ ಪೂರ್ವಯೋಜಿತವಾಗಿ ನಡೆಸಿರುವುದನ್ನು ದೈವದ ಮುಂದೆ ಪ್ರಸ್ತಾಪಿಸಿದ ಯುವಕರು, ಈ ಮಣ್ಣಿನಲ್ಲಿ ನೆಲೆ ನಿಂತ ಎಲ್ಲಾ ದೈವೀ ಶಕ್ತಿಗಳು ತಮ್ಮ ತಮ್ಮ ಪ್ರಭಾವವನ್ನೂ ಬೀರಬೇಕು. ಪಶ್ಚಿಮ ಬಂಗಾಳದ ಆಡಳಿತಗಾರರಿಗೆ ಪ್ರಜಾ ರಕ್ಷಣೆಯ ಕಾರ್ಯದಲ್ಲಿ ಸನ್ಮತಿಯನ್ನು ನೀಡಬೇಕು. ದುಷ್ಕೃತ್ಯವೆಸಗಿದವರಿಗೆ ದೈವೀ ಶಕ್ತಿಯೇ ತಕ್ಕ ಶಿಕ್ಷೆಯನ್ನು ನೀಡಿ , ಸ್ವರ್ಗ ಸದೃಶ್ಯ ಭವ್ಯ ಭಾರತವನ್ನು ನಿರ್ಮಿಸಲು ಪ್ರತಿ ಭಾರತೀಯನ ಮನಸ್ಸನ್ನು ಸತ್ ಪಥದಲ್ಲಿ ಮುನ್ನಡೆಸಬೇಕೆಂದು ಪ್ರಾರ್ಥಿಸಲಾಯಿತು.

ಆಡಳಿತಗಾರರ ರಾಕ್ಷಸೀ ಕೃತ್ಯದಿಂದ ನಲುಗಿರುವ ಪಶ್ಚಿಮ ಬಂಗಾಳದ ದೇಶಭಕ್ತರ ರಕ್ಷಣೆಗಾಗಿ ಪ್ರತಿ ಗ್ರಾಮ ಗ್ರಾಮದಲ್ಲೂ ದೈವ – ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕೆಂದು ವಿನಂತಿಸಿರುವ ಈ ಯುವಕ ನಡೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಶ್ಲಾಘನೆಗೆ ತುತ್ತಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.