ಕೊರೋನಾ ಮುಕ್ತ ಗ್ರಾಮವಾಗಿ ಪಾಣಾಜೆ ಗ್ರಾಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಸರ್ವರ ಸಹಕಾರದಿಂದ ಇದು ಸಾಧ್ಯವಾಗಿದೆ – ಭಾರತಿ ಭಟ್
ನಿಡ್ಪಳ್ಳಿ: ಕೊರೋನಾ ಎರಡನೇ ಅಲೆಯಿಂದ ಒಮ್ಮೆ ತತ್ತರಿಸಿದ ಪಾಣಾಜೆ ಗ್ರಾಮ  ಸೋಂಕು ದೃಢ ಪಟ್ಟ ಎಲ್ಲರೂ ಗುಣಮುಖರಾಗಿದ್ದು  ಇದೀಗ ಪಾಣಾಜೆ ಗ್ರಾಮದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಗ್ರಾಮದ ಒಟ್ಟು ಇಪ್ಪತ್ತೆರಡು ಮಂದಿ, ಸಾಂಕ್ರಾಮಿಕ ರೋಗ ಕೊರೋನಾದ ಎರಡನೇ ಅಲೆಯ ಕಪಿಮುಷ್ಠಿಗೆ ಸಿಲುಕಿದ್ದರು. ಆದರೆ ಇವರಲ್ಲಿ ಯಾರೂ ಕೂಡ ಗಂಭೀರ ಪರಿಸ್ಥಿತಿಯನ್ನು ತಲುಪದೆ ಸಣ್ಣ ಮಟ್ಟಿನ ಬಾಧಿತರಾಗಿ ಶೀಘ್ರವಾಗಿ ಗುಣಮುಖರಾದದ್ದು ಆಶಾದಾಯಕ ವಿಷಯ. ಇಪ್ಪತ್ತೆರಡು ಮಂದಿ ಗುಣಮುಖರಾಗಿ ತಮ್ಮ ಕ್ವಾರಂಟೈನ್ ಅವಧಿಯನ್ನೂ ಪೂರ್ಣಗೊಳಿಸಿ ಸೋಂಕಿನ ವಿರುದ್ಧ ಹೋರಾಟದಲ್ಲಿ ಜಯಶಾಲಿಗಳಾಗಿದ್ದು ಇದರಿಂದ ಕೋವಿಡ್ ಕಾರ್ಯಪಡೆ ಸಂತಸ ವ್ಯಕ್ತ ಪಡಿಸಿದೆ
ಕಾರ್ಯಪಡೆಯ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ     
ಪಾಣಾಜೆ ಗ್ರಾಮವನ್ನು ಕೋವಿಡ್ ಮುಕ್ತಗೊಳಿಸುವಲ್ಲಿ ನಮ್ಮ ಕೋವಿಡ್ ಕಾರ್ಯಪಡೆ  ಸಮಿತಿಯ ಎಲ್ಲಾ ಸದಸ್ಯರ ಉತ್ತಮ ಸಹಕಾರದಿಂದ ಸಾಧ್ಯವಾಯಿತು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೂಕ್ತ ಮಾರ್ಗದರ್ಶನ ನೀಡಿ ನಮ್ಮನ್ನು ಎಚ್ಚರಿಸುತ್ತಿದ್ದ ಪುತ್ತೂರು ಶಾಸಕರು ಮತ್ತು ನೊಡೆಲ್ ಅಧಿಕಾರಿಯವರು, ಗ್ರಾಮ ಪಂಚಾಯತ್ ನ ಎಲ್ಲಾ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಸಿಬ್ಬಂದಿಗಳು,  ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಕಿರಿಯ ಅರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸೇವಾಭಾರತಿಯ ಸದಸ್ಯರು, ಶಾಲಾ ಶಿಕ್ಷಕರು, ಪೊಲೀಸ್ ಸಿಬ್ಬಂದಿಗಳು ಹಾಗೂ ಇತರ ಎಲ್ಲ ಕಾರ್ಯಪಡೆ ಸಮಿತಿಯ ಸದಸ್ಯರ ಪಾತ್ರ ಬಹಳ ಹಿರಿದಾಗಿದೆ. ಇವರೆಲ್ಲರ ಅತ್ಯುತ್ತಮ ಸಹಕಾರವೇ ಇಂದು ಪಾಣಾಜೆ ಗ್ರಾಮ ಕೋವಿಡ್ ಮುಕ್ತಗೊಳ್ಳಲು ಕಾರಣವಾಗಿದೆ.
ಕೋವಿಡ್  ಸಂಕಷ್ಟ ಸಮಯದಲ್ಲಿ ಹಲವು ಸಂಘ ಸಂಸ್ಥೆಗಳೂ ಹಾಗೂ ಕೆಲವರು ವೈಯುಕ್ತಿಕವಾಗಿಯೂ ಸಹಾಯ ಹಸ್ತವನ್ನು ಚಾಚಿದ್ದಾರೆ. ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘ, ಲಯನ್ಸ್ ಕ್ಲಬ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೀಗೆ ಹಲವು ಸಂಘ ಸಂಸ್ಥೆಗಳು ಸಂಕಷ್ಟದಲ್ಲಿದ್ದಂತಹ ಸೋಂಕಿತರಿಗೆ ,ಅಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ , ಆರೋಗ್ಯ ಇಲಾಖೆಯ ಸಹಾಯಕಿಯವರಿಗೆ  ದಿನಸಿ ಸಾಮಗ್ರಿಗಳ ಕಿಟ್ ಹಾಗೂ ಇನ್ನಿತರ ವಸ್ತುಗಳನ್ನು ವಿತರಿಸಿ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಚಂಬರಕಟ್ಟ ಸೀತಾ ಉದಯಶಂಕರ ಭಟ್ ಇವರು ವೈಯಕ್ತಿಕವಾಗಿ  ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದ್ದಾರೆ.
ಕೋವಿಡ್ ಮುಕ್ತಗೊಳಿಸಲು ಸೇವಾಭಾರತಿ ಸದಸ್ಯರ ಪಾತ್ರವೂ ಬಹಳ ದೊಡ್ಡದು. ಸೋಂಕಿತರನ್ನು ಕೋವಿಡ್ ಸೆಂಟರಿಗೆ ಕರೆದೊಯ್ಯುವಲ್ಲಿ ಹಾಗೂ ಇತರ ಸಂದರ್ಭದಲ್ಲಿ ಕೆಲವರಿಗೆ ತುರ್ತು ರಕ್ತದ ಅವಶ್ಯಕತೆ ಇದ್ದಾಗ ತುರ್ತಾಗಿ ಬಂದು ಸಹಕರಿಸಿದ್ದಾರೆ. ಗ್ರಾಮದ ಜನತೆ ಸರಕಾರದ ಸೂಚನೆಗಳನ್ನು ಪಾಲಿಸಿಕೊಂಡು ರೋಗ ಹರಡದಂತೆ‌ ಎಚ್ಚರಿಕೆ ವಹಿಸಿದ್ದೂ ಮುಖ್ಯ ಕಾರಣವಾಗಿದ್ದು ಎಲ್ಲ ಜನತೆಗೂ ರಿಯಾಗಿದ್ದೇವೆ. ಅಲ್ಲದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಇನ್ನೂ ಹಲವು ವ್ಯಕ್ತಿಗಳಿದ್ದು ಪ್ರತಿಯೊಬ್ಬರಿಗೂ ಪಂಚಾಯತ್ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು  ಭಾರತಿ ಭಟ್ ತಿಳಿಸಿದ್ದಾರೆ.
ಇನ್ನೂ ಎಚ್ಚರಿಕೆ ಅಗತ್ಯ
ಸೋಂಕು ಮುಕ್ತ ಗ್ರಾಮವೆಂದು ತಾತ್ಸಾರ ಮಾಡದೆ ನಾವು ಎಚ್ಚರ ವಹಿಸಿ ಅನಾವಶ್ಯಕವಾಗಿ ಮನೆಯಿಂದ ಹೊರ ಹೋಗದೆ ಮನೆಯಲ್ಲೇ  ಸುರಕ್ಷಿತವಾಗಿದ್ದು , ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸೋಂಕು ಬಾರದಂತೆ ಎಚ್ಚರಿಕೆ ವಹಿಸುವಂತೆ ಅವರು ಜನರಲ್ಲಿ ಮನವಿ ಮಾಡಿ ಕೊಂಡಿದ್ದಾರೆ.ನಿರ್ಲಕ್ಷ್ಯ ಮಾಡದೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧ್ಯಕ್ಷರು ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.