ಪುತ್ತೂರು ಎಸ್ಸೆಸ್ಸಫ್ ಕ್ಯಾಂಪಸ್ ವತಿಯಿಂದ ಸಸಿ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ರಾಜ್ಯದಾದ್ಯಂತ ” ಉಸಿರಿಗಾಗಿ ಹಸಿರು ” ಎಂಬ ಘೋಷವಾಕ್ಯದಡಿಯಲ್ಲಿ ಪ್ರತಿಯೊಂದು ಶಾಖಾ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ.
ಈ ನಿಟ್ಟಿನಲ್ಲಿ ಎಸ್ಸೆಸ್ಸಫ್ ಕ್ಯಾಂಪಸ್ ಪುತ್ತೂರು ವತಿಯಿಂದ ಡಿವಿಶನ್ ವ್ಯಾಪ್ತಿಯ ಶಾಖೆಗಳಿಗೆ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಕೋವಿಡ್ ನಿಯಮಗಳನ್ನು ಅನುಸರಿಸಿ ಸರಳವಾಗಿ ನಡೆಸಲಾಯಿತು.
ಅಸ್ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ ಯವರು ದುವಾದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸಫ್ ಕ್ಯಾಂಪಸ್ ಕಾರ್ಯದರ್ಶಿ ಶಿಹಾಬುರ್ರಹ್ಮಾನ್ ಹಸನ್ ನಗರ, ಎಸ್ಸೆಸ್ಸಫ್ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ, ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಅಡ್ಕ, ಕಾರ್ಯದರ್ಶಿ ಹಂಝ ಸ‌ಅದಿ ಕೂರತ್, ಶಿಹಾಬುದ್ದೀನ್ ಸಖಾಫಿ ಈಶ್ವರಮಂಗಳ ಸದಸ್ಯರಾದ ನೌಶಾದ್ ಕೂರತ್, ಎಸ್‌ವೈಎಸ್ ಸೆಂಟರ್ ಇಶಾಬ ಕಾರ್ಯದರ್ಶಿ ಹಮೀದ್ ಕಬಕ, ಎಸ್ಸೆಸ್ಸಫ್ ಪುತ್ತೂರು ಸೆಕ್ಟರ್ ಅಧ್ಯಕ್ಷ ಅಬ್ದುಲ್ ಖಾದರ್ ಸಖಾಫಿ, ಕಾರ್ಯದರ್ಶಿ ಅಶ್ರಫ್ ಕಬಕ, ಕುಂಬ್ರ ಸೆಕ್ಟರ್ ಕಾರ್ಯದರ್ಶಿ ಇರ್ಶಾದ್ ಗಟ್ಟಮನೆ, ಈಶ್ವರಮಂಗಳ ಸೆಕ್ಟರ್ ಕಾರ್ಯದರ್ಶಿ ಸಲೀಂ ಝುಹ್ರಿ, ಮಾಣಿ ಸೆಕ್ಟರ್ ಕಾರ್ಯದರ್ಶಿ ನೌಫಲ್ ಪೇರಮೊಗರು, ರೆಂಜ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಬಿಲಾಲ್ ಡೆಮ್ಮಂಗರ, ಸದಸ್ಯ ಮುನೀರ್ ಡೆಮ್ಮಂಗರ, ಪುತ್ತೂರು ಕ್ಯಾಂಪಸ್ ಕಾರ್ಯದರ್ಶಿ ಬಾತಿಶ್ ಬನ್ನೂರು, ಪುತ್ತೂರು ಸೆಕ್ಟರ್ ಸದಸ್ಯರಾದ ಝಾಹಿರ್ ಬನ್ನೂರು, ಜಬೀರ್ ಬನ್ನೂರು, ಫವಾಝ್ ಕಬಕ, ಹಕ್,  ಸಹದ್ ಹಸನ್ ನಗರ, ಇಲ್ಯಾಸ್ ಕಬಕ ಸಹಿತ ಹಲವರು ಉಪಸ್ಥತರಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.