ಪುತ್ತೂರು: ಸುದ್ದಿಯಿಂದ ಜನಸೇವೆಯ ಅನಾವರಣ ಸರಣಿ ಕಾರ್ಯಕ್ರಮದ ಅಂಗವಾಗಿ ಬ್ಯೂಟಿಪಾರ್ಲರ್ ಅಸೋಸಿಯೇಷನ್ನ ಪ್ರಮುಖರ ಜೊತೆಗೆ ನೇರ ಫೋನ್ ಇನ್ ಕಾರ್ಯಕ್ರಮವು ಸುದ್ದಿ ಕೇಬಲ್ ಚಾನೆಲ್, ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಪೇಜ್ನಲ್ಲಿ ಪ್ರಸಾರಗೊಂಡಿತು.
ಕಾರ್ಯಕ್ರಮದಲ್ಲಿ ಮಂಗಳೂರು ಲೇಡಿಸ್ ಬ್ಯೂಟಿ ಅಸೋಸಿಯೇಷನ್ ಪುತ್ತೂರು ವಲಯದ ಪ್ರಮುಖರಾದ ಐಶ್ವರ್ಯ ಚಂದ್ರಶೇಖರ್ ಮತ್ತು ಮಾಧವಿ ಮನೋಹರ್ ರೈ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಲಾಕ್ಡೌನ್ನಿಂದ ಉದ್ಯಮಿಗಳು ಮತ್ತು ಉದ್ಯೋಗಿಗಳು ಅನುಭವಿಸುತ್ತಿರುವ ಕಷ್ಟನಷ್ಟಗಳು, ಸಮಸ್ಯೆಗಳು, ಗ್ರಾಹಕರಿಗೆ ಎದುರಾಗಿರುವ ತೊಂದರೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಯಿತು. ಕಾರ್ಯಕ್ರಮದ ಅಂತಿಮ ಭಾಗದಲ್ಲಿ ಶಾಸಕ ಸಂಜೀವ ಮಠಂದೂರು ಅವರನ್ನು ಸಂಪರ್ಕಿಸಿ ಅಸೋಸಿಯೇಷನ್ನ ಪ್ರಮುಖರು ತಮ್ಮ ಪ್ರಮುಖ ಬೇಡಿಕೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ಈ ಬಗ್ಗೆ ಸಂಬಂಧಿತರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಿರೂಪಕ ಗೌತಮ್ ಶೆಟ್ಟಿ ಮತ್ತು ವೆಬ್ಸೈಟ್ ವರದಿಗಾರರಾದ ಚೈತ್ರಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿಯಿಂದ ಜನಸೇವೆಯ ಅನಾವರಣ: ಬ್ಯೂಟಿ ಪಾರ್ಲರ್ ಮಾಲಕರೊಂದಿಗೆ ನೇರಸಂವಾದ…
Supper programme from suddi puttur