ಶಾಂತಿನಗರ-ಕರ್ವೇಲು ರಸ್ತೆಯಲ್ಲಿನ ವಿದ್ಯುತ್ ತಂತಿಯ ಸಮಸ್ಯೆ ಪರಿಹರಿಸಿದ ಮೆಸ್ಕಾಂ ಅಧಿಕಾರಿಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮಾಧ್ಯಮದ ಮೂಲಕ ಮಾಹಿತಿ ಪಡೆದುಕೊಂಡು ಸಮಸ್ಯೆ ಪರಿಹರಿಸುವ ಕಾರ್ಯ ಶ್ಲಾಘನೀಯ-ಯು.ಜಿ.ರಾಧ

ಪುತ್ತೂರು: ಸುದ್ದಿ ಚಾನೆಲ್ ನಲ್ಲಿ ನಡೆಸಲಾಗಿದ್ದ ಮೆಸ್ಕಾಂ‌ ಅಧಿಕಾರಿಗಳೊಂದಿಗಿನ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ಯಿಯ ಶಾಂತಿನಗರ-ಕರ್ವೇಲು ರಸ್ತೆಯಲ್ಲಿನ ವಿದ್ಯುತ್ ತಂತಿಗಳು ತೀರಾ ಕೆಳ ಭಾಗದಲ್ಲಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದೆ. ಇದಕ್ಕೆ ಕೂಡಲೇ ಸ್ಪಂದಿಸಿರುವ ಸುದ್ದಿ ನೇರ ಪ್ರಸಾರದಲ್ಲಿ ಭಾಗವಹಿಸಿದ್ದ ಮೆಸ್ಕಾಂ ಅಧಿಕಾರಿಗಳಾದ ಶಿಲ್ಪಾ ಶೆಟ್ಟಿ ಮತ್ತು ರಾಮಚಂದ್ರರವರು ಇಲ್ಲಿ ಕೆಳ ಭಾಗದಲ್ಲಿದ್ದ ವಿದ್ಯುತ್ ತಂತಿಗಳನ್ನು ಮೇಲ್ಮಟ್ಟಕ್ಕೇರಿಸುವ ಕಾರ್ಯ ನಡೆಸಿದ್ದಾರೆ.

ಈ ಮೂಲಕ ಅಪಾಯ ಸಂಭವಿಸುವುದನ್ನು ತಪ್ಪಿಸಿದ್ದಾರೆ. ಮಾಧ್ಯಮದ ಸ್ಟುಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ತಿಳಿದುಕೊಂಡು ಅದನ್ನು ಪರಿಹರಿಸಿಕೊಡುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಂತಿನಗರ ಶ್ರೀ‌ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರೂ ಆಗಿರುವ ಉಪ್ಪಿನಂಗಡಿ ಶ್ರೀರಾಮ ಶಾಲೆಯ ಸಂಚಾಲಕ ಯು.ಜಿ.ರಾಧಾರವರು ಹೇಳಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.