ಸುದ್ದಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸಂಕಷ್ಟದಲ್ಲಿರುವ ಸದಸ್ಯರಿಗೆ ಅಗತ್ಯ ಆಹಾರ ಸಾಮಾಗ್ರಿ ವಿತರಣೆ – ಶಾಸಕ ಸಂಜೀವ ಮಠಂದೂರು ಅವರ ಮೂಲಕ‌ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆಡು ಮುಟ್ಟದ ಸೊಪ್ಪಿಲ್ಲ, ʼಸುದ್ದಿ‌ʼ ಮುಟ್ಟದ ಕ್ಷೇತ್ರವಿಲ್ಲ – ಮಠಂದೂರು

ಪುತ್ತೂರು: ಕೋವಿಡ್ -19 ನಿಯಂತ್ರಣಕ್ಕೆ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಸುದ್ದಿ ಸೌಹಾರ್ದ ಸಹಕಾರ ಆಯ್ದ ಸದಸ್ಯರಿಗೆ ದಿನ ಬಳಕೆಯ ಅಗತ್ಯ ಆಹಾರದ ಸಾಮಾಗ್ರಿಗಳ ವಿತರಣಾ ಕಾರ್ಯ ಜೂ.4ರಂದು ಸಂಘದ ಕಚೇರಿಯಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಅವರು ಫಲಾನುಭವಿಗಳಿಗೆ ಆಹಾರದ ಕಿಟ್ ಗಳನ್ನು ಹಸ್ತಾಂತರಿಸಿದರು.

 

ಶಾಸಕ ಸಂಜೀವ ಮಠಂದೂರು ರವರು ಮಾತನಾಡಿ ಸುದ್ದಿ ಎಲ್ಲಾ ಕ್ಷೇತ್ರದ ವರದಿಯನ್ನು ಬಿತ್ತರಿಸುವ ಕೆಲಸ ಮಾಡುತ್ತಿದೆ. ಡಾ.ಯು ಪಿ ಶಿವಾನಂದ ಅವರು ಸರ್ವ ವ್ಯಾಪಿ ಸರ್ವಸ್ಪರ್ಶಿಯಾಗಿ ಸಮಾಜದಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಂಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಸುದ್ದಿ ಮುಟ್ಟದ ಕ್ಷೇತ್ರವಿಲ್ಲ ಎಂದು ಹೇಳಿ ಸುದ್ದಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುದ್ದಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಡಾ.ಯು.ಪಿ.ಶಿವಾನಂದ, ನಿರ್ದೇಶಕರಾದ ನ್ಯಾಯವಾದಿ ಎನ್ ಕೆ ಜಗನ್ನಿವಾಸ ರಾವ್, ಡಾ.ಜೆ ಸಿ ಅಡಿಗ ,ಸ್ವಾತಿ ಮಲ್ಲಾರ್, ಜಾನ್ ಕುಟಿನಾ, ಎ.ವಿ‌. ನಾರಾಯಣ, ರಾಜೇಶ್ ಎಮ್ ಎಸ್, ಶೇಷಪ್ಪ ಕಜೆಮಾರ್, ಫಾರುಕ್ ಶೇಕ್, ಸುದ್ದಿ ಚಾನೆಲ್ ನ ದಾಮೋದರ್ ಮತ್ತು ಸಂಘದ ಸಿಬ್ಬಂದಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಸ್ವಾಗತಿಸಿದರು. ಸುದ್ದಿ ಬಿಡುಗಡೆ ಮುಖ್ಯವರದಿಗಾರ ಸಂತೋಷ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.