HomePage_Banner
HomePage_Banner

ಉಪ್ಪಿನಂಗಡಿ: ನದಿಯಲ್ಲಿ ಹೂಳು ತುಂಬಿದ ದಿಬ್ಬ ಉಲ್ಬಣ – ಕೃತಕ ನೆರೆ ಸಾಧ್ಯತೆ, ತೆರವಿಗೆ ಆಗ್ರಹ, ಶಾಸಕರಿಂದ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1
  • ಶೀಘ್ರ ತೆರವಿಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ

ಉಪ್ಪಿನಂಗಡಿ: ನದಿಯ ಒಡಲಿನಲ್ಲಿ ಮರಳು ಮಿಶ್ರಿತ ಮಣ್ಣು, ಹೂಳು ತುಂಬಿಕೊಂಡಿದ್ದು, ಭಾರೀ ಗಾತ್ರದ ದಿಬ್ಬವಾಗಿದ್ದು, ಇದರಲ್ಲಿ ಕುರುಚಲು ಗಿಡದ ಪೊದೆಗಳು ಬೆಳೆದು ನದಿಯನ್ನು ವ್ಯಾಪಿಸಿರುವುದರಿಂದ ಮಳೆಗಾಲದಲ್ಲಿ ನದಿ ನೀರು ಸರಾಗವಾಗಿ ಹರಿಯಲಾಗದೆ ಕೃತಕ ನೆರೆ ಸಂಭವಿಸುವ ಸಾಧ್ಯತೆ ಇರುವ ಬಗೆಗಿನ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಟಂದೂರು ಸ್ಥಳ ಪರಿಶೀಲನೆ ನಡೆಸಿದರು.

ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ಮರಳು ಮಿಶ್ರಿತ ಮಣ್ಣಿನ ದಿಬ್ಬ ನಿರ್ಮಾಣವಾಗಿದ್ದು, ಅದರಲ್ಲಿ ಆಳೆತ್ತರದ ಕುರುಚಲು ಗಿಡಗಳು ಬೆಳೆದು ನದಿಯ ಒಡಲನ್ನು ಕಿರಿದಾಗಿಸಲು ಕಾರಣವಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಮಳೆಯ ನೀರು ಸರಾಗವಾಗಿ ಹರಿಯಲಾಗದೆ ನೆರೆ ಸಂಭವಿಸಲು ಸಾಧ್ಯವಿದೆ. ಈ ಕಾರಣಕ್ಕೆ ಹಿಟಾಚಿಯನ್ನು ಬಳಸಿ ನದಿ ಒಡಲ ದಿಬ್ಬಗಳನ್ನು ತೆರವುಗೊಳಿಸಬೇಕಾಗಿದೆ.

ಅದಾಗ್ಯೂ ಸರ್ಕಾರದ ಮರಳು ನೀತಿ ದ.ಕ. ಜಿಲ್ಲೆಯ ಪಾಲಿಗೆ ಹೊಂದಾಣಿಕೆಯಾಗದ ಕಾರಣ ನದಿಗಳಲ್ಲಿ ಮರಳು ಯಥೇಚ್ಚಾ ಸಂಗ್ರಹಣೆಗೊಂಡು ಇಂತಹ ಸಮಸ್ಯೆಗಳು ಸೃಷ್ಠಿಯಾಗುತ್ತಿದೆ. ಈ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕರು ತಿಳಿಸಿದರು.

ಶಾಸಕರ ಭೇಟ, ಪರಿಶೀಲನೆ ಸಂದರ್ಭದಲ್ಲಿ ತಹಸೀಲ್ದಾರ್ ರಮೇಶ್ ಬಾಬು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಢಾರಿ, ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಪ್ರಮೋದ್ ಕುಮಾರ್, ಕಂದಾಯ ನಿರೀಕ್ಷಕ ವಿಜಯ ವಿಕ್ರಮ, ಗ್ರಾಮಕರಣಿಕ ಹರೀಶ್, ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ಜಯಂತ ಪೊರೋಳಿ, ಕೈಲಾರ್ ರಾಜಗೋಪಾಲ ಭಟ್ ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.