ಕೆಯ್ಯೂರು ಗ್ರಾ.ಪಂ ಅಂಗಳದಲ್ಲಿ ದನದ ಕಾಲು ಪತ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್‌ನ ಅಂಗಳದಲ್ಲಿ ದನದ ಕಾಲೊಂದು ಪತ್ತೆಯಾಗಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಜೂ.04 ರಂದು ಬೆಳಿಗ್ಗೆ ಗ್ರಾಪಂ ಸಿಬ್ಬಂದಿಯೋರ್ವರು ಕಛೇರಿ ತೆರೆಯಲು ಬಂದಾಗ ಕಛೇರಿಯ ಎದುರು ಅಂಗಳದಲ್ಲಿ ಅರ್ಧದಿಂದ ತುಂಡರಿಸಲ್ಪಟ್ಟ ದನದ ಕಾಲು ಬಿದ್ದುಕೊಂಡಿತ್ತು ಎನ್ನಲಾಗಿದೆ. ಈ ಬಗ್ಗೆ ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈಯವರು ಸಂಪ್ಯ ಪೊಲೀಸರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ದನದ ಕಾಲನ್ನು ಗುಂಡಿ ತೆಗೆದು ಹೂಳಲಾಯಿತು ಎಂದು ತಿಳಿದು ಬಂದಿದೆ.

ನಾಯಿ ಎಳೆದು ತಂದಿರಬಹುದೇ?
ಅರ್ಧದಿಂದ ತುಂಡಾದ ದನದ ಕಾಲನ್ನು ನಾಯಿಗಳು ಎಳೆದುಕೊಂಡು ಬಂದು ಅಂಗಳದಲ್ಲಿ ಹಾಕಿರಬಹುದೇ ಅಥವಾ ಯಾರಾದರೂ ತಂದು ಹಾಕಿದ್ದಾರೋ ತಿಳಿದು ಬಂದಿಲ್ಲ. ನಾಯಿಗಳು ಕಚ್ಚಿ ತಿಂದಿರುವ ಗುರುತು ಇರುವುದರಿಂದ ಇದನ್ನು ನಾಯಿಗಳೇ ಎಳೆದುಕೊಂಡು ಬಂದು ಹಾಕಿರಬಹುದು ಎಂದು ಅಂದಾಜಿಸಲಾಗಿದೆ. ನಾಯಿಗಳಿಗೆ ದನದ ಕಾಲು ಎಲ್ಲಿಂದ ಸಿಕ್ಕಿತು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.