ಶಾಸಕರ ವಾರ್‌ರೂಮ್‌ನಿಂದ ಕೋವಿಡ್ ಸೋಂಕಿತರಿಗೆ ಯೋಗ ಚಿಕಿತ್ಸೆ – ವಾರ್‌ರೂಮ್ ಪ್ರಮುಖ್ ಪಿ.ಜಿ.ಜಗನ್ನಿವಾಸ ಅವರ ನೇತೃತ್ವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಪುತ್ತೂರು ಬಲ್ನಾಡು ಮೊರಾರ್ಜಿ ದೇಸಾಯಿ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೋವಿಡ್ ಸೋಂಕಿತರಿಗೆ ಯೋಗ ಚಿಕಿತ್ಸೆ ಮೂಲಕ ಧೈರ್ಯ ತುಂಬಿದ ಕಾರ್ಯ ಪುತ್ತೂರು ಶಾಸಕರ ವಾರ್‌ರೂಮ್‌ನಿಂದ ಜೂ.4ರಂದು ನಸುಕಿನ ಜಾವ ನಡೆಯಿತು. ಪುತ್ತೂರು ಶಾಸಕರ ರಾವ್‌ರೂಮ್‌ನ ಪ್ರಮುಖ್ ಪಿ.ಜಿ.ಜಗನ್ನಿವಾಸ ರಾವ್ ಅವರು ನೇತೃತ್ವ ವಹಿಸಿದ್ದರು.
ಕೊರೋನಾ ಸೊಂಕಿತರಿಗೆ ಯೋಗಾಸನದ ವಿವಿಧ ಬಂಗಿಗಳನ್ನು ಹೇಳಿಕೊಡಲಾಯಿತು. ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡಿ ತೋರಿಸಿದ್ದಲ್ಲದೆ ಸೋಂಕಿತರಿಗೂ ಯೋಗಾಸನ ಮಾಡಿಸುವ ಮೂಲಕ ಯೋಗದ ಮೂಲಕ ಅವರ ಮಾನಸಿಕ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಕೊರೊನಾ ಸೋಂಕಿತರಿಗೆ ಯೋಗ ಕಲಿಕೆಯ ಅವಕಾಶ ದೊರಕಿದೆ. ವೈಷ್ಣವಿ ಜೆ.ರಾವ್ ಯೋಗಾಭ್ಯಾಸ ಮಾಡಿಸಿದರು. ಕಿರಣ್ ಶಂಕರ್ ಮಲ್ಯ, ಮೊರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲ ಸುಬ್ರಹ್ಮಣ್ಯ ನಾಯಕ್, ಕೋವಿಡ್ ಕೇರ್ ಸೆಂಟರ್‌ನ ವೈದ್ಯರು ಸಹಕಾರ ನೀಡಿದರು.
ಸಂಸ್ಕೃತ ಶ್ಲೋಕ ಪಠಣ: ಕೊರೊನಾ ಪಾಸಿಟಿವ್ ಬರುತ್ತಿದ್ದಂತೆಯೇ ದುಃಖಿತರಾಗಿ ಬರಬೇಡಿ. ಪಿಕ್ನಿಕ್ ಅಂತ ತಿಳಿದುಕೊಂಡು ಬನ್ನಿ. ಏನು ಆಗಲ್ಲ, ಹ್ಯಾಪಿಯಾಗಿರಿ ಎಂದು ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಧೈರ್ಯ ತುಂಬಲಾಗುತ್ತಿದೆ. ಚಿಂತೆಗೆ ಬಿದ್ದವರನ್ನು ಗುರುತಿಸಿ ಅವರಿಗೆ ಸ್ಫೂರ್ತಿಯ ಮಾತನಾಡಲಾಗುತ್ತದೆ. ಸೂರ್ಯ ನಮಸ್ಕಾರದ ಜತೆಗೆ ಸಂಸ್ಕೃತ ಶ್ಲೋಕ ಪಠಿಸುತ್ತಿರುವುದು ಗಮನಾರ್ಹ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.