ಲಾಕ್‌ಡೌನ್‌ನಲ್ಲೊಂದು ಮಾನವೀಯ ಕಾರ್ಯ – ವಿಖಾಯ ಸದಸ್ಯರಿಂದ ಕೈಕಾರದಲ್ಲಿ ಬಡ ಕುಟುಂಬದ ಮನೆಯ ಮೇಲ್ಛಾವಣಿ ದುರಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾ.ಪಂ ವ್ಯಾಪ್ತಿಯ ಕೈಕಾರ ಎಂಬಲ್ಲಿ ಕುಸಿಯುವ ಹಂತದಲ್ಲಿದ್ದ ಬಡ ಕುಟುಂಬವೊಂದರ ಮನೆಯ ಮೇಲ್ಛಾವಣಿಯನ್ನು ಪುತ್ತೂರು ಎಸ್ಕೆಎಸ್ಸೆಸ್ಸೆಫ್ ವಿಖಾಯ ಸದಸ್ಯರು ದುರಸ್ತಿ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಮನೆಯ ಛಾವಣಿ ಬೀಳುವ ಹಂತದಲ್ಲಿದ್ದ ಸಂದರ್ಭದಲ್ಲಿ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವಿಖಾಯ ಸದಸ್ಯರು ಚಾವಣಿಯನ್ನು ದುರಸ್ತಿಗೊಳಿಸುವ ಬಗ್ಗೆ ನಿರ್ಧರಿಸಿದ್ದಲ್ಲದೇ ಸ್ವತಃ ತಾವೇ ಖರ್ಚು ವೆಚ್ಚಗಳನ್ನು ಭರಿಸಿ, ಶ್ರಮದಾನ ಮಾಡಿ ದುರಸ್ತಿ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದು ಮೆಚ್ಚುಗೆಗೂ ಪಾತ್ರವಾಗಿದೆ.

ಪುತ್ತೂರು ವಲಯ ವಿಖಾಯ ಕಾರ್ಯದರ್ಶಿ ಆಸಿಫ್ ಕಬಕ, ವಿಖಾಯ ಚೇರ್‌ಮೆನ್ ಮನ್ಸೂರ್ ಮೌಲವಿ ಅಮ್ಚಿನಡ್ಕ ಹಾಗೂ ಕನ್ವೀನರ್ ಇಬ್ರಾಹಿಂ ಕಡವ ಮೊದಲಾದವರ ನೇತೃತ್ವದಲ್ಲಿ ನಡೆದ ದುರಸ್ತಿ ಕಾರ್ಯದಲ್ಲಿ ಸುಮಾರು ೨೦ರಷ್ಟು ವಿಖಾಯ ಸ್ವಯಂ ಸೇವಕರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.