ಎಸ್.ಆರ್.ರಂಗಮೂರ್ತಿರವರಿಗೆ ದ.ಕ. ಜಿಲ್ಲಾ ಸಹಕಾರ ಭಾರತಿ ವತಿಯಿಂದ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಸುಮಾರು ೨೫ ವರ್ಷಗಳ ಕಾಲ ಸಹಕಾರ ಕ್ಷೇತ್ರದ ವಿವಿಧ ಸಂಸ್ಥೆಗಳಲ್ಲಿಕಾರ್ಯನಿರ್ವಹಿಸಿ, ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹಿರಿಯ ಸಹಕಾರಿಗಳಾದ ಎಸ್.ಆರ್.ರಂಗಮೂರ್ತಿ ರವರಿಗೆ ಇಡೀ ವಿಶ್ವದ ಸಹಕಾರ ಕ್ಷೇತ್ರದ ಅಗ್ರಮಾನ್ಯ ಸಂಸ್ಥೆಯಾಗಿ ಗುರುತಿಸಲ್ಪಟ್ಟಿರುವ ಇಪ್ಕೋ ಸಹಕಾರಿ ಸಂಸ್ಥೆಯು ವಿಶ್ರಾಂತ ಸಹಕಾರಿಗಳಿಗೆ ನೀಡುವ ಸಹಕಾರಿತಾ ಬಂಧು ಪ್ರಶಸ್ತಿಯನ್ನು ಸಹಕಾರ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ನೀಡಿದ್ದು ರಂಗಮೂರ್ತಿರವರನ್ನು ಸಹಕಾರ ಭಾರತಿ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರ ಭಾರತಿಯ ಜಿಲ್ಲಾ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಕೊಂಪದವು, ಸಹಕಾರ ಭಾರತಿ ಪುತ್ತೂರು ತಾಲೂಕು ಅಧ್ಯಕ್ಷ ಕೃಷ್ಣಕುಮಾರ್ ರೈ, ಕಾರ್ಯದರ್ಶಿ ರಮೇಶ್ ಕಲ್ಲುರೆ, ಮಂಗಳೂರು ತಾಲೂಕು ಅಧ್ಯಕ್ಷ ಚಂದ್ರಹಾಸ್ ನಾರ್ಲ, ಕಾರ್ಯದರ್ಶಿ ಪ್ರಸಾದ್ ಎಡಪದವು ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.