ಪಂಜ: ಆರೋಗ್ಯ ಪ್ಲಸ್ ಟೆಲಿ ಔಷಧಿ ಕೇಂದ್ರ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಮತ್ತು ಶ್ರೀಮತಿ ಶ್ರದ್ಧಾ ಲಲಿತ್ ರೈ ಶಾರದಾ ಗಾರ್ಡನ್ ಕೇನ್ಯ ಪಾಲುದಾರಿಕೆಯ ಟೆಲಿ ಔಷಧಿ, ಸಲಹೆ, ಡಯಗ್ನಾಸ್ಟಿಕ್ ಮತ್ತು ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನೊಳಗೊಂಡ ಆರೋಗ್ಯ ಪ್ಲಸ್ ಸ್ಮಾರ್ಟ್ ಕ್ಲಿನಿಕ್ ಜೂ. 4ರಂದು ಪಂಜ ಬಸ್ ನಿಲ್ದಾಣದ ಬಳಿಯ ದೀನ್ ದಯಾಳ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು.

ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಕೆ. ಸೀತಾರಾಮ ರೈ ಸವಣೂರು ಮತ್ತು ಶ್ರೀಮತಿ ಕಸ್ತೂರಿಕಲಾ ಎಸ್. ರೈ ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು. ಲಲಿತ್ ರೈ, ಪಂಜ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಬಳ್ಪ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕುಸುಮಾ ಎಸ್. ರೈ, ಎ.ಸುದರ್ಶನ ಶೆಟ್ಟಿ, ಎ. ಮಮತಾ ಎಸ್. ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪುರೋಹಿತ ಪ್ರಕಾಶ್ ಶರ್ಮ ಬೆಳ್ತಂಗಡಿ ವೈದಿಕ ಕಾರ್ಯ ನಿರ್ವಹಿಸಿದರು. ಈ ಸಂಸ್ಥೆಯಲ್ಲಿ ಟೆಲಿ ಕನ್ಸಲ್ಟಿಂಗ್, ಟೆಲಿ ಮೆಡಿಸಿನ್ ಸೌಲಭ್ಯಗಳನ್ನು ಲಭ್ಯವಾಗಲಿದೆ. ಆಹಾರ ಪದ್ಧತಿಯ ಮೂಲಕ ಆರೋಗ್ಯ ನಿರ್ವಹಣೆ ಹಾಗೂ ಹೃದ್ರೋಗ ತಜ್ಞರು, ಮೂಳೆ ತಜ್ಞರು, ಶಿಶು ಆರೋಗ್ಯ ತಜ್ಞರು, ಆಯುರ್ವೇದ ಆರೋಗ್ಯ ತಜ್ಞರು ಸಮಾಲೋಚನೆಗೆ ಲಭ್ಯವಾಗಲಿದ್ದಾರೆ ಎಂದು ಶ್ರದ್ಧಾ ಲಲಿತ್ ರೈ ತಿಳಿಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.