ಆರ್ಹತೆಯಿದ್ದರೂ ಕೆಲವೊಂದು ಷರತ್ತುಗಳಿಂದ ಪರಿಹಾರ ಪಡೆಯಲು ತೊಂದರೆ- ಷರತ್ತುಗಳನ್ನು ಬದಲಾವಣೆ ಮಾಡಲು ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದಿಂದ ಸಚಿವರು, ಶಾಸಕರು, ಎ.ಸಿ ಮುಖಾಂತರ ಮುಖ್ಯಮಂತ್ರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಶ್ವಕರ್ಮ ಸಮುದಾಯದ ಅಕ್ಕಸಾಲಿಗ, ಕಮ್ಮಾರ, ಬಡಗಿಗಳಿಗೆ ಸರಕಾರದಿಂದ ಪರಿಹಾರ ಘೋಷಣೆ ಹಿನ್ನೆಲೆ

ಪುತ್ತೂರು: ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ವಿಶ್ವಕರ್ಮ ಸಮುದಾಯದ ಅಕ್ಕಸಾಲಿಗರು, ಕಮ್ಮಾರರು, ಬಡಗಿಗಳಿಗೆ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಸರಕಾರದ ಮಾರ್ಗಸೂಚಿಗಳಲ್ಲಿರುವ ಕೆಲವೊಂದು ಷರತ್ತುಗಳಿಂದ ಆರ್ಹತೆಯಿದ್ದರೂ ಹಲವಾರು ಮಂದಿಗೆ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಕಾರದ ಕೆಲ ಷರತ್ತುಗಳನ್ನು ಬದಲಾವಣೆ ಮಾಡಬೇಕೆಂದು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಅಧಿಕಾರಿಗಳ ಕೋವಿಡ್ ಸಭೆ ನಡೆಯುವ ಸಂದರ್ಭದಲ್ಲಿ ಜೂ 4ರಂದು ಮನವಿ ಸಲ್ಲಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಾರ್ಮಿಕ ಸಚಿವರಿಗೆ ಪುತ್ತೂರು ಸಹಾಯಕ ಆಯುಕ್ತ ಡಾ| ಯತೀಶ್ ಉಳ್ಳಾಲ್ ಅವರ ಮುಖಾಂತರ ಮನವಿ ಸಲ್ಲಿಸಿದ್ದಾರೆ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಪ್ರಧಾನ ಕಾರ್ಯದರ್ಶಿ ಕೆ.ಆರ್. ಸಂಜೀವ ಆಚಾರ್ಯ, ಜಿ.ಪಂ.ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಗೌರವ ಸಲಹೆಗಾರ ಉದಯಕುಮಾರ್ ಆಚಾರ್ಯ ಕೆಮ್ಮಾಯಿ, ಕೋಶಾಧಿಕಾರಿ ಸಂತೋಷ್ ಆಚಾರ್ಯ ಕಡೇಶ್ವಾಲ್ಯ, ಸದಸ್ಯ ಸುರೇಂದ್ರ ಆಚಾರ್ಯ ಮನವಿ ಸಲ್ಲಿಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಮನವಿಯಲ್ಲಿ ಏನಿದೆ..? : ಅಕ್ಕಸಾಲಿಗರನ್ನು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಲ್ಲಿ 2018ರ ನಂತರ ಸೇರಿಸಿರುವುದು 18ರಿಂದ 60 ವರುಷದ ವಯೋಮಿತಿ ಇದ್ದುದರಿಂದ ಇವಾಗ ಪರಿಹಾರ ಯೋಜನೆಯಲ್ಲಿ 18-65 ವರುಷದವರೆಗೆ ಕೊಡಲಾಗಿದೆ. ಬಹುತೇಕ ಮಂದಿ ಕಾರ್ಮಿಕ ಇಲಾಖೆಯಲ್ಲಿ ನೋಂದಾವಣೆ ಮಾಡಿರುವುದಿಲ್ಲ. ಆದುದರಿಂದ ಪರಿಹಾರ ಪಡೆಯಲು ಬಹಳ ತೊಂದರೆಯಾಗಿರುತ್ತದೆ. ಕಳೆದ ಒಂದು ವರುಷಕ್ಕಿಂತಲೂ ಹೆಚ್ಚು ಅವಧಿ ಕೋವಿಡ್ ಇರುವುದರಿಂದ ಇನ್ನೂ ಅನೇಕ ಮಂದಿ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಾವಣೆ ಮಾಡಲು ಸಾಧ್ಯವಾಗಿರುವುದಿಲ್ಲ. ಆದರಿಂದ ನೋಂದಾವಣೆ ಮಾಡದೇ ಇರುವ ಅಸಂಘಟಿತ ಕಾರ್ಮಿಕರಿಗೆ ಮುಂದಿನ 15 ದಿನದಿಂದ 30 ದಿನಗಳವರೆಗೆ ನೋಂದಾವಣೆ ಮಾಡಲು ಹಾಗೂ ಅವರಿಗೂ ಪರಿಹಾರ ಪಡೆಯಲು ಅವಕಾಶ ಕಲ್ಪಿಸಬೇಕು. ಅಕ್ಕಸಾಲಿಗರಿಗೆ ಕೆಲವೊಂದು ಪ್ರದೇಶಗಳಲ್ಲಿ ಅಧಿಕಾರಿಗಳು ಬಿ.ಪಿ.ಎಲ್ ಪಡಿತರ ಚೀಟಿ ಪಡೆಯಲು ಅವಕಾಶ ನೀಡದೇ ಇರುವುದರಿಂದ ಎ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಅಕ್ಕಸಾಲಿಗರಿಗೂ ಅವಕಾಶ ಕಲ್ಪಿಸಿಕೊಡಬೇಕು. ನಮ್ಮ ರಾಜ್ಯದವರೇ ಅತ್ಯಧಿಕ ಮಂದಿ ಕಾರ್ಮಿಕರು ಇರುವುದರಿಂದ ಮೊದಲ ಆದ್ಯತೆ ನಮ್ಮ ರಾಜ್ಯದವರಿಗೆ ಮೀಸಲಿಡಬೇಕು. ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ಸೇವಾಕೇಂದ್ರಗಳು ತೆರೆಯದೇ ಇರುವುದರಿಂದ ದಿನಾಂಕವನ್ನು ವಿಸ್ತರಿಸಿ ಆರ್ಹತೆ ಉಳ್ಳ ಎಲ್ಲರಿಗೂ ಪರಿಹಾರ ಪಡೆಯಲು ಇಲ್ಲಿ ಕಾಣಿಸಿದ ಕೆಲವೊಂದು ಷರತ್ತುಗಳನ್ನು ಮಾರ್ಪಾಡುಗೊಳಿಸಿ ಸಂಬಂಧಪಟ್ಟ ಇಲಾಖೆಗೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿಶ್ವಕರ್ಮ ಸಮುದಾಯವು ತಮ್ಮ ಕುಲಕಸುಬುಗಳ ಮೂಲಕ ಸ್ವಾವಲಂಬಿಗಳಾಗಿ ಜೀವನ ರೂಪಿಸಿ ಕೊಂಡು ಬಂದವರು ಆದರೆ ಕಳೆದ ಕೆಲವು ವರುಷಗಳಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜೀವನ ನಿರ್ವಹಣೆಗಾಗಿ ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಕೋವಿಡ್ ಬಂದ ನಂತರವಂತು ಕೆಲವೊಂದು ಕುಟುಂಬಗಳು ಒಂದೊತ್ತಿನ ಊಟಕ್ಕೂ ಸಂಕಟ ಅನುಭವಿಸಿದ ಅನೇಕ ಉದಾಹರಣೆಗಳಿದೆ. ಸರಕಾರ ಘೋಷಿಸಿದ ಪರಿಹಾರ ಪಡೆಯಲು ಸಹ ಸರಕಾರದ ಷರತ್ತುಗಳಿಂದ ಬಹಳಷ್ಟು ತೊಂದರೆ ಯಾಗಿದೆ ಇದನ್ನು ಸ್ವಲ್ಪ ಮಾರ್ಪಡು ಗೊಳಿಸಿ ಅರ್ಹತೆ ಉಳ್ಳ ಎಲ್ಲರಿಗೂ ಅನುಕೂಲವಾಗುವಂತೆ ನಿಯಮಗಳನ್ನು ಸರಳಿಕರಣ ಗೊಳಿಸಿ ನೊಂದಾವಣೆ ಮಾಡಲು ದಿನಾಂಕವನ್ನು ಒಂದು ತಿಂಗಳವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಲಾಗಿದೆ. ವಿಶ್ವಕರ್ಮ ಸಮುದಾಯವನ್ನು ಕೈ ಬಿಡಲಿಕ್ಕಿಲ್ಲ ಎಂದು ಸರಕಾರ ಹಾಗೂ ಸಚಿವರುಗಳ ಮೇಲೆ ಭರವಸೆ ಇಟ್ಟು ಕೊಂಡಿzವೆ.

– ಜನಾರ್ದನ ಆಚಾರ್ಯ ಕಾಣಿಯೂರು
ಅಧ್ಯಕ್ಷರು, ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು

.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.