ನಾವೆಲ್ಲ ಪ್ರಕೃತಿದತ್ತವಾಗಿ ಬದುಕಬೇಕಾಗಿದೆ – ಸುರುಳಿಮೂಲೆ ಪರಿಸರ ದಿನದಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರತಿ ಭಾರಿ ಪ್ರಕೃತಿ ಮುನಿಸಿಕೊಂಡಾಗ ನಾವು ಆಪತ್ತು ಕಂಡುಕೊಂಡಿದ್ದೇವೆ. ಸರಕಾರ ಅದನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸುತ್ತದೆ. ಇಂತಹ ಸಂದರ್ಭದಲ್ಲಿ ಪ್ರಕೃತಿಯಲ್ಲಾಗುವ ಅಪಾಯವನ್ನು ತಪ್ಪಿಸಲು ನಾವು ಪ್ರಕೃತಿ ದತ್ತವಾಗಿ ಬದುಕಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ತಾಲೂಕು ಪಂಚಾಯತ್ ಪುತ್ತೂರು, ಗ್ರಾಮ ಪಂಚಾಯತ್ ನೆಟ್ಟಣಿಗೆಮುಡ್ನೂರು, ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಜೂ.೫ರಂದು ಸುರುಳಿ ಮೂಲೆಯಲ್ಲಿ ನರೇಗದ ಮೂಲಕ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಣೆಯಲ್ಲಿ ಅವರು ಮಾತನಾಡಿದರು. ಆರೋಗ್ಯ ಬದುಕಿಗೆ ಪರಿಸರ ಸಂರಕ್ಷಣೆ ಅಗತ್ಯ. ಆರೋಗ್ಯವಂತ ಬದುಕಿಗೆ ಪ್ರಕೃತಿಯತ್ತ ಎಲ್ಲರು ಗಮನ ಹರಿಸಿ ಪರಿಸರ ಬೆಳೆಸುವಲ್ಲಿ ಮುಂದಾಗಬೇಕು. ಗಿಡಗಳ ಪಾಲನೆ ಪೋಷಣೆ ಮೂಲಕ ನಾವು ಬದುಕಬೇಕು ಎಂದು ಹೇಳಿದ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಪಿಎಂಸಿ ಸದಸ್ಯ ಬೂಡಿಯಾರ್ ರಾಧಾಕೃಷ್ಣ ರೈ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾರಾಣಿ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮತ್ತು ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.