ತಿಂಗಳೊಳಗೆ ಚರಂಡಿ ಹೂಳೆತ್ತುವಿಕೆ ಪೂರ್ಣಗೊಳ್ಳಬೇಕು – ಮುಂಗಾರು ಪೂರ್ವ ಭಾವಿ ಸಭೆಯಲ್ಲಿ ನಗರಭೆ ಅಧ್ಯಕ್ಷ ಜೀವಂಧರ್ ಜೈನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಂಗಾರು ಮಳೆಗೆ ಆರಂಭಗೊಳ್ಳುತ್ತಿದೆ. ಮಳೆಯಿಂದ ಕೃತಕ ನೆರೆ ಸಮಸ್ಯೆ ಬರಬಾರದೆಂದು ಎಲ್ಲಾ ಕಡೆ ಚರಂಡಿ ಹೂಳೆತ್ತುವಿಕೆ ಕುರಿತು ಟೆಂಡರ್ ಕರೆಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಕಾಮಗಾರಿಗಳೆಲ್ಲಾ ತಿಂಗಳೊಳಗೆ ಪೂರ್ಣಗೊಳ್ಳಬೇಕೆಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಮುಂಗಾರು ಪೂರ್ವ ಭಾವಿ ತಯಾರಿಗೆ ಸಂಬಂಧಿಸಿ ನಗರಸಭೆ ಅಭಿಯಂತರರು ಮತ್ತು ವಿವಿಧ ಜವಾಬ್ದಾರಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ಸಭೆಯಲ್ಲಿ ಅವರು ಸೂಚನೆ ನೀಡಿದ್ದಾರೆ. ನಗರಸಭೆಯ ೩೧ ವಾರ್ಡ್‌ಗಳಲ್ಲಿ ಈಗಾಗಲೇ ಚರಂಡಿ ಹೂಳೆತ್ತುವಿಕೆ ಕಾಮಗಾರಿ ನಡೆದಿದೆ. ಚರಂಡಿಗೆ ಮಣ್ಣು ಹಾಕಿ ದಾರಿ ಮಾಡಿರುವುದು ಬೆಳಕಿಗೆ ಬಂದರೆ ತೆರವುಗೊಳಿಸಬೇಕು. ಒಟ್ಟು ಕಾಮಾರಿ ನಡೆಸಲು ಎರಡು ಬ್ಯಾಚ್ ಮಾಡಲಾಗಿದ್ದು, ೧ ರಿಮದ ೧೮ ವಾರ್ಡ್‌ಗಳಿಗೆ ಮತ್ತು ೧೯ ರಿಂದ ೩೧ ವಾರ್ಡ್‌ಗಳಲ್ಲಿ ತಂಡವಾಗಿ ಕೆಲಸ ನಡೆಯಲಿದೆ. ಎಲ್ಲಾ ಕೆಲಸಗಳು ತಿಂಗಳೊಳಗೆ ಪೂರ್ಣಗೊಳ್ಳಬೇಕೆಂದು ಸೂಚನೆ ನೀಡಿದರಲ್ಲದೆ ಅಪಾಯಕಾರಿ ಮರಗಳನ್ನು ತೆರವು ಮಾಡುವ ಕೆಲಸವು ಆಗಬೇಕೆಂದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಪೌರಾಯುಕ್ತ ಮಧು ಎಸ್.ಎಮ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.