ವಿಟ್ಲದಲ್ಲಿ ವ್ಯಾಕ್ಸಿನ್ ಗಾಗಿ  ಫುಲ್ ರಶ್ ..! ಜನರಿಂದ ತುಂಬಿ ಹೋಯ್ತು ಸರ್ಕಾರಿ ಶಾಲಾ ಸಭಾಭವನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಇಲ್ಲಿನ ಸರಕಾರಿ ಶಾಲೆಯಲ್ಲಿ  ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ನೀಡಲಾಗುತ್ತಿರುವ ಕೊವ್ಯಾಕ್ಸಿನ್ ಎರಡನೇ ಡೋಸ್ ಪಡೆಯಲು ನೂರಾರು ಜನರು ಸೇರಿದ್ದು, ಕೋವಿಡ್ ನ ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರವನ್ನು ಮರೆತು ಜನ ಸೇರಿರುವುದು  ಸಾಮಾಜಿಕ‌ ಜಾಲತಾಣಗಳಲ್ಲಿ ವ್ಯಾಪಕ‌ ಅಕ್ರೋಶಕ್ಕೆ ಕಾರಣವಾಗುತ್ತಿದೆ.

ವಿಟ್ಲ ವ್ಯಾಪ್ತಿಯ ಹಲವು ಜನರು ಈ ಹಿಂದೆಯೇ ಪ್ರಥಮ ಡೋಸ್ ಪಡೆದಿದ್ದರು. ಎರಡನೇ ಡೋಸ್ ಗಾಗಿ ಕಳೆದ ಹಲವು ದಿನಗಳಿಂದ ಜನರು ಕಾಯುತ್ತಿದ್ದರು.  ಇದೀಗ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇಂದು 900 ವ್ಯಾಕ್ಸಿನ್ ಬಂದಿದ್ದು ವಿಟ್ಲ ಸರ್ಕಾರಿ ಶಾಲೆಯಲ್ಲಿ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ನಿಂದಲೇ ನೂರಾರು ಜನರು ಆಗಮಿಸಿದ್ದು, ಜನರ ಗುಂಪುಗಳನ್ನು ಕಂಡು ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.  ವ್ಯಾಕ್ಸಿನ್ ಪಡೆಯಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿದರೆ ನೂಕುನುಗ್ಗಲು ಉಂಟಾಗಬಹುದೆಂದು ಶಾಲೆಯ ಶತಮಾನೋತ್ಸವದ ಕಟ್ಟಡದಲ್ಲಿ ವ್ಯವಸ್ಥೆ ಮಾಡಿದ್ದರೂ ಜನಸಂದಣಿ ಹೆಚ್ಚಾಗಿ ಕಂಡು ಬಂದಿದೆ.  ಮಾತ್ರವಲ್ಲದೆ ಇಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎನ್ನುವ ಆರೋಪವೂ ಕೇಳಿಬರುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.