ಕೋವಿಡ್ ವ್ಯಾಕ್ಸಿನ್ ಪಡೆಯಲು ಟೋಕನ್, ಆನ್ ಲೈನ್ ನೋಂದಾವಣೆ ಗೊಂದಲ..!! ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಗಾಗಿ ಮುಗಿ ಬಿದ್ದ ಜನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ವ್ಯಾಕ್ಸಿನ್ ಪಡೆಯಲು ಸ್ಥಳದಲ್ಲೇ ಟೋಕನ್ ಪಡೆದ ಮತ್ತು ಆನ್ ಲೈನ್ ನಲ್ಲೂ ನೋಂದಾವಣೆ ಮಾಡಿಕೊಂಡ ಜನರು ಮುಗಿ ಬಿದ್ದ ಘಟನೆ ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕಾ ಕೇಂದ್ರದಲ್ಲಿ ಜೂ.5ರಂದು ನಡೆಯಿತು.

ಲಸಿಕಾ ಕೇಂದ್ರದಲ್ಲಿ ಬೆಳಿಗ್ಗೆ ಲಸಿಕೆ ಪಡೆಯಲೆಂದು ಬಂದವರಿಗೆ ಟೋಕನ್ ನೀಡಲಾಗಿತ್ತು. ಆದರೆ ಈ ನಡುವೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆನ್ ಲೈನ್ ಮೂಲಕ ನೋಂದಾವಣೆ ಮಾಡಿದವರು ಸಹ ಲಸಿಕಾ ಕೇಂದ್ರಕ್ಕೆ ಬಂದಾಗ ಗೊಂದಲ ಉಂಟಾಗಿತ್ತು. ಬಳಿಕ ಹೆಚ್ಚುವರಿ ಲಸಿಕೆ ತರಿಸಿ ಟೋಕನ್ ಪಡೆದವರಿಗೂ ಆನ್ ಲೈನ್ ನಲ್ಲಿ ನೋಂದಾವಣೆ ಮಾಡುವವರಿಗೂ ಲಸಿಕೆ ನೀಡಲಾಗುವುದು. ಯಾವುದೇ ಗೊಂದಲ ಬೇಡ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ.ದೀಪಕ್ ರೈ ತಿಳಿಸಿದರು. ಜನರು ಜಮಾಯಿಸಿದಾಗ ಪೊಲೀಸರು ಕೂಡಾ ಸ್ಥಳಕ್ಕೆ ಆಗಮಿಸಿದ್ದರು.ಆದರೂ ಕೆಲವರು ಲಸಿಕೆ ಸಿಗುವುದಿಲ್ಲ ಎಂದು ವಾಪಾಸಾದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.