ಕುಂಬ್ರ ಪೇಟೆ ಈಗ ಸಂಪೂರ್ಣ ಸ್ವಚ್ಛ – ವರ್ತಕರ ಸಂಘ,ಗ್ರಾಪಂ,ಪೊಲೀಸ್ ಇಲಾಖೆ,ರಿಕ್ಷಾ ಚಾಲಕರ ಸಂಘದಿಂದ ಸ್ವಚ್ಛತಾ ಕಾರ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್, ಕುಂಬ್ರ ವರ್ತಕರ ಸಂಘ, ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯ ಹಾಗೂ ರಿಕ್ಷಾ ಚಾಲಕರ ಮಾಲಕರ ಸಂಘ ಕುಂಬ್ರ ಇವರ ಆಶ್ರಯದಲ್ಲಿ ಸಾಂಕ್ರಾಮಿಕ ರೋಗ ಭೀತಿಯನ್ನು ತಡೆಗಟ್ಟುವ ಸಲುವಾಗಿ ಕುಂಬ್ರ ಪೇಟೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಜೂ.05ರಂದು ನಡೆಯಿತು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೆಳಿಗ್ಗೆ ಪಂಚಾಯತ್ ಎದುರುಗಡೆ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಅಭಿವೃದ್ಧಿ ಅಧಿಕಾರಿ ಗೀತಾ ಬಿ.ಎಸ್, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿ, ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರರವರುಗಳು ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಂಬ್ರ ಪೇಟೆಯ ಸುತ್ತಮುತ್ತ ಸ್ವಚ್ಛತೆ
ಡೆಂಗ್ಯೂ, ಮಲೇರಿಯಾ ಇತ್ಯಾದಿ ಸಾಂಕ್ರಾಮಿಕ ರೋಗ ಭೀತಿಯಿಂದಾಗಿ ಪೇಟೆಯ ಸುತ್ತಮುತ್ತ ಸ್ವಚ್ಛತೆಯನ್ನು ಮಾಡಲಾಯಿತು. ಕುಂಬ್ರ ಅಶ್ವತ್ಥಕಟ್ಟೆಯ ಸುತ್ತ ಬೆಳೆದಿದ್ದ ಹುಲ್ಲುಗಳನ್ನು ತೆಗೆದು ಸ್ವಚ್ಛ ಮಾಡಲಾಯಿತು. ಬಸ್ಸು ತಂಗುದಾಣದ ಸುತ್ತಮುತ್ತ ಇದ್ದ ಕಸಕಡ್ಡಿಗಳನ್ನು, ಪ್ಲಾಸ್ಟಿಕ್ ಬಾಟಲಿಗಳನ್ನು ಹೆಕ್ಕಿ ಸಂಗ್ರಹಿಸಲಾಯಿತು. ರಸ್ತೆಯ ಬದಿಗಳಲ್ಲಿ ಬೆಳೆದಿದ್ದ ಪೊದೆ, ಹುಲ್ಲನ್ನು ಯಂತ್ರದ ಮೂಲಕ ಕಟಾವು ಮಾಡಿ ಪಿಕಪ್‌ನಲ್ಲಿ ತುಂಬಿಸಿ ವಿಲೇವಾರಿ ಮಾಡಲಾಯಿತು.

ಪೊಲೀಸರು ಕೈ ಜೋಡಿಸಿದರು
ಸ್ವಚ್ಛತಾ ಕಾರ್ಯದಲ್ಲಿ ಸಂಪ್ಯ ಗ್ರಾಮಾಂತರ ಠಾಣೆಯ ಕುಂಬ್ರ ಬೀಟ್ ಪೊಲೀಸ್ ಕರುಣಾಕರ ಕೂಡ ಭಾಗವಹಿಸಿದ್ದರು.ಕೈಗೆ ಗ್ಲೌಸ್ ಹಾಕಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಛತಾ ಕೆಲಸಕ್ಕೂ ಸೈ ಎಂಬುದನ್ನು ತೋರಿಸಿಕೊಟ್ಟರು. ಸ್ವಚ್ಛತ ಕಾರ್ಯದಲ್ಲಿ ವರ್ತಕರು, ಗ್ರಾಪಂ ಸದಸ್ಯರು, ರಿಕ್ಷಾ ಚಾಲಕರು, ಮಾಲಕರು ಕೈ ಜೋಡಿಸಿದ್ದರು.

ಒಗ್ಗಟಿನಲ್ಲಿ ಬಲವಿದೆ
ಕುಂಬ್ರ ವರ್ತಕರ ಸಂಘವು ಈಗಾಗಲೇ ಹಲವು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಹಲವು ಬಾರಿ ಕುಂಬ್ರದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಿದೆ. ಈ ಬಾರಿ ಗ್ರಾಮ ಪಂಚಾಯತ್, ರಿಕ್ಷಾ ಚಾಲಕ ಮಾಲಕರ ಸಂಘ ಮತ್ತು ಪೊಲೀಸ್ ಇಲಾಖೆಯ ಸಹಕಾರ ಪಡೆದುಕೊಂಡು ಸ್ವಚ್ಛತಾ ಕಾರ್ಯವನ್ನು ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಲಾಕ್‌ಡೌನ್‌ನ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್, ಗ್ಲೌಸ್ ಧರಿಸಿಕೊಂಡು ಕೆಲಸ ಮಾಡುವ ಮೂಲಕ ಕುಂಬ್ರದ ಸಂಘ ಸಂಸ್ಥೆಯವರು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸುವ ಮೂಲಕ ಎಲ್ಲರಿಗೆ ಮಾದರಿಯಾದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.