ಕುಂಬ್ರ: ಸ್ವಚ್ಛತೆಯ ತ್ಯಾಜ್ಯ ರಸ್ತೆ ಬದಿಗೆ ಸುರಿದ ಕಾರ್ಯಕರ್ತರು – ಸಾರ್ವಜನಿಕರಿಂದ ತೀವ್ರ ವಿರೋಧ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಬ್ರದಲ್ಲಿ ಜೂ. 5ರಂದು ಪರಿಸರ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಕುಂಬ್ರ ಪೇಟೆಯಾದ್ಯಂತ ಸ್ವಚ್ಚತಾ ಕಾರ್ಯಕ್ರಮ ನಡೆದಿತ್ತು. ಕುಂಬ್ರ ವರ್ತಕರ ಸಂಘ, ರಿಕ್ಷಾ ಚಾಲಕ ಮಾಲಕರ ಸಂಘ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಯಕರ್ತರು ಕುಂಬ್ರ ಪೇಟೆಯಲ್ಲಿರುವ ಕಸವನ್ನು ತೆಗೆದು ಸ್ವಚ್ಚ ಮಾಡಿದ್ದಾರೆ. ಮಲೇರಿಯಾ, ಡೆಂಗ್ಯೂ ಹರಡದಂತೆ ಸಾರ್ವಜನಿಕರಲ್ಲಿ ಮುನ್ನೆಚ್ಚರಿಕಾ ಕಾರ್ಯವನ್ನು ಸಂಘ ಸಂಸ್ಥೆಗಳ ವತಿಯಿಂದ ಮಾಡಲಾಗಿತ್ತು. ಆದರೆ ವಿಪರ್‍ಯಾಸವೇನೆಂದರೆ ಕುಂಬ್ರದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸುಳ್ಯ ರಸ್ತೆ ಶೇಕಮಲೆ ಮಸೀದಿಯ ಬಳಿಯ ಮನೆಯೊಂದರ ಮುಂಭಾಗದಲ್ಲಿರುವ ರಸ್ತೆ ಬದಿಯಲ್ಲಿ ಹಾಕಲಾಗಿದೆ. ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಸೇರಿಂತೆ ಒಣ ಕಸಗಳು , ಪ್ಲಾಸ್ಟಿಕ್ ವಸ್ತುಗಳೂ ಸೇರಿಕೊಂಡಿದೆ. ಶ್ರಮದಾನದಿಂದ ಕುಂಬ್ರ ಪೇಟೆ ಸ್ವಚ್ಚವಾಗಿರುವುದು ನಿಜ ಆದರೆ ಕುಂಬ್ರ ಪೇಟೆಯ ಕಸವನ್ನು ಕೆಲವೇ ಮೀಟರ್ ದೂರದಲ್ಲಿ ರಸ್ತೆ ಬದಿಯಲ್ಲಿ ರಾಶಿ ಹಾಕಿರುವುದು ಸಾರ್ವಜನಿಕರಿಂದ ತೀವ್ರ ವಿರೋಧವೂ ವ್ಯಕ್ತವಾಯಿತು.

ಪ್ಲಾಸ್ಟಿಕ್ ತ್ಯಾಜ್ಯ ಗಮನಕ್ಕೆ ಬಂದಿರಲಿಲ್ಲ
ನಾವು ಕುಂಬ್ರ ಪೇಟೆಯಲ್ಲಿರುವ ಹುಲ್ಲು ತ್ಯಾಜ್ಯವನ್ನು ತೆಗೆದುಕೊಂಡು ಹೋಗುವಂತೆ ವಾಹನದವರಿಗೆ ತಿಳಿಸಿದ್ದೆವು. ಕುಂಬ್ರ ಪೇಟೆ ಸ್ವಚ್ಚ ಮಾಡುವಾಗ ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇರಲಿಲ್ಲ. ನಮ್ಮ ಗಮನಕ್ಕೆ ಬಾರದೆ ವಾಹನದಲ್ಲಿ ಎಲ್ಲಿಂದಲೋ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇತರೆ ತ್ಯಾಜ್ಯಗಳಿರುವ ಚೀಲವನ್ನು ತೆಗೆದು ಹುಲ್ಲಿನ ತ್ಯಾಜ್ಯದೊಂದಿಗೆ ರಸ್ತೆ ಬದಿಯಲ್ಲಿ ರಾಶಿ ಹಾಕಿದ್ದಾರೆ. ಇದು ತಪ್ಪು ನಾವು ಸ್ವಚ್ಚತೆಯ ದೃಷ್ಟಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ನಮಗೆ ಗೊತ್ತಿಲ್ಲದೆ ಈ ಪ್ರಮಾದ ನಡೆದಿದೆ. ಅಲ್ಲಿ ರಾಶಿ ಹಾಕಿರುವ ತ್ಯಾಜ್ಯವನ್ನು ತಕ್ಷಣವೇ ತೆರವು ಮಾಡುತ್ತೇವೆ – ಮಾದವ ರೈ ಕುಂಬ್ರ ಅಧ್ಯಕ್ಷರು ವರ್ತಕರ ಸಂಘ ಕುಂಬ್ರ

ಚಿತ್ರ ರಸ್ತೆ ಬದಿಯಲ್ಲಿ ರಾಶಿ ಹಾಕಿರುವ ತ್ಯಾಜ್ಯ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.