ಕಟ್ಟತ್ತಾರು: ಮದ್ರಸ ಕಟ್ಟಡಕ್ಕೆ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಟ್ಟತ್ತಾರು ಜುಮಾ ಮಸೀದಿಯ ಅಧೀನದಲ್ಲಿರುವ ನುಸ್ರತುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶಿಲಾನ್ಯಾಸವನ್ನು ಕಟ್ಟತ್ತಾರು ಮಸೀದಿಯ ಅಧ್ಯಕ್ಷ ಹಾಜಿ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಉಮರ್ ಮುಸ್ಲಿಯಾರ್ ನಂಜೆ ಹಾಗೂ ಸ್ಥಳಿಯ ಖತೀಬ್ ದಾವೂದ್ ಸಅದಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕರವರು ಶಿಲಾನ್ಯಾಸಗೊಂಡ ಮದ್ರಸ ಕಟ್ಟಡದ ಕಾಮಗಾರಿ ಶೀಘ್ರದಲ್ಲೆ ಪೂರ್ಣಗೊಂಡು ಉಪಯೋಗಕ್ಕೆ ಲಭ್ಯವಾಗಲಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ನಾವು ಆಭಾರಿಗಳಾಗಿದ್ದೇವೆ ಎಂದು ಹೇಳಿದರು.

ಮಸೀದಿ ಕಾರ್ಯದರ್ಶಿ ಅಬೂಬಕ್ಕರ್ ಸಿ.ಬಿ, ಉಮರ್ ಹಾಜಿ ಕಟ್ಟತ್ತಾರ್, ಯೂಸುಫ್ ಹಾಜಿ, ಕೋಶಾದಿಕಾರಿ, ಕೆ.ಎಂ ಯೂಸುಫ್, ಕೆ.ಎಂ ಶರೀಫ್, ಮುಸ್ತಫಾ ಕೆ.ಎಂ ಶಾಕಿರ್ ಕಟ್ಟತ್ತಾರ್, ಕೆ.ಎಂ. ಅಶ್ರಫ್, ಬಶೀರ್ ಕಟ್ಟತ್ತಾರ್, ಸಿದ್ದೀಕ್ ಫೈಝಿ, ಮೊಯ್ದು ಮುಸ್ಲಿಯಾರ್, ಕೆ.ಎಂ ರಫೀಕ್, ಬಶೀರ್ ಕಟ್ಟತ್ತಾರ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.