ಕಾಡು ಬೆಳೆಸಿ ನಾಡು ಉಳಿಸಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಮ್ಮ ಸುತ್ತಮುತ್ತ ಇರುವ ಬೆಟ್ಟಗುಡ್ಡಗಳು, ಮರ-ಗಿಡಗಳು, ನಾವಿರುವ ಭೂಮಿ, ಸಾಗರ- ಸರೋವರಗಳು, ಹಳ್ಳಕೊಳ್ಳಗಳು, ಪಶು ಪಕ್ಷಿಗಳು, ಅರಣ್ಯ, ಗಾಳಿ, ಆಕಾಶ ಇವೆಲ್ಲವೂ ಸೇರಿ ಪರಿಸರವೆನಿಸಿದೆ. ಈ ಪರಿಸರವನ್ನೇ ಪ್ರಕೃತಿ ಅಥವಾ ನಿಸರ್ಗವೆಂದು ಕರೆಯುತ್ತಾರೆ.
ಪರಿಸರವನ್ನು ಮುಖ್ಯವಾಗಿ ಪ್ರಾಕೃತಿಕ ಪರಿಸರ ಮತ್ತು ಮಾನವ ನಿರ್ಮಿತ ಪರಿಸರವೆಂದು ವಿಭಾಗಿಸುತ್ತೇವೆ. ನದಿ, ಸಮುದ್ರ, ಸರೋವರ, ಅರಣ್ಯ, ಬೆಟ್ಟ-ಗುಡ್ಡ, ಪರ್ವತ ಮುಂತಾದವುಗಳು ಪ್ರಾಕೃತಿಕ ಪರಿಸರವಾದರೆ, ಕಟ್ಟಡಗಳು, ಕೃಷಿ ಭೂಮಿ, ಕೈಗಾರಿಕೆಗಳು, ನಗರಗಳು ಅಣೆಕಟ್ಟುಗಳು, ಕಾಲುವೆಗಳು, ರಸ್ತೆ, ಮಾನವನಿರ್ಮಿತ ಪರಿಸರವಾಗಿದೆ. ಪರಿಸರವನ್ನು ಬಿಟ್ಟು ಮಾನವಜೀವನ ಸಾಧ್ಯವೇ ಇಲ್ಲ. ಆದರೆ ಇಂದು  ಮನುಷ್ಯ ತನ್ನ ಸುಖಕ್ಕಾಗಿ ತನ್ನ ಸುಖಕ್ಕಾಗಿ ಪರಿಸರ ಅಲ್ಲ ದುರ್ಬಳಕೆ ಮಾಡುತ್ತಿದ್ದಾನೆ. ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದರಿಂದಾಗಿ, ಅತಿವೃಷ್ಟಿ, ಅನಾವೃಷ್ಟಿ ಹವಾಮಾನದ ಏರುಪೇರುಗಳು ಸಂಭವಿಸಿ, ಸುನಾಮಿ ಪ್ರವಾಹ, ಚಂಡಮಾರುತ, ಭೂಕಂಪ ಮೊದಲಾದ ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿ ಎಂದೂ ಬೀಳದಷ್ಟು ಮಳೆ ಸುರಿಯಿತು. ಊರುಗಳು ಜಲಪ್ರಳಯದಲ್ಲಿ ಮುಳುಗಿದವು. ಸಾವಿರಾರು ಮನೆಗಳು ಉರುಳಿದವು. ಜನ ಹಾಗೂ ಜಾನುವಾರುಗಳು ಪ್ರಾಣ ಕಳೆದುಕೊಂಡವು. ಲಕ್ಷಾಂತರ ಬೆಲೆಯ ಬೆಳೆ ಹಾಳಾಯಿತು. ಬಹುತೇಕ ಜನರಿಗೆ ನಿಲ್ಲಲು ನೆಲೆಯಿಲ್ಲದ, ತಿನ್ನಲು ಆಹಾರವಿಲ್ಲದ ಗತಿ ಬಂತು. ಸರಕಾರವು ಹೆಲಿಕಾಪ್ಟರ್ ಗಳ ಮೂಲಕ ಜನರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿ, ದೋಣಿ ತೆಪ್ಪಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಜನರನ್ನು ಜಾನುವಾರಗಳನ್ನು ಸ್ಥಳಾಂತರಿಸಲಾಯಿತು.ಪರಿಸರ ನಾಶವಾದರೆ ಈ ಎಲ್ಲಾ ಅವಘಡಗಳು ಸಂಭವಿಸುತ್ತವೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಲಿ
         ಅಕ್ಷತಾ ಯು. ರಮೇಶ
     ತೃತೀಯ ಬಿ.ಕಾಂ.
ಸ.ಪ್ರ.ದರ್ಜೆ ಕಾಲೇಜು ಬೆಟ್ಟಂಪಾಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.