ಉದ್ಯಮಿ ಸಹಜ್ ರೈ ಬಳಜ್ಜ ಅವರಿಂದ ಯಕ್ಷಗಾನದ ನೇಪತ್ಯ ಕಲಾವಿದರಿಗೆ ಅಗತ್ಯ ಆಹಾರ ಸಾಮಾಗ್ರಿ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಹಲವಾರು ಕುಟುಂಬಗಳಿಗೆ ಈಗಾಗಲೇ ಆಹಾರದ ಕಿಟ್ ಗಳನ್ನು ವಿತರಿಸಿದ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಉದ್ಯಮಿ ಸಹಜ್ ರೈ ಬಳಜ್ಜ ಅವರಿಂದ ಯಾವುದೇ ಸಂಬಳವಿಲ್ಲದೆ ಇರುವ 11 ಯಕ್ಷಗಾನ ಮೇಳದ ಕಲಾ ರಂಗದ ನೇಪತ್ಯ ಕಲಾ ಕುಟುಂಬಗಳಿಗೂ ಅಗತ್ಯ ಆಹಾರದ ಕಿಟ್ ಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಾರ್ಯವನ್ನು ಮಾಡಿದ್ದಾರೆ.

ಜೂ.೬ ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಯಕ್ಷಗಾನದ ತೆರೆಮರೆಯಲ್ಲಿ ಶ್ರಮಿಸುತ್ತಿರುವ ನೇಪತ್ಯ ಕಲಾವಿದರಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.

ನಗರಸಭಾ ಅಧ್ಯಕ್ಷ ಕೆ ಜೀವಂದರ್ ಜೈನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯ ರಾಮದಾಸ್ ಗೌಡ ಅವರು ಸಾಂಕೇತಿಕವಾಗಿ ದೇತಂಡ್ಕ‌ ಮೇಳದ ಕಲಾವಿರಿಗೆ ಕಿಟ್ ಹಸ್ತಾಂತರಿಸಿದರು. ಉಳಿದ ಕಲಾವಿದರಿಗೆ ಆಯಾ ನೇಮಪತ್ಯ ಕಲಾವಿದರ ಮನೆಗಳಿಗೆ ತೆರಳಿ ಕಿಟ್ ವಿತರಣೆ ಮಾಡಲಾಗುವುದು ಎಂದು ಉದ್ಯಮಿ ಸಹಜ್ ರೈ ಬಳಜ್ಜ ಅವರು ತಿಳಿಸಿದರು. ಯಕ್ಷಗಾನ ಹಿರಿಯ ಕಲಾವಿದ ದಿ.ಶ್ರೀಧರ್ ಭಂಡಾರಿ ಅವರ ಪುತ್ರ ದೇವಿಪ್ರಕಾಶ್ ಭಂಡಾರಿ, ಸುಬ್ಬು ಸಂಟ್ಯಾರ್, ಶರತ್ ಆಳ್ವ, ಆದರ್ಶ ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದ ಕಡೆಯಿಂದ ಫಲಾನುಭವಿಗಳಿಗೆ ಬಿಲ್ವಪತ್ರೆ ಗಿಡಗಳನ್ನು ವಿತರಣೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.