ಸರ್ವೆ : ಎಸ್.ಜಿ.ಎಮ್. ಫ್ರೌಡಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಸುಮಾರು 4 ದಶಕಗಳಿಂದ ಸುತ್ತಮುತ್ತಲಿನೆಲ್ಲಾ ವರ್ಗದ ಮಕ್ಕಳಿಗೂ ವಿದ್ಯೆಯನ್ನು ಧಾರೆಯೆರೆದು ,ಸುಶಿಕ್ಷಿತರಾನ್ನಾಗಿಸಿ ,ಉತ್ತಮ ರೀತಿಯಲ್ಲಿ ಅವರ ಜೀವನ ಬೆಳಗುವಂತೆ ಮಾಡುವಲ್ಲಿ ಹಾಗೂ ಶಾಲೆಯನ್ನು ಸ್ಥಾಪಿಸಿ ,ಆರಂಭಿಸುವಲ್ಲಿ ಮುಂಚೂಣಿಗಾರರಾದ ಸರ್ವೆ ದಿ. ವೆಂಕಪ್ಪ ಮಡಿವಾಳ ಹಾಗೂ ದಿ.ಗೌರಿ ವೆಂಕಪ್ಪ ದಂಪತಿ ಪುತ್ರ ದಿ. ಪಿ.ವಿ ವಿಜಯ ಕುಮಾರ್ ಇವರ ಜನ್ಮ ದಿನವನ್ನು ಜೂ. 6 ರಂದು ಸರ್ವೆ ಎಸ್.ಜಿ.ಎಮ್. ಶಾಲೆಯಲ್ಲಿ ಸಂಸ್ಥಾಪಕರ ದಿನವನ್ನಾಗಿ ಸರಳ ರೀತಿಯಿಂದ ಆಚರಣೆ ಮಾಡಲಾಯಿತು.

ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಬಿ. ಇಂದುಶೇಖರ್ ದೀಪ ಪ್ರಜ್ವಲನೆ ಮಾಡಿ ,ಮೃತರ ಭಾವಚಿತ್ರ ಕ್ಕೆ ಪುಪ್ಷಾನಮನ ಸಲ್ಲಿಸಿ ,ಅವರ ಸಾಹಸ ,ಸಾಧನೆ ,ಛಲ ನಡೆದು ಬಂದ ಹಾದಿಯ ಬಗ್ಗೆ ನೆನಪಿಸಿ ಭಾವುಕರಾದರು.

ಆಡಳಿತ ಮಂಡಳಿಯ ಸಂಚಾಲಕಿ ,ವೈದ್ಯೆ ಯಾದವಿ ಜಯ ಕುಮಾರ್ ಮಾತಾನಾಡಿ ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ವಿಜಯ ಕುಮಾರ್ ಅವರಿಗಿದ್ದ ಪ್ರೀತಿ ,ಗೌರವ ಹಾಗೂ ಹೊಂದಿಕೊಳ್ಳುವ ಗುಣ ಇವನ್ನೆಲ್ಲಾ ನೆನಪಿಸಿ ಕೊಂಡರು.

ಆಡಳಿತ ಮಂಡಳಿಯ ಸದಸ್ಯರಾದ ಮಹಾಬಲ ರೈ ,ಶ್ರೀಧರ್ ಎಸ್.ಡಿ ,ಕಮಲೇಶ್ ,ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ಸುರೇಶ್ ಆಚಾರ್ಯ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್.ಡಿ , ಶಿಕ್ಷಕಿ ಅಕ್ಷತಾ ,ಸಿಬ್ಬಂದಿಗಳಾದ ರಮಣಿ ಜಿ.ಕೆ , ಪುಷ್ಪಾವತಿ ಹಾಗೂ ಪುಷ್ಪಾಲತಾ ಇದ್ದರು.

ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಪ್ರಸ್ತಾಪಿಸಿ ,ಸ್ವಾಗತಿಸಿದರು .ಶಿಕ್ಷಕಿ ಪುಷ್ಷಾ ನಿರೂಪಿಸಿ ,ಶಿಕ್ಷಕ ಮೋಹನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.