ಮೆಸ್ಕಾಂ ಪುತ್ತೂರು ನಗರ ಮೆಕ್ಯಾನಿಕ್ ಇಬ್ರಾಹಿಂರವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಮೆಸ್ಕಾಂ ಪುತ್ತೂರು ನಗರ ಕಾರ್ಯ ಮತ್ತು ಪಾಲನಾಶಾಖೆಯಲ್ಲಿ ಮೆಕ್ಯಾನಿಕ್೨ ದರ್ಜೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿ.ಇಬ್ರಾಹಿಂರವರು ಸೇವಾ ನಿವೃತ್ತಿಗೊಂಡಿದ್ದು ಅವರಿಗೆ ಮೆಸ್ಕಾಂ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಕೋವಿಡ್ ನಿಯಾಮಾವಳಿಯಂತೆ ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಕಾರ್ಯ ಮತ್ತು ಪಾಲನಾ ಸಹಾಯಕ ಇಂಜಿನಿಯರ್ ರಾಮಚಂದ್ರ ಎ. ರವರು ಇಬ್ರಾಹಿಂರವರನ್ನು ಸನ್ಮಾನಿಸಿ ಮಾತನಾಡಿ ಇಬ್ರಾಹಿಂರವರು ದಕ್ಷ, ಪ್ರಾಮಾಣಿಕ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಹಗಲು ಇರುಳೆನ್ನದೆ ತನ್ನ ನಗುಮುಖದ ಸೇವೆಯ ಮೂಲಕ ಕಾರ್ಯನಿರ್ವಹಿಸಿದ್ದಾರೆ. ಅವರ ಸೇವೆಯು ಇತರರಿಗೆ ಮಾದರಿಯಾಗಲಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇಬ್ರಾಹಿಂರವರು ತನ್ನ ಸೇವಾವಧಿಯಲ್ಲಿ ಸಹಕರಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.

ಮೆಸ್ಕಾಂ ವಿದ್ಯುಚ್ಚಕ್ತಿ ಪುತ್ತೂರು ವಿಭಾಗದ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ, ಪುತ್ತೂರು ನಗರ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶಿಲ್ಪಾ ಎಸ್. ಶೆಟ್ಟಿ, ಮೆಸ್ಕಾಂ ಉಪ್ಪಿನಂಗಡಿ ಕಾರ್ಯ ಮತ್ತು ಪಾಲನಾ ಶಾಖೆಯ ಸಹಾಯಕ ಇಂಜಿನಿಯರ್ ರಾಜೇಶ್, ಕರ್ನಾಟಕ ವಿದ್ಯುಚ್ಚಕ್ಕತಿ ಪ್ರಸರಣಾ ವಿಭಾಗದ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯ ಸುಂದರರವರು ಇಬ್ರಾಹಿಂರವರಿಗೆ ಸನ್ಮಾನಿಸಿ ತಮ್ಮ ನಿವೃತ್ತಿ ಜೀವನವು ಸುಖಕರವಾಗಲಿ, ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಶುಭಹಾರೈಸಿದರು. ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಪುತ್ತೂರು ಮೆಸ್ಕಾಂ ಕಿರಿಯ ಪವರ್‌ಮ್ಯಾನ್ ಲಕ್ಷ್ಮಣ ಛಲವಾದಿ ಹಾಗೂ ಇತರರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.