ನರಿಮೊಗರು ಯುವಕ ಮಂಡಲದಿಂದ ವಿಕಲಚೇತನರಿಗೆ ಅಕ್ಕಿ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಯೂಸುಫ್ ರೆಂಜಲಾಡಿ

  • ವಿಕಲಚೇತನರಿಗೆ ಧೈರ್ಯ ತುಂಬುವ ಕಾರ್ಯ ಶ್ಲಾಘನೀಯ – ಸಂಜೀವ ಮಠಂದೂರು

14 ಕ್ವಿಂಟಾಲ್ ಅಕ್ಕಿ ವಿತರಣೆ:
ನಮ್ಮ ಯುವಕ ಮಂಡಲದ ಮೂಲಕ ಅನೇಕ ವರ್ಷಗಳಿಂದ ವಿವಿಧ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಈಗಾಗಲೇ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ಮತ್ತು ಧನ ಸಹಾಯ ಮಾಡಿದ್ದೇವೆ. ಇದೀಗ ಗ್ರಾ.ಪಂ ವ್ಯಾಪ್ತಿಯ ೧೩೮ ವಿಕಲಚೇತನರಿಗೆ ಅಂದಾಜು ರೂ.೫೦ ಸಾವಿರ ವೆಚ್ಚದಲ್ಲಿ ಒಟ್ಟು ೧೪ ಕ್ವಿಂಟಾಲ್ ಅಕ್ಕಿಯನ್ನು ವಿತರಣೆ ಮಾಡಿದ್ದೇವೆ. ನಮ್ಮ ಕಾರ್ಯಕ್ರಮಗಳಿಗೆ ಜಾತಿ, ಮತ, ಬೇಧವಿಲ್ಲದೆ ಎಲ್ಲರೂ ಆರ್ಥಿಕ ನೆರವು ನೀಡುವ ಮೂಲಕ ಸಹಕರಿಸುತ್ತಿದ್ದಾರೆ. ಮುಂದಕ್ಕೂ ವಿವಿಧ ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಮಾಡುವ ಗುರಿ ನಮ್ಮದಾಗಿದೆ ನವೀನ್ ಕುಮಾರ್ ರೈ ಶಿಬರ, ಕಾರ್ಯಾಧ್ಯಕ್ಷರು ಯುವಕ ಮಂಡಲ

ಪುತ್ತೂರು: ನರಿಮೊಗರು ಯುವಕ ಮಂಡಲ(ರಿ.) ಪುರುಷರಕಟ್ಟೆ ಇದರ ವತಿಯಿಂದ ನರಿಮೊಗರು ಗ್ರಾ.ಪಂ ವ್ಯಾಪ್ತಿಯ ವಿಕಲಚೇತನರಿಗೆ ಅಕ್ಕಿ ವಿತರಣೆ ಜೂ.೫ರಂದು ನರಿಮೊಗರು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಅಕ್ಕಿ ವಿತರಣೆಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ಕೋವಿಡ್ ಸಂಕಷ್ಟದ ಸಮಯಲ್ಲಿ ವಿಕಲಚೇತನರಿಗೆ `ನಿಮ್ಮೊಂದಿಗೆ ನಾವಿದ್ದೇವೆ’ ಎನ್ನುವ ಧೈರ್ಯ ತುಂಬುವ ಕಾರ್ಯವನ್ನು ಮಾಡಿರುವ ಯುವಕ ಮಂಡಲದವರ ಕಾರ್ಯ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊರೋನಾ ವಿರುದ್ಧದ ಹೋರಾಟ ಇನ್ನೂ ಮುಂದುವರಿಸಬೇಕಾಗಿದ್ದು ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಣ ಮಾಡಬೇಕಾದ ಅವಶ್ಯಕತೆಯಿದೆ, ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.

ಕೊರೋನಾ ಮುಕ್ತ ಗ್ರಾಮವಾಗಲಿ-ರಾಧಾಕೃಷ್ಣ ಆಳ್ವ
ತಾ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ ತಾಲೂಕಿನಲ್ಲಿ ಕೊರೋನಾ ನಿಯಂತ್ರಿಸುವ ವಿಷಯದಲ್ಲಿ ಸಂಘ ಸಂಸ್ಥೆಗಳು, ಗ್ರಾ.ಪಂಗಳು, ಸಹಕಾರಿ ಸಂಘಗಳು ಉತ್ತಮ ಸಹಕಾರ ನೀಡುತ್ತಿದೆ. ಶಾಸಕರ ವಾರ್ ರೂಂ ಮೂಲಕ ನಿರಂತರ ಕೆಲಸಗಳು ನಡೆಯುತ್ತಿದೆ ಎಂದರು. ನರಿಮೊಗರು ಗ್ರಾ.ಪಂ ಶೀಘ್ರದಲ್ಲೇ ಕೊರೋನಾ ಮುಕ್ತ ಪಂಚಾಯತ್ ಆಗಲಿ ಎಂದು ಅವರು ಹೇಳಿದರು.

೪೫ ವರ್ಷಗಳಿಂದ ಕಾರ್ಯಾಚರಿಸುತ್ತಿದೆ-ಸುಧಾಕರ ಕುಲಾಲ್
ಯುವಕ ಮಂಡಲದ ಅಧ್ಯಕ್ಷರು, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಮಾತನಾಡಿ ಕಳೆದ ೪೫ ವರ್ಷಗಳಿಂದ ನಮ್ಮ ಯುವಕ ಮಂಡಲದ ವಿವಿಧ ಸಮಾಜ ಸೇವೆಗಳನ್ನು ಮಾಡುತ್ತಿದೆ. ಇದೀಗ ಕೋವಿಡ್ ಸಂದರ್ಭದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಜಿ.ಪಂ ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನರಿಮೊಗರು ಗ್ರಾ.ಪಂ ಪಿಡಿಓ ರವಿಚಂದ್ರ, ಯುವಕ ಮಂಡಲದ ಕಾರ್ಯಾಧ್ಯಕ್ಷ ನವೀನ್ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಪಾಣಾಜೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಮ ಪೂಜಾರಿ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಯಶೋಧ ಗೌಡ, ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧುಕರ ಆಚಾರ್, ತಾ.ಪಂ ಮಾಜಿ ಸದಸ್ಯ ಪರಮೇಶ್ವರ ಭಂಡಾರಿ ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಆಚಾರ್ಯ ಕೂಡುರಸ್ತೆ, ಪ್ರಮುಖರಾದ ಶ್ಯಾಂ ಭಟ್, ಸುಂದರ ನಾಯ್ಕ್, ಪ್ರವೀಣ್ ನಾಯ್ಕ್ ಸೇರಾಜೆ ಮತ್ತಿತರರು ಉಪಸ್ಥಿತರಿದ್ದರು.

ನರಿಮೊಗರು ಗ್ರಾ.ಪಂ ಸದಸ್ಯೆ ಮಲ್ಲಿಕಲತಾ ರೈ ಸ್ವಾಗತಿಸಿದರು. ನವೀನ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ನರಿಮೊಗರು ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.