ಮುಂಡೂರು ಬಿಜೆಪಿ ಗ್ರಾಮ ಸಮಿತಿ, ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ಆಶ್ರಯದಲ್ಲಿ ಪರಿಸರ ದಿನಾಚರಣೆ- ಗಿಡ ಬೆಳೆಸಿ ಅಭಿಯಾನಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತೀಯ ಜನತಾ ಪಾರ್ಟಿ ಮುಂಡೂರು ಮತ್ತು ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ಜಂಟಿ ಆಶ್ರಯದಲ್ಲಿ ಮುಂಡೂರು ಗ್ರಾಮದ ಹಲವೆಡೆ ಅಶ್ವಥ ಗಿಡವನ್ನು ನೆಡುವುದರ ಮೂಲಕ ಪರಿಸರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪ ಎನ್ ಹಾಗೂ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಅಶ್ವತ ಗಿಡವನ್ನು ನೆಡುವುದರ ಮೂಲಕ `ಗಿಡ ನೆಡಿ ಅಭಿಯಾನ’ಕ್ಕೆ ಚಾಲನೆ ನೀಡಿದರು. ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಪ್ರತೀ ಮನೆಯಲ್ಲಿ ಒಂದು ಗಿಡವನ್ನಾದರೂ ನೆಡಬೇಕೆಂದು ಹೇಳಿದರು.

ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಪರಿಸರ ನಾಶದಿಂದ ಪ್ರಸ್ತುತ ಅನೇಕ ಸಮಸ್ಯಗಳನ್ನು ಎದುಸುತ್ತಿರುವ ನಾವೆಲ್ಲರೂ ಪ್ರಕೃತಿ ರಕ್ಷಿಸುವ ನಿಟ್ಟಿನಲ್ಲಿ ಸಸಿ ನೆಟ್ಟು ಈ ಭೂಮಿಯ ಋಣ ತೀರಿಸಲು ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದರು. ಗ್ರಾ.ಪಂ ಸದಸ್ಯರಾದ ಬಾಲಕೃಷ್ಣ ಪೂಜಾರಿ ಹಾಗೂ ಅಶೋಕ್ ಕುಮಾರ್ ಪುತ್ತಿಲ, ಅನಿಲ್ ಕಣ್ಣರ್ನೂಜಿ, ವಸಂತ್ ರೈ, ಹರೀಶ್ ನಾಯ್ಕ್, ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಶ್ರೀಧರ ನಾಯ್ಕ್, ಯೋಗೀಶ್ ಕಲ್ಲಮ, ಪ್ರಸಾದ್ ಬಿಕೆ, ಧನಂಜಯ ಕಲ್ಲಮ, ಅಮೃತ್ ಕಲ್ಲಮ, ಜಗದೀಶ ಕಲ್ಲಮ, ದಿನೇಶ್. ಬಿ.ಕೆ, ಅಶೋಕ್ ಕೊಂಬಿಲ, ಶಿವಪ್ಪ ಬಿ.ಕೆ, ರುಕ್ಮಯ್ ಕೇದಗೆದಡಿ, ಬಾಲಚಂದ್ರ ಸೊರಕೆ, ಸಾತ್ವಿಕ್ ಎನ್ ಭಾಗವಹಿದ್ದರು. ಕಾರ್ಯಕ್ರಮದಲ್ಲಿ ಅಶ್ವಥ ಗಿಡವನ್ನು ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.