ಮನೆಯಲ್ಲಿ ತರಕಾರಿ ತೋಟ ಮಾಡಿ ಪ್ರಶಸ್ತಿ ಪಡೆಯಲಿದ್ದಾರೆ ವಿದ್ಯಾರ್ಥಿಗಳು…!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಿಂದ `ಗ್ರೀನ್ ಹೋಮ್ ಚಾಲೆಂಜ್’ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: ವಿಶ್ವ ಪರಿಸರ ದಿನದ ಅಂಗವಾಗಿ ಬೆಳಂದೂರು ಈಡನ್ ಗ್ಲೋಬಲ್ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ವಿದ್ಯಾರ್ಥಿಗಳು ಮನೆಯಲ್ಲಿದ್ದುಕೊಂಡು ವಿವಿಧ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಂಡರು ನನ್ನ ಸ್ವಂತ ಮರ, ಪ್ರಕೃತಿಯ ಚಿತ್ರ ಬಿಡಿಸು, ಹಸಿರು ಕ್ವಿಝ್, ಪರಿಸರ ಪ್ರತಿಜ್ಞೆ ಎಂಬ ವಿನೂತನ ಕಾರ್ಯಕ್ರಮಗಳ ಮೂಲಕ ಪರಿಸರದ ಬಗೆಗೆ ವಿದ್ಯಾರ್ಥಿಗಳಲ್ಲಿ ಪ್ರಜ್ಞೆ ಮೂಡಿಸುವ ಕಾರ್ಯವನ್ನು ಈಡನ್ ಶಾಲಾ ಪ್ರಾಂಶುಪಾಲ ರಂಸೀ ಮುಹಮ್ಮದ್‌ರವರ ಮುಂದಾಳತ್ವದಲ್ಲಿ ಶಿಕ್ಷಕ ವೃಂದದವರ ಮತ್ತು ಪೋಷಕರ ಸಹಕಾರದೊಂದಿಗೆ ನಡೆಯಿತು. ಚೇರ್‌ಮೆನ್ ಅಬ್ದುಲ್ ಹಮೀದ್ ಹಾಜಿ, ಸಂಚಾಲಕ ಇಸ್ಮಾಯಿಲ್ ಹಾಜಿ ಬೈತಡ್ಕ, ಟ್ರಸ್ಟಿ ಪುತ್ತುಬಾವ ಹಾಜಿ ಶುಭ ಹಾರೈಸಿದರು.

ಗ್ರೀನ್ ಹೋಮ್ ಚಾಲೆಂಜ್:
ಸ್ಪರ್ಧೆಗಳ ಪೈಕಿ ಗ್ರೀನ್ ಹೋಮ್ ಚಾಲೆಂಜ್ ಎನ್ನುವ ವಿಶೇಷ ಸ್ಪರ್ಧೆಯೊಂದನ್ನು ವಿದ್ಯಾಸಂಸ್ಥೆ ಏರ್ಪಡಿಸಿದೆ. ಗ್ರೀನ್ ಹೋಮ್ ಚಾಲೆಂಜ್ (ಹಸಿರು ಮನೆ ಸ್ಪರ್ಧೆ)ಯ ಅಂಗವಾಗಿ ಸುಮಾರು 500ರಷ್ಟು ಮನೆಗಳಲ್ಲಿ ತರಕಾರಿ ಕೈತೋಟವನ್ನು ನಿರ್ಮಾಣ ಮಾಡಿ, ಮೂರು ತಿಂಗಳ ಬಳಿಕ ಉತ್ತಮವಾಗಿ ಬೆಳೆದ ಕೈತೋಟಕ್ಕೆ ಪ್ರಶಸ್ತಿ ನೀಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿದ್ಯಾರ್ಥಿಗಳಲ್ಲಿ ಕೃಷಿ ಬಗೆಗಿನ ಆಸಕ್ತಿ ಮತ್ತು ಪರಿಸರದ ಬಗ್ಗೆ ಕಾಳಜಿ ಮೂಡಿಸುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಸಂಸ್ಥೆಯ ಪ್ರಾಂಶುಪಾಲ ರಂಸೀ ಮಹಮ್ಮದ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.