ಕಡಬ : ಸಚಿವ ಅಂಗಾರರವರ ವಾರ್ ರೂಮ್ ಪ್ರಮುಖರ ಸಭೆ ಉಚಿತ ಹೋಮಿಯೋಪತಿ ಔಷಧಿ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ ತಾಲೂಕಿನ 42 ಗ್ರಾಮಗಳಿಗೆ ಸಚಿವರ ವಾರ್‌ರೂಮ್ ಸೇವಭಾರತಿಯ ಮೂಲಕ ಉಚಿತ ಹೋಮಿಯೋಪತಿ ಔಷಧಿಯನ್ನು ತಲುಪಿಸಲಾಯಿತು.

ಕಡಬ: ಸಚಿವ ಅಂಗಾರರವರ ವಾರ್ ರೂಮ್‌ನ ಪ್ರಮುಖರ ಸಭೆ ಹಾಗು ಉಚಿತ ಹೋಮಿಯೋಪತಿ ಔಷಧಿ ವಿತರಣೆ ಕಡಬ ಸರಸ್ವತಿ ವಿದ್ಯಾಲಯದ ವಠಾರದಲ್ಲಿ ನಡೆಯಿತು. ಸಚಿವ ಅಂಗಾರ ಎಸ್.ರವರು ಉಚಿತ ಹೋಮಿಯೋಪತಿ ಔಷದ ವಿತರಣೆ ಮಾಡಿ ಮಾತನಾಡಿ ಕೋವಿಡ್ ನಿರ್ವಹಣೆ ಮಾಡಬೇಕಾದರೆ ನಮಗೆ ಶಕ್ತಿ ಇರಬೇಕು. ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೋವಿಡ್ ಲಸಿಕೆಯನ್ನು ಮೊದಲ ಬಾರಿಗೆ ಭಾರತದಲ್ಲಿ ಉತ್ಪಾದನೆ ಮಾಡಲಾಯಿತು. ಸುಳ್ಯ ವಿಧಾನ ಸಭಾ ಕ್ಷೇತ್ರವನ್ನು ಕೊರೋನ ಮುಕ್ತವನ್ನಾಗಿ ಮಾಡಬೇಕಾದರೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಬೇಕು. ಈ ನಿಟ್ಟಿನಲ್ಲಿ ಸಚಿವರ ವಾರ್ ರೂಮ್ ಸೇವಾ ಭಾರತಿಯ ಮೂಲಕ ಪ್ರತಿ ಗ್ರಾಮ ಗ್ರಾಮಗಳಿಗೆ ಹೋಮಿಯೋಪತಿ ಔಷಧಿಯನ್ನು ಉಚಿತವಾಗಿ ವಾರ್‌ರೂಮ್ ಮೂಲಕ ಪ್ರಯೋಗಿಕವಾಗಿ ನೀಡಲಾಗುವುದೆಂದು ತಿಳಿಸಿದರು. ಬೆಂಗಳೂರಿನ ವಾಸವಿ ಹಾಸ್ಪಿಟಲ್‌ನ ಐಸಿಯುನ ವಿಶೇಷ ತಜ್ಞ ಡಾ. ರವೀಂದ್ರ ರೆಡ್ಡಿ ಮತ್ತು ಡಾಕ್ಟರ್ ವೇಣುಗೋಪಾಲ್ ರವರು ಕೋವಿಡ್ ಪಾಸಿಟಿವ್ ಬರದಂತೆ ತಡೆಯುವ ಹೋಮಿಯೋಪತಿ ಔಷಧಿಯ ಬಗ್ಗೆ ಮಾಹಿತಿ ನೀಡಿ ಒಬ್ಬ ವ್ಯಕ್ತಿ ಮೂರರಿಂದ ನಾಲ್ಕು ಡ್ರಾಪ್‌ನ್ನು ತಣ್ಣನೆ ಬಿಸಿ ನೀರಿನ ಮೂಲಕ ಒಮ್ಮೆ ಸೇವನೆ ಮಾಡಬೇಕೆಂದರು. ಒಂದು ಬಾಟಲ್ ಔಷಧಿಯನ್ನು ಸಾಧಾರಣ ಒಂದು ಸಾವಿರ ಜನರಿಗೆ ನೀಡಬಹುದು ಎಂದು ಹೇಳಿದರು.

ಸೇವಾಭಾರತಿಯ ಪ್ರಮುಖರಾದ ನ.ಸೀತಾರಾಮರವರು ಮಾತನಾಡಿ ನಮ್ಮ ದೇಶದ ಕೌಟುಂಬಿಕ ಪದ್ಧತಿಯಿಂದಾಗಿ ಯಾವುದೇ ಸಂಕಷ್ಟ ಬಂದರೂ, ನಾವೆಲ್ಲರೂ ಪರಸ್ಪರ ಧೈರ್ಯಶಾಲಿಗಳಾಗಿ ಬದುಕುತ್ತಿದ್ದೇವೆ. ಮನೆಯಿಂದ ಒಳ್ಳೆಯ ಮೌಲ್ಯ, ಚಿಂತನೆ, ಚಟುವಟಿಕೆ, ಮನೆಯಿಂದ ನಡೆಯಬೇಕು ಇದು ಮನೆಯ ಸಹಜ ಗುಣವಾಗಬೇಕು. ಇದಕೋಸ್ಕರ ಗೃಹಮಿಲನ ಕಾರ್ಯಕ್ರಮವನ್ನು ಪ್ರತಿ ಮನೆಯಲ್ಲಿ ಮಾಡಬೇಕೆಂದರು. ಸುಳ್ಯ ವಿಧಾನಸಭಾ ಕ್ಷೇತ್ರದ ಸಚಿವರ ವಾರ್‌ರೂಮ್ ಸಂಚಾಲಕ ಹರೀಶ್ ಕಂಜಿಪಿಲಿ ಸ್ವಾಗತಿಸಿ ಸಚಿವರ ವಾರ್‌ರೂಮ್ ಸದಸ್ಯ ರಾಕೇಶ್ ರೈ ಕಡೆಂಜಿ ಕಾರ್ಯಕ್ರಮ ನಿರೂಪಿಸಿ ವಾಡ್ಯಪ್ಪ ಗೌಡ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.