ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಚಪ್ಪರಕ್ಕೆ ತಂದಿದ್ದ ಶೀಟ್ ಕಳವು-ಅಶೋಕ್ ರೈ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಚಪ್ಪರಕ್ಕೆಂದು ಮೈದಾನದಲ್ಲಿ ಇರಿಸಲಾಗಿದ್ದ ಶೀಟ್‌ಗಳು ಕಳವುಗೊಂಡಿರುವ ಕುರಿತು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕೋವಿಡ್ ನಿಯಂತ್ರಣಕ್ಕಾಗಿ ಜನತಾ ಕರ್ಫ್ಯೂ ಜಾರಿಗೊಂಡ ಬಳಿಕ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮುಂದೂಡಲ್ಪಟ್ಟಿದ್ದು, ಕಾರ್ಯಕ್ರಮಕ್ಕೆ ಚಪ್ಪರ ಅಳವಡಿಸಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶಾಮಿಯಾನ ಉದ್ಯಮಿಯವರು ಚಪ್ಪರ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದರು. ಕಾರ್ಯಕ್ರಮ ಮೂಂದೂಡಲ್ಪಟ್ಟಿದ್ದರಿಂದ ತಂದಿದ್ದ ಶೀಟ್‌ಗಳನ್ನು ಪರಿಸರದ ಮೈದಾನದಲ್ಲಿ ಇರಿಸಲಾಗಿತ್ತು. ಆದರೆ ಜೂ.6ರಂದು ಬೆಳಿಗ್ಗೆ ನೋಡುವಾಗ ಸುಮಾರು 150 ಶೀಟ್ ಕಳವಾಗಿದೆ ಎಂದು ಅಶೋಕ್ ರೈ ಅವರು ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.