ಲಾಕ್‌ಡೌನ್‌ನಲ್ಲಿ ಯುವಕರಿಂದ ಶ್ರಮದಾನ: ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ರಸ್ತೆ ದುರಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರಮ,ಸೇವೆ,ಸಹಾಯ ಎಂಬ ಧ್ಯೇಯದೊಂದಿಗೆ ಸಮಾಜಮುಖಿ ಕಾರ್ಯ ಮಾಡುತ್ತಿರುವ ಮಜ್ಜಾರಡ್ಕ ಶ್ರೀ ವಿಷ್ಣು ಯುವ ಶಕ್ತಿ ಬಳಗದ ವತಿಯಿಂದ ಸ್ವಚ್ಛ ಭಾರತ್ ಅಂಗವಾಗಿ ಕಟ್ಟತ್ತಾರುನಿಂದ ಮಾಡದಗುಡ್ಡೆ ತನಕ ಶ್ರಮವಾನ ನಡೆಯಿತು. ರಸ್ತೆ ಬದಿಯ ಪೊದೆ ಗಿಡಗಂಟಿಗಳನ್ನು ಕಡಿದು ಸ್ವಚ್ಛ ಮಾಡಲಾಯಿತು. ನೀರು ಹರಿದು ಹೋಗಲು ರಸ್ತೆಯ ಇಕ್ಕೆಲಗಳಲ್ಲಿ ಕಣಿಯ ವ್ಯವಸ್ಥೆ ಮಾಡಲಾಯಿತು. ಸಂಘಟನೆಯ ಅಧ್ಯಕ್ಷ ರವಿ ಮಜ್ಜಾರು ಹಾಗೂ ಸಂಘಟಕ ರಾಜೇಶ್ ಕೆ.ಮಯೂರ ಗೋಳ್ತಿಲರವರ ಮುಂದಾಳತ್ವದಲ್ಲಿ ನಡೆದ ಶ್ರಮದಾನದಲ್ಲಿ ಅನಿಲ್ ಮಣಿಯಾಣಿ ಗೋಳ್ತಿಲ ಉಪಹಾರದ ವ್ಯವಸ್ಥೆ. ರಾಜೇಶ್ ಕೆ ಮಯೂರ, ಪ್ರತೀಕ್ ಮಣಿಯಾಣಿ ಗೋಳ್ತಿಲ, ಸಂಘಟನಾ ಕಾರ್ಯದರ್ಶಿ ಸದಾಶಿವ ಮಣಿಯಾಣಿ ಗೋಳ್ತಿಲ, ಜಗದೀಶ್ ಕೋಡಿಯಡ್ಕರವರುಗಳು ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನುಮಾಡಿದ್ದರು. ವಸಂತ ಪೂಂಜಾ ಗೋಳ್ತಿಲ ಮತ್ತು ರವಿ ಸ್ವಾಮಿನಗರ, ಉದಯ ಸ್ವಾಮಿನಗರ ಇವರು ಹುಲ್ಲು ಕಟ್ಟಿಂಗ್ ಮೆಷಿನ್ ಅನ್ನು ಒದಗಿಸಿದ್ದರು. ಜಯಲಕ್ಷ್ಮೀ ಗೋಳ್ತಿಲ, ಅಕ್ಷತಾ ಸ್ವಾಮಿನಗರ ಭೋಜನ ತಯಾರಿ ಮಾಡಿದ್ದರು. ಸಂಘಟನೆಯ ಗೌರವ ಅಧ್ಯಕ್ಷ ಮೋಹನ್ ರೈ ಓಲೆಮುಂಡೋವು ಉತ್ತೇಜನ ನೀಡಿದ್ದರು.

ಶ್ರಮದಾನದಲ್ಲಿ ಗೌರವ ಸಲಹೆಗಾರ ಲೋಕನಾಥ ಪೂಜಾರಿ ಗೋಳ್ತಿಲ, ಉಪಾಧ್ಯಕ್ಷ ಪುರುಷೋತ್ತಮ ಗೋಳ್ತಿಲ, ಜತೆ ಕಾರ್ಯದರ್ಶಿ ವಿನೋದ್ ಸ್ವಾಮಿನಗರ, ಕೋಶಾಧಿಕಾರಿ ಗುರುಪ್ರಸಾದ್ ಮಜ್ಜಾರ್, ಸದಸ್ಯರುಗಳಾದ ಲೋಕೇಶ್ ಸ್ವಾಮಿನಗರ, ನವೀನ್ ಮಜ್ಜಾರ್, ಸಾಂತಪ್ಪ ಗೋಳ್ತಿಲ, ಶಾಂತರಾಮ ಗೋಳ್ತಿಲ, ಕಿಶೋರ್ ಗೋಳ್ತಿಲ, ಶ್ರೇಯಸ್ ರೈ ಗೋಳ್ತಿಲ, ನವೀನ್ ಪಂಜ, ಮೋಹನ್ ಬಂಗಾರ್‌ಗುಡ್ಡೆ, ಚಿದಾನಂದ ಸ್ವಾಮಿನಗರ, ಉದಯ್ ಸ್ವಾಮಿನಗರ, ಪ್ರತೀಕ್ ಗೋಳ್ತಿಲ, ಆಧ್ಯ ಆರ್.ಜೆ,ಗೋಳ್ತಿಲ, ಜನಾರ್ದನ್ ಮಜ್ಜಾರ್, ಸಮಿತ್ ಮಜ್ಜಾರ್, ಕೃತಿಕ್ ಮಣಿಯಾಣಿ ಗೋಳ್ತಿಲ, ಅನಿಲ್ ಮಣಿಯಾಣಿ ಗೋಳ್ತಿಲ, ಹೃತಿಕ್ ಮಣಿಯಾಣಿ ಗೋಳ್ತಿಲ ಮತ್ತಿತರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.