ಇಡಬೆಟ್ಟು: ದಿ.ಸುಬ್ರಾಯ ವೈಲಾಯರವರ ಸ್ಮರಣಾರ್ಥ 200 ಕುಟುಂಬಳಿಗೆ ಆಹಾರ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತ್ತೀಚೆಗೆ ನಿಧನರಾದ ಕುರಿಯ ಗ್ರಾಮದ ಸುಬ್ರಾಯ ವೈಲಾಯರವರ ಸ್ಮರಣಾರ್ಥ ಅವರ ಕುಟುಂಬ ವರ್ಗದ ವತಿಯಿಂದ ರೂ.1ಲಕ್ಷ ವೆಚ್ಚದಲ್ಲಿ ಅಕ್ಕಿ ಹಾಗೂ ಇತರ ದಿನಸಿ ಸಾಮಾನುಗಳನ್ನೊಳಗೊಂಡ ಕಿಟ್‌ಗಳನ್ನು ಜೂ.5ರಂದು ಇಡಬೆಟ್ಟುವಿನಲ್ಲಿ ವಿತರಿಸಲಾಯಿತು. ಸುಮಾರು 200 ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು.

ವೇದಿಕೆಯಲ್ಲಿ ದಿ.ಸುಬ್ರಾಯ ವೈಲಾಯರವರ ಪುತ್ರ ಕೃಷ್ಣರಾಜ ವೈಲಾಯ, ತಾ.ಪಂ ಕೆ.ಡಿ.ಪಿ ಸದಸ್ಯ ವಿಜಯ ಬಿ ಎಸ್, ಆರ್ಯಾಪು ಗ್ರಾ.ಪಂ ಸದಸ್ಯ ನೇಮಾಕ್ಷ ಸುವರ್ಣ, ಯಾಕುಬ್ ಕುರಿಯ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಸಿರ್ ಇಡಬೆಟ್ಟು, ಈಶ್ವರ ಗೌಡ ಹಾಗೂ ಇಬ್ರಾಹಿಂ ಅಮ್ಮುಂಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿ.ಸುಬ್ರಾಯ ವೈಲಾಯರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ಮೌನ ಪ್ರಾರ್ಥನೆ ನೆರವೇರಿಸಲಾಯಿತು. ಶಿಕ್ಷಕಿ ನೀನಾ ಕುವೆಲ್ಲೋರವರು ಸುಬ್ರಾಯ ವೈಲಾಯರಿಗೆ ನುಡಿ ನಮನ ಸಲ್ಲಿಸಿದರು. ಶಿಕ್ಷಕಿ ಯಶೋಧಾ ಪಿ ಸ್ವಾಗತಿಸಿದರು. ಜಯಮೂಲ ವಂದಿಸಿದರು. ವಿಶಾಲಾಕ್ಷಿ ಕೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.