ನೆಲ್ಯಾಡಿ: ‘ಪುದುಮನಾಸ್ ಹೋಮಿಯೋ ಹೋಂ’ ಕ್ಲಿನಿಕ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಹೋಮಿಯೋಪತಿ ಕ್ಲಿನಿಕ್’ ಪುದುಮನಾಸ್ ಹೋಮಿಯೋ ಹೋಂ’ ಜೂ.7ರಂದು ಬೆಳಿಗ್ಗೆ ನೆಲ್ಯಾಡಿಯ ಸೈಂಟ್ ಮೇರಿಸ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಬಿನೋಯ್‌ರವರು ಆಶೀರ್ವಚನ ವಿಧಿ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಹೊಸ ಹೊಸ ಉದ್ಯಮಗಳು ಆರಂಭಗೊಂಡಲ್ಲಿ ಆ ಊರಿನ ಅಭಿವೃದ್ಧಿ ಸಾಧ್ಯವಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿಯು ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಲ್ಲಿ ಹೊಸ ಕಟ್ಟಡಗಳು, ಹೊಸ ಉದ್ದಿಮೆಗಳು ಬರುತ್ತಲೇ ಇವೆ. ಇವೆಲ್ಲವೂ ಆ ನಗರದ ಅಭಿವೃದ್ಧಿಗೆ ಪೂರಕವಾಗಿವೆ. ನೆಲ್ಯಾಡಿಯಂತಹ ಪಟ್ಟಣದಲ್ಲಿ ಈಗ ಜನರಿಗೆ ಬೇಕಾದ ಎಲ್ಲಾ ಸೌಕರ್ಯಗಳೂ ಸಿಗುತ್ತಿವೆ. ಇಲ್ಲಿನ ಜನರು ಪೇಟೆ ಪಟ್ಟಣಕ್ಕೆ ಹೋಗುವುದು ತಪ್ಪುತ್ತಿದೆ. ಕೊರೋನಾದಂತಹ ಸಂಕಷ್ಟ ಕಾಲದಲ್ಲೂ ಡಾ.ಮೇಗ್ನ ಚಾಕೋರವರು ನೆಲ್ಯಾಡಿಯಲ್ಲಿ ಹೋಮಿಯೋ ಕ್ಲಿನಿಕ್ ತೆರೆಯುವ ಮೂಲಕ ಜನರ ಸೇವೆಗೆ ಮುಂದಾಗಿದ್ದಾರೆ. ಅವರ ಈ ಸೇವೆಯಲ್ಲಿ ಅವರಿಗೆ ಯಶಸ್ಸು ಸಿಗಲಿ. ನೆಲ್ಯಾಡಿಯ ಜನರಿಗೂ ಉತ್ತಮ ಸೇವೆ ದೊರೆಯುವಂತಾಗಲಿ, ಜನರಿಗೆ ದೇವರು ಆರೋಗ್ಯ ಕರುಣಿಸಲಿ ಎಂದು ಹೇಳಿದರು.

ಡಾ.ಮೇಗ್ನ ಚಾಕೋರವರು ತಾಯಿ ರೋಸಮ್ಮರವರು ನೂತನ ಕ್ಲಿನಿಕ್‌ನ ಉದ್ಘಾಟನೆ ನೆರವೇರಿಸಿದರು. ಸೈಂಟ್ ಮೇರಿಸ್ ಕಟ್ಟಡದ ಮಾಲಕ ಟೋಮಿ ಮತ್ತಿತರರು ಆಗಮಿಸಿ ನೂತನ ಕ್ಲಿನಿಕ್‌ಗೆ ಶುಭಹಾರೈಸಿದರು. ಕ್ಲಿನಿಕ್‌ನ ವೈದ್ಯೆ ಡಾ.ಮೇಗ್ನ ಚಾಕೋರವರು ಸ್ವಾಗತಿಸಿ ಮಾತನಾಡಿ, ಹೋಮಿಯೋಪತಿ ಚಿಕಿತ್ಸೆಯ ಕುರಿತಂತೆ ಮಾಹಿತಿ ನೀಡಿದರು. ಸೋಮವಾರದಿಂದ ಶನಿವಾರದ ತನಕ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1ರ ತನಕ ಹಾಗೂ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆ ತನಕ ಕ್ಲಿನಿಕ್ ತೆರೆದುಕೊಂಡಿರುತ್ತದೆ. ಕ್ಲಿನಿಕ್‌ನ ಮೊಬೈಲ್ ನಂ. 7603028760, 9163006640ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಎಂದು ಅವರು ತಿಳಿಸಿದರು. ಚಾಕೋರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.