ಇನ್ನರ್‌ವ್ಹೀಲ್, ಸಾಮಾಜಿಕ ಅರಣ್ಯ, ಸಿಡಿಪಿ ಇಲಾಖೆಯಿಂದ ಮಕ್ಕಳ ಪೌಷ್ಠಿಕತೆ ಕಾಳಜಿ – ಅಂಗನವಾಡಿ ಕೇಂದ್ರಗಳಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಕ್ಕಳ ಪೌಷ್ಠಿಕ ಆಹಾರದ ಕುರಿತು ಮುಂದಿನ ಪೀಳಿಗೆಯಲ್ಲಿ ಉತ್ತಮ ಹಣ್ಣುಗಳು ಸಿಗಬೇಕೆಂದು ಇನ್ನರ್ ವ್ಹೀಲ್ ಕ್ಲಬ್ ನೇತೃತ್ವದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಜೂ.೭ರಂದು ಪರ್ಲಡ್ಕ ಅಂಗನವಾಡಿ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.

ಇನ್ನರ್‌ವ್ಹೀಲ್ ಕ್ಲಬ್‌ನ ನಿಯೋಜಿತ ಅಧ್ಯಕ್ಷೆ ವೀಣಾ ಬಿ.ಕೆ ಮತ್ತು ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಹಣ್ಣಿನ ಗಿಡಗಳನ್ನು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಲತಾ ಅವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಪರ್ಲಡ್ಕ ಅಂಗನವಾಡಿ ವಠಾರದಲ್ಲಿ ಸಾಂಕೇತಿಕವಾಗಿ ಹಣ್ಣಿನ ಗಿಡ ನೆಡಲಾಯಿತು. ಇದರ ಜೊತೆಗೆ ಸ್ಥಳೀಯರಿಗೆ ಹಣ್ಣಿನ ಗಿಡಗಳನ್ನು ವಿತರಣೆ ಮಾಡಲಾಯಿತು.

ಅಂಗನವಾಡಿ ಕೇಂದ್ರದಲ್ಲಿನ ಹಣ್ಣಿ ಗಿಡ ಪ್ರತಿ ಮನೆಗೂ ತಲುಪಿದಂತೆ:
ಸಿಡಿಪಿಒ ಶ್ರೀಲತಾ ಅವರು ಮಾತನಾಡಿ ಮಕ್ಕಳ ಮತ್ತು ಮಹಿಳೆಯರ ಸಮಸ್ಯೆ, ಆರೋಗ್ಯದ ಕುರಿತು ಅಂಗನವಾಡಿ ಕೇಂದ್ರ ಕಾಳಜಿ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿ ಮಗುವಿನ ಪೌಷ್ಠಿಕತೆಗೆ ಹಣ್ಣು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿ ಅಂಗನವಾಡಿಯಲ್ಲಿ ಹಣ್ಣಿನ ಗಿಡ ನೆಟ್ಟರೆ ಅದು ಆ ಪರಿಸರದ ಪ್ರತಿ ಮನೆಗೆ ತಲುಪಿದಂತೆ ಎಂದರು.

ಮಕ್ಕಳ ಬೆಳವಣಿಗೆಗೆ ಹಣ್ಣು ಅಗತ್ಯ:
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ಪರಿಸರದಲ್ಲಿನ ಮೌಲ್ಯಾಧಾರಿತ ಗಿಡ ಮರಗಳು ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಮಕ್ಕಳ ಬೆಳವಣಿಗೆಗೆ ಹಣ್ಣಿನ ಗಿಡಗಳು ಕೂಡಾ ಬೇಕು. ಪ್ರತಿ ಮನೆಯಲ್ಲಿ ಒಂದೊಂದು ಹಣ್ಣಿನ ಗಿಡ ಇದ್ದರೆ ಉತ್ತಮ ಎಂದರು.

ಪರಿಸರ ಸಂರಕ್ಷಣೆ ಅಗತ್ಯ:
ಸಾಮಾಜಿಕ ಅರಣ್ಯ ಇಲಾಖಾಧಿಕಾರಿ ವಿದ್ಯಾರಾಣಿ ಅವರು ಮಾತನಾಡಿ ಮನುಷ್ಯನ ಮೂಲಭೂತ ಅಗತ್ಯವಾದ ಆಹಾರ, ನೀರು, ಗಾಳಿ ಪ್ರತಿಯೊಂದು ಮರಗಿಡಗಳನ್ನು ಅವಲಂಭಿತವಾಗಿರಬೇಕು. ಮಕ್ಕಳು ಇಂತಹ ಗಿಡಮರಗಳ ಪರಿಸರದೊಂದಿಗೆ ಬೆಳೆದಾಗ ಮಾತ್ರ ಅವರಿಗೆ ಇದರ ಮೌಲ್ಯ ಅರಿವಾಗುತ್ತದೆ ಆಗ ಪರಿಸರ ಸಂರಕ್ಷಣೆಯ ಜಾಗೃತಿಯೂ ಮಕ್ಕಳಲ್ಲಿ ಮೂಡುತ್ತದೆ ಎಂದರು. ನಮ್ಮ ಇಲಾಖೆಯ ಮುಕ್ವೆ ನರ್ಸರಿಯಲ್ಲಿ ವನಮಹೋತ್ಸಕ್ಕೆಂದು ಸುಮಾರು ೩ಸಾವಿರ ಗಿಡಗಳನ್ನು ಬೆಳೆಸಿದ್ದೇವೆ. ಈಗಾಗಲೇ ಹಲವು ಸಂಘ ಸಂಸ್ಥೆಗಳಿಗೆ ಗಿಡಗಳನ್ನು ವಿತರಣೆ ಮಾಡಲಾಗಿದೆ ಎಂದರು. ಇನ್ನರ್‌ವ್ಹೀಲ್ ಕ್ಲಬ್ ಕಾರ್ಯದರ್ಶಿ ರಾಜೇಶ್ವರಿ, ಕ್ಲಬ್‌ನ ಸದಸ್ಯರಾದ ರೂಪಲೇಖ, ಶುಭ ಕಾರ್ಯಪ್ಪ, ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ, ಪರ್ಲಡ್ಕ ಶಾಲೆಯ ಮುಖ್ಯಗುರು ವತ್ಸಲಾ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರ, ಸಹಾಯಕಿ ಸುಚಿತ್ರ, ಆಶಾ ಕಾರ್ಯಕರ್ತೆ ವೀಣಾ, ಬಾಲಕವಿಕಾ ಸಮಿತಿ ಅಧ್ಯಕ್ಷೆ ನಂದಿನಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯರಾದ ಸತೀಶ್ ನಾಕ್ ಪರ್ಲಡ್ಕ ಅವರಿಗೆ ಸಾಂಕೇತಿಕವಾಗಿ ಸಸಿಗಳನ್ನು ವಿತರಣೆ ಮಾಡಲಾಯಿತು.

370 ಗಿಡಗಳ ವಿತರಣೆ
ಸಾಮಾಜಿಕ ಅರಣ್ಯ ಇಲಾಖೆಯಿಂದ ೨೨೦ ಹಣ್ಣಿನ ಗಿಡಗಳು ಮತ್ತು ಅರಣ್ಯ ಇಲಾಖೆಯಿಂದ ೧೫೦ ಕಾಡುತ್ಪತಿ, ಮೌಲ್ಯಧಾರಿತ ಗಿಡಗಳು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದಿಂದ ಗೇರು ಹಣ್ಣಿನ ಗಿಡಗಳನ್ನು ನೀಡಲಾಗಿದೆ. ಈ ಎಲ್ಲಾ ಗಿಡಗಳನ್ನು ತಾಲೂಕಿನ ಅಂಗನವಾಡಿಗಳಿಗೆ ನೀಡಿದ್ದು, ಪ್ರತಿ ಅಂಗನವಾಡಿಯಲ್ಲೂ ಒಂದೊಂದು ಹಣ್ಣಿನ ಗಿಡ ಮತ್ತು ಸ್ಥಳೀಯರಿಗೆ ಇತರ ಜಾತಿ ಮರಗಳ ಗಿಡಗಳನ್ನು ನೀಡಲಾಗುವುದು. ಪ್ರತಿ ಅಂಗನವಾಡಿಯಲ್ಲಿ ಗಿಡ ನೆಟ್ಟ ಬಳಿಕ ಪೊಟೋ ಕಳುಹಿಸಿಕೊಡುವಂತೆ ವಿನಂತಿಸಲಾಗಿದೆ – ವೀಣಾ ಬಿ.ಕೆ. ನಿಯೋಜಿತ ಅಧ್ಯಕ್ಷರು ಇನ್ನರ್‌ವ್ಹೀಲ್ ಕ್ಲಬ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.