ಪರ್ಲಡ್ಕ ಪಾಂಗ್ಲಾಯಿ ವಾರ್ಡ್-19ರ ಟಾಸ್ಕ್ ಪೋರ್ಸ್‌ಸಭೆ | ಕೊರೊನಾ ಮುಕ್ತಗೊಳ್ಳಲಿರುವ ವಾರ್ಡ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪರ್ಲಡ್ಕ ಪಾಂಗ್ಲಾಯಿ ವಾರ್ಡ್-19ರ ಟಾಸ್ಕ್ ಪೋರ್ಸ್ ಸಭೆಯು ಜೂ.೭ರಂದು ಮುಂಡ್ಯತ್ತಾಯ ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಪೌರಾಯುಕ್ತ ಮಧು ಎಸ್.ಎಮ್ ಅವರು ಕೋವಿಡ್ ಜಾಗೃತಿ ಕುರಿತು ಮಾತನಾಡಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಮನೆ ಮನೆ ಭೇಟಿ ಸೇರಿದಂತೆ ಹೋಮ್ ಐಸೋಲೇಶನ್, ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಮತ್ತು ಆರೋಗ್ಯವಂತವರಾದವರ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ಇಲ್ಲಿನ ತನಕ ವಾರ್ಡ್‌ನಲ್ಲಿ ೨೪ ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದ್ದು, ಇವತ್ತಿಗೆ ಒಂದೇ ಒಂದು ಆಕ್ಟೀವ್ ಕೇಸ್ ಇಲ್ಲ. ಮುಂದೆ ೧೦ ದಿನದಲ್ಲಿ ಪಾಸಿಟಿವ್ ಕೇಸ್ ಇಲ್ಲದಿದ್ದ ಪಕ್ಷದಲ್ಲಿ ವಾರ್ಡ್-೧೯ ಕೋವಿಡ್ ಮುಕ್ತಗೊಳ್ಳಲಿದೆ ಎಂದರು. ನಗರ ಕಾರ್ಯಪಾಲಕ ಅಭಿಯಂತರ ಶಬರೀನಾಥ ರೈ, ಅಭಿಯಂತರ ಶ್ರೀಧರ್ ನಾಯ್ಕ್, ಆಶಾ ಕಾರ್ಯಕರ್ತೆ ವೀಣಾ ಆಚಾರ್ಯ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರ, ಸುಚಿತ್ರ, ನಾಗೇಶ್ ಪ್ರಭು, ನಗರಸಭೆ ಸಿಬ್ಬಂದಿ ನಾಗೇಶ್, ಕಾರ್ಯಪಡೆ ಸದಸ್ಯರಾದ ಶಿವಕುಮಾರ್, ನಾಗೇಶ್ ಪ್ರಭು, ವೀಣಾ ಭಂಡಾರಿರ, ಪುರುಷೋತ್ತಮ ನಾಯ್ಕ್, ಪ್ರವೀಣ್ ಪಾಂಗ್ಲಾಯಿ, ಪ್ರಶಾಂತ್ ಪಾಂಗ್ಲಾಯಿ, ಪ್ರಕಾಶ್, ಪ್ರಸಾದ್, ರಾಜೀವ್, ಸಂತೋಷ್, ವೀಕ್ಷಿತ್, ದೀಕ್ಷಿತ್, ರಾಜ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.