ಕಡಬ ಸಮುದಾಯ ಆಸ್ಪತ್ರೆಯ ಕೊವ್ಯಾಕ್ಸಿನ್ ಟೋಕನ್ ಗೊಂದಲ ನಿವಾರಿಸಿದ ಸಚಿವರ ವಾರ್ ರೂಮ್ ಕಾರ್ಯಕರ್ತರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ಸಮುದಾಯ ಆಸ್ಪತ್ರೆ ಯಲ್ಲಿ ಕೊರೋನಾ ಲಸಿಕೆ ನೀಡಲು ಟೋಕನ್ ಕೊಡುವ ವಿಚಾರದಲ್ಲಿ ಕಳೆದ ವಾರ ಗೊಂದಲ ಏರ್ಪಟ್ಟಿದ್ದು, ಈ ಗೊಂದಲದ ವಿಚಾರದಲ್ಲಿ ಸಚಿವರ ಸೂಚನೆ ಮೇರೆಗೆ ಸಚಿವರ ವಾರ್ ರೂಮ್ ನ ಸೇವಾ ಭಾರತಿ ಕಾರ್ಯಕರ್ತರು ಮಧ್ಯಪ್ರವೇಶಿಸಿ ಗೊಂದಲ ನಿವಾರಿಸಿದ್ದಾರೆ. ಇದರಿಂದ ಜೂ.7ರಂದು ಸುಮಾರು ನೂರೈವತ್ತಕ್ಕೂ ಮಿಕ್ಕಿ ಜನರಿಗೆ ಯಾವುದೇ ಗೊಂದಲ ಇಲ್ಲದೆ ಕ್ಲಪ್ತ ಸಮಯದಲ್ಲಿ ಕೊರೋನಾ ಲಸಿಕೆ ನೀಡಲಾಗಿದೆ.

ಕಳೆದ ಬಾರಿ ಕಡಬ ಸಮುದಾಯ ಆಸ್ಪತ್ರೆ ಯಲ್ಲಿ ಕೊರೋನಾ ಲಸಿಕೆ ನೀಡಲು ಟೋಕನ್ ಕೊಡುವಲ್ಲಿ ಭ್ರಷ್ಟಾಚಾರ ನಡೆದಿದೆ, ಮಹಿಳೆಯೋರ್ವರು ನೇರವಾಗಿ ಸಚಿವರಿಗೆ ದೂರು ನೀಡಿ ಗಮನ ಸೆಳೆದಿದ್ದರು. ಈ ಬಗ್ಗೆ ಸಚಿವ ಎಸ್. ಅಂಗಾರ ಸ್ಪಂದಿಸಿ ಕಡಬ ಸಚಿವರ ವಾರ್ ರೂಮ್ ಪ್ರಮುಖರಿಗೆ ಸೂಚನೆ ನೀಡಿ, ಸಾರ್ವಜನಿಕ ರಿಗೆ ಲಸಿಕೆ ನೀಡುವಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಈ ಬಗ್ಗೆ ಮಾಜಿ ಜಿ.ಪಂ.ಸದಸ್ಯ ಕೃಷ್ಣ ಶೆಟ್ಟಿಯವರು ಆಸ್ಪತ್ರೆ ಗೆ ಭೇಟಿ ನೀಡಿ ಮುಂದೆ ಲಸಿಕೆ ನೀಡುವ ವೇಳೆ ಯಾವುದೇ ಗೊಂದಲ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ನೀಡುವ ಬಗ್ಗೆ ತಿಳಿದ ವಾರ್ ರೂಮ್ ಕಾರ್ಯಕರ್ತರು ಮುಂಜಾನೆ ಆಸ್ಪತ್ರೆ ಗೆ ತೆರಳಿ ನೂರೈವತ್ತು ಚಯರ್ ಹಾಕಿ ಸರದಿ ಪ್ರಕಾರ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದು, ಯಾರಿಗೂ ಟೋಕನ್ ಕೊಡದೆ, ಆಸ್ಪತ್ರೆಗೆ ಹಾಜರಾದವರಿಗೆ ಮಾತ್ರವೇ ನೀಡಲಾಗಿದೆ. ಆದರೆ ಇಂದು ಲಸಿಕೆ ಹಾಕಿಸಿಕೊಳ್ಳಲು ಸುಮಾರು ಇನ್ನೂರೈವತ್ತಕ್ಕೂ ಮಿಕ್ಕಿ ಜನ ಬಂದಿದ್ದು, ಅದರಲ್ಲಿ ಲಸಿಕೆ ಹಾಕಿಸಿಕೊಂಡು ಉಳಿದವರಿಗೆ ಮುಂದಿನ ಲಸಿಕೆ ನೀಡುವ ಬಗ್ಗೆ ಅವರ ಹೆಸರುಗಳನ್ನು ನೊಂದಾಯಿಸಲಾಗಿದೆ. ಈ ವ್ಯವಸ್ಥೆ ಯಿಂದ ಆಗಮಿಸಿದ ಎಲ್ಲರಿಗೂ ಸಮಾಧಾನ ತಂದಿದೆ. ಈ ಕಾರ್ಯದಲ್ಲಿ ವಾರ್ ರೂಮ್ ಹಾಗೂ ಸೇವಾ ಭಾರತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.