ಹಾರಾಡಿ ಕ್ಲಸ್ಟರ್‌ಗೊಳಪಟ್ಟ ಶಿಕ್ಷಕ ಸಮೂಹದಿಂದ ಅಡುಗೆ ಸಿಬ್ಬಂದಿ, ಗೌರವ ಶಿಕ್ಷಕರಿಗೆ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಶಿಕ್ಷಕರ ಹೃದಯ ಶ್ರೀಮಂತಿಕೆಯನ್ನು ಮೆಚ್ಚಬೇಕಾದ್ದೇ-ಮಠಂದೂರು

ಪುತ್ತೂರು: ಕೊರೋನಾ ರೋಗದಿಂದ ಜನಜೀವನ ಕಷ್ಟವಾಗಿದೆ, ಬದುಕು ಬರ್ಬರವಾಗಿದೆ. ಇಂತಹ ಕಾಲಘಟ್ಟದಲ್ಲಿ ಮತ್ತೊಮ್ಮೆ ಬದುಕು ಕಟ್ಟಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ತಮ್ಮ ಶಾಲೆಯಲ್ಲಿನ ಅಡುಗೆ ಸಿಬ್ಬಂದಿಯವರಿಗೆ, ಗೌರವ ಶಿಕ್ಷಕರಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ಹೃದಯ ಶ್ರೀಮಂತಿಕೆಯನ್ನು ಮೆರೆದಿರುವುದು ಮೆಚ್ಚಬೇಕಾದ್ದೇ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.

ಜೂ.7 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆದ ಹಾರಾಡಿ ಕ್ಲಸ್ಟರ್‌ಗೊಳಪಟ್ಟ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿನ ಅಡುಗೆ ಸಿಬ್ಬಂದಿಯವರಿಗೆ ಹಾಗೂ ಗೌರವ ಶಿಕ್ಷಕರಿಗೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯಲ್ಲಿ ಅವರು ಕಿಟ್‌ನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು. ಕೊರೋನಾ ಎಂಬ ಮಹಾಮಾರಿಯು ದೇವಸ್ಥಾನ, ಚರ್ಚ್, ಮಸೀದಿಯನ್ನು ಮುಚ್ಚಿಸಿದೆ. ತಮ್ಮ ತಮ್ಮ ಶಾಲೆಯಲ್ಲಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಯವರು, ಗೌರವ ಶಿಕ್ಷಕರು ತಮ್ಮಂತೆಯೇ ಬದುಕಬೇಕು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಚಿಂತನೆಯೊಂದಿಗೆ ಅವರುಗಳ ಆರ್ಥಿಕ ಚೈತನ್ಯವನ್ನು ಹೆಚ್ಚಿಸಲು ಇಂದು ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯ ಕಾರ್ಯಕ್ರಮವನ್ನು ಹಾರಾಡಿ ಕ್ಲಸ್ಟರ್‌ನ ಶಿಕ್ಷಕರು ಮಾಡಿರುವುದು ಶ್ಲಾಘನೀಯ. ಕೋವಿಡ್‌ಗೆ ಯಾವುದೇ ಪಕ್ಷವಿಲ್ಲ, ಬಿಪಿಎಲ್, ಎಪಿಎಲ್ ಕಾರ್ಡುದಾರರು ಎಂಬ ಪಕ್ಷಪಾತವಿಲ್ಲ. ಕೋವಿಡ್ ರೋಗವು ಯಾರಿಗೂ ಬರಬಹುದು. ಆದ್ದರಿಂದ ಪ್ರತಿಯೋರ್ವ ನಾಗರಿಕರು ಸರಕಾರದ ನಿಯಮಗಳನ್ನು ಪಾಲಿಸುವ ಮೂಲಕ ಈ ಕೊರೋನಾ ರೋಗವನ್ನು ಹೋಗಲಾಡಿಸುವುದರಿಂದ ಕೊರೋನಾ ಮುಕ್ತ ಭಾರತ ಮೂಡಿಬರಲಿ ಎಂದರು.

ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಕೊರೋನಾ ಸಂಕಷ್ಟದ ಸಮಯದಲ್ಲಿ ಮಾನವರಾದವರು ಮಾನವೀಯತೆಯನ್ನು ತೋರ್ಪಡಿಸಬೇಕಾಗಿರುವುದು ಉತ್ತಮ ವಿಚಾರವಾಗಿದೆ. ಪಟ್ಟಣ, ಹಳ್ಳಿಗಳಲ್ಲಿ ಹಲವಾರು ಸಂಘ-ಸಂಸ್ಥೆಗಳು, ಸಂಘಟನೆಗಳು ಈ ಕೊರೋನಾ ಕಷ್ಟದ ಸಮಯದಲ್ಲಿ ಅಗತ್ಯ ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿರುತ್ತಾರೆ. ಆದ್ದರಿಂದ ಶೀಘ್ರವೇ ನಮ್ಮ ಮುಂದಿನ ಕಷ್ಟದ ಸ್ಥಿತಿಗತಿಗಳು ದೂರ ಹೋಗಲಿ, ಮಾನವ ದೈನಂದಿನ ಸಹಜ ಸ್ಥಿತಿಯತ್ತ ಮರಳಿ ಬರುವಂತಾಗಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.

ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಅಕ್ಷರದಾಸೋಹ ನಿರ್ದೇಶಕ ಸುರೇಶ್ ಕುಮಾರ್, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಸಂತ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾರಾಡಿ ಕ್ಲಸ್ಟರ್‌ನ ಸಿಆರ್‌ಪಿ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಸ್ವಾಗತಿಸಿ, ಕಬಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರವಿತಾ ವಂದಿಸಿದರು. ಕುಡಿಪಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಗುರು ವಿಜಯಾ ಕಾರ್ಯಕ್ರಮ ನಿರೂಪಿಸಿದರು. ಕಡಬ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ಎಂ, ಉಪ್ಪಿನಂಗಡಿ ಕ್ಲಸ್ಟರ್‌ನ ಸಿಆರ್‌ಪಿ ಮಹಮ್ಮದ್ ಅಶ್ರಫ್, ಕಬಕ ಪ್ರೌಢಶಾಲೆಯ ಮುಖ್ಯಗುರು ಶಫಿಯುಲ್ಲರವರು ಉಪಸ್ಥಿತರಿದ್ದರು.

13 ಪ್ರಾ/ಪ್ರೌಢಶಾಲೆ, 36+6=43 ಮಂದಿಗೆ ಕಿಟ್..
ರೂ.42 ಸಾವಿರ ಖರ್ಚು…ಸಿಆರ್‌ಪಿ ಸ್ಟ್ಯಾನಿ ನೇತೃತ್ವ..
ಹಾರಾಡಿ ಕ್ಲಸ್ಟರ್‌ನಲ್ಲಿ 13 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಒಳಪಟ್ಟಿವೆ. ಈ 13 ಶಾಲೆಗಳಲ್ಲಿ ಕನಿಷ್ಠ ವೇತನ ಪಡೆಯುವ ಮೂಲಕ ಕರ್ತವ್ಯ ನಿರ್ವಹಿಸುವ 36 ಮಂದಿ ಅಡುಗೆ ಸಿಬ್ಬಂದಿಯವರು ಹಾಗೂ ಕಛೇರಿ ಸಿಬ್ಬಂದಿ ಸೇರಿದಂತೆ 6 ಮಂದಿ ಗೌರವ ಶಿಕ್ಷಕರಿಗೆ ತಲಾ ರೂ.1 ಸಾವಿರದಂತೆ ರೂ.42 ಸಾವಿರದ ಅಗತ್ಯ ಆಹಾರ ಸಾಮಗ್ರಿಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಈ ಆಹಾರ ಸಾಮಾಗ್ರಿ ವಿತರಣೆಯ ಹಿಂದೆ ಹಾರಾಡಿ ಕ್ಲಸ್ಟರ್‌ನ ಸಿಆರ್‌ಪಿ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್‌ರವರು ಚುಕ್ಕಾಣಿ ಹಿಡಿದಿದ್ದು ಮಾತ್ರವಲ್ಲದೆ ಪ್ರತಿಯೋರ್ವ ಶಿಕ್ಷಕರು ಈ ಯೋಜನೆಗೆ ಸ್ಟ್ಯಾನಿ ಪ್ರವೀಣ್‌ರವರೊಂದಿಗೆ ಸಾಥ್ ನೀಡಿದ್ದಾರೆ. ಫಲಾನುಭವಿಗಳಿಗೆ ಅಗತ್ಯ ಕಿಟ್ ವಿತರಣೆಯ ಮುಂಚೆ ಅಗತ್ಯ ಸಾಮಾಗ್ರಿಗಳನ್ನು ಕ್ರಮಬದ್ಧವಾಗಿ ಜೋಡಿಸಲು ಶಿಕ್ಷಕರೊಂದಿಗೆ ಮಾಯಿದೆ ದೇವುಸ್ ಚರ್ಚ್‌ನ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಸಂಸ್ಥೆಯ ಸದಸ್ಯರು ಕೈಜೋಡಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.