ಮೂರು ತಿಂಗಳ ಹಿಂದೆ ಪುತ್ತೂರಿನಲ್ಲಿ ನಡೆದಿದ್ದ ಚಿನ್ನಾಭರಣ ಮಳಿಗೆಯ ಕಳವು ಪ್ರಕರಣ – ನ್ಯಾಯಾಂಗ ಬಂಧನಲ್ಲಿದ್ದವರು ಬಾಡಿ ವಾರಂಟ್ ಮೂಲಕ ಪುತ್ತೂರು ಪೊಲೀಸರ ಕಸ್ಟಡಿಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೂರು ತಿಂಗಳ ಹಿಂದೆ ಸುಳ್ಯ ಮತ್ತು ಪುತ್ತೂರಿನಲ್ಲಿ ಚಿನ್ನಾಭರಣ ಮಳಿಗೆಗಳಿಂದ ಕಳವು ಮಾಡಿದ ಪ್ರಕರಣದಲ್ಲಿ ಸುಳ್ಯದ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನಲ್ಲಿದ್ದ ಈರ್ವರ ಪೈಕಿ ಒರ್ವ  ಆರೋಪಿ ಪುತ್ತೂರು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

 

ಕೇರಳ ಮೂಲದ ಕಣ್ಣೂರು ಜಿಲ್ಲೆಯ ತಳಿಪರಂಬು ತಾಲೂಕಿನ ಅಲೆಕ್ಕೋಡು ಗ್ರಾಮದ ನಲ್ಲಿಕುನ್ನಿ ತಕ್ಕಮೊಯೆಕಲ್ ನಿವಾಸಿ ತಂಗಚ್ಚ ಯಾನೆ ಮ್ಯಾಥ್ಯು ಯಾನೆ ಮಹಮ್ಮದ್ ಯಾನೆ ಬಶೀರ್ (50ವ) ಪುತ್ತೂರು ಪೊಲೀಸರ ಕಸ್ಟಡಿಯಲ್ಲಿರುವವರು.

ಬಾಡಿ ವಾರಂಟ್ ಮೂಲಕ ಕಸ್ಟಡಿಗೆ: ಕಳೆದ ಮಾರ್ಚ್ 25ರಂದು ಪುತ್ತೂರು ಕೋರ್ಟುರಸ್ತೆಯಲ್ಲಿ 2 ಚಿನ್ನಾಭರಣ ಮಳಿಗೆ, ಒಂದು ಚಿನ್ನ ಮೆಷಿನ್ ಕಟ್ಟಿಂಗ್ ಸಂಸ್ಥೆ, ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಮತ್ತು ಶ್ರೀ ನವಮಿ ಜ್ಯುವೆಲ್ಲರಿ ವರ್ಕ್ಸ್ ಚಿನ್ನಾಭರಣ ಮಳಿಗೆಯ ರೋಲಿಂಗ್ ಶೆಟರ್ ಬೀಗ ಮುರಿದು ಒಳ ನುಗ್ಗಿದ್ದಲ್ಲದೆ, ಮಾರ್ಚ್ 31ರಂದು ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿಯ ಮೋಹನ ಜ್ಯುವೆಲ್ಲರಿ ವರ್ಕ್ಸ್ ಮಳಿಗೆಗೆ ನುಗ್ಗಿ ಕಳವು ಮಾಡಿದ್ದ ಘಟನೆಗೆ ಸಂಬಂಧಿಸಿ ಪುತ್ತೂರು ಮತ್ತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಳವು ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ಆರಂಭಿಸಿದ ಸುಳ್ಯ ಪೊಲೀಸರು ಮೇ 29ರಂದು ಕಳ್ಳತನ ಮಾಡಿದ ಆರೋಪದಡಿ ಬಶೀರ್ ಮತ್ತು ಶಿಬುರವರನ್ನು ಬಂಧಿಸಿದ್ದರು. ಬಂಧಿತರಿಂದ ಸುಳ್ಯದಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ನ್ಯಾಯಾಂಗ ಬಂಧನದಲ್ಲಿದ್ದ ಈರ್ವರನ್ನು ಪುತ್ತೂರಿನಲ್ಲಿ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಪುತ್ತೂರು ಪೊಲೀಸರು ನ್ಯಾಯಾಲಯದಿಂದ ಒರ್ವನನ್ನು ಬಾಡಿವಾರಂಟ್ ಮೂಲಕ ಮೂರು ದಿನ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಕಸ್ಟಡಿಯಲ್ಲಿರುವ ಆರೋಪಿಗಳಿಂದ ಪುತ್ತೂರು ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಮಳಿಗೆಯಿಂದ ಕಳವಾದ ಚಿನ್ನಾಭರಣವನ್ನು ಸ್ವಾಧೀನ ಪಡಿಸಿಕೊಂಡು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.