‘ಆಯುಷ್ 64’ ಮಾತ್ರೆಗಳ ಉತ್ಪಾದನೆಗೆ ಎಸ್‌ಡಿಪಿ ರೆಮಿಡೀಸ್‌ಗೆ ಅನುಮತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೋವಿಡ್ 19 ಸೊಂಕಿತರ ಪಾಲಿಗೆ “ಆಯುಷ್ 64” ಧನ್ವಂತರಿ
  • ಅನುಮತಿ ಪಡೆದ ದೇಶದ 9 ಕಂಪೆನಿಗಳ ಪೈಕಿ ಎಸ್‌ಡಿಪಿ ರೆಮಿಡೀಸ್ ಒಂದು

ಪುತ್ತೂರು: ಕೋವಿಡ್ ೧೯ ಸೋಂಕನ್ನು ಮಣಿಸುವಲ್ಲಿ `ಆಯುಷ್ ೬೪’ ಮಾತ್ರೆ ಪರಿಣಾಮಕಾರಿ ಎನ್ನುವುದು ಸಾಬೀತಾಗಿದ್ದು, ಕೋವಿಡ್ ವಿರುದ್ಧದ ಹೋರಾಟಕ್ಕೆ ಬಲ ತುಂಬಿದಂತಾಗಿದೆ. ಇದರ ಬಳಿಕ ಆಯುಷ್ ೬೪ ಆಯುರ್ವೇದ ಮಾತ್ರೆಗಳ ಉತ್ಪಾದನೆಗೆ ದೇಶದ ೯ ಕಂಪೆನಿಗಳಿಗೆ ಅನುಮತಿ ನೀಡಲಾಗಿದೆ. ಈ 9 ಕಂಪೆನಿಗಳ ಪೈಕಿ ಪುತ್ತೂರಿನ ಪರ್ಲಡ್ಕದಲ್ಲಿರುವ ಎಸ್‌ಡಿಪಿ ರೆಮಿಡೀಸ್ ಎನ್ನುವುದು ಹೆಮ್ಮೆಯ ವಿಷಯ.

ಎಸ್‌ಡಿಪಿ ರೆಮಿಡೀಸ್ ಹಾಗೂ ರಿಸರ್ಚ್ ಸೆಂಟರ್‌ನ ತಜ್ಞ ವೈದ್ಯ ಡಾ. ಹರಿಕೃಷ್ಣ ಪಾಣಾಜೆ ಅವರ ದೂರದೃಷ್ಟಿ ಹಾಗೂ ಜನಪರ ನಿಲುವಿಗೆ ಶ್ಲಾಘನೆ ವ್ಯಕ್ತವಾಗಿದ್ದು, ಇವರು ಉತ್ಪಾದಿಸುವ `ಆಯುಷ್ ೬೪’ ಆಯುರ್ವೇದಿಕ್ ಮಾತ್ರೆಗಳನ್ನು ವಿವೇಕ್ ಟ್ರೇಡರ್ಸ್ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ. ಭಾರತ ಸರಕಾರದ ಆಯುಷ್ ಇಲಾಖೆಯ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ (ಸಿಸಿಆರ್‌ಎಎಸ್) ಈ ಮಾತ್ರೆಗಳನ್ನು ಸಂಶೋಧನೆಗೆ ಒಳಪಡಿಸಿದ್ದು, ಉತ್ತಮ ಫಲಿತಾಂಶ ಲಭಿಸಿತ್ತು. ಇದರ ಫಲಿತಾಂಶವಾಗಿ ಇದೀಗ ಆಯುಷ್ ೬೪ ಮಾತ್ರೆಗಳ ಉತ್ಪಾದನೆಗೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.

ಆಯುಷ್ ೬೪ ಬಗ್ಗೆ ರಾಷ್ಟ್ರದ ೯ ಕಡೆ ಕ್ಲಿನಿಕಲ್ ಅಧ್ಯಯನ ಪ್ರಯೋಗಗಳು ಆಗಿವೆ. ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ, ದತ್ತ ಮೆಘೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ವಾರ್ದಾ, ಮುಂಬೈ ಬಾಂಬೆ ಮುನ್ಸಿಪಲ್ ಕಾರ್ಪೋರೇಶನ್, ಚಂಡಿಗಢದ ಶ್ರೀ ಧನ್ವಂತರಿ ಆಯುರ್ವೇದಿಕ್ ಕಾಲೇಜು, ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ಜೋಧಪುರ, ಗುರು ಗೋವಿಂದ ಸಿಂಗ್ ಸರಕಾರಿ ಮೆಡಿಕಲ್ ಆಸ್ಪತ್ರೆ ಜಾಮ್ ನಗರ, ಸರಕಾರಿ ಮೆಡಿಕಲ್ ಕಾಲೇಜು ನಾಗಪುರ, ಆಯುರ್ವೇದ ಮತ್ತು ಯುನಾನಿ ಟಿಬಿಯಾ ಕಾಲೇಜು ನ್ಯೂಡೆಲ್ಲಿ, ಚೌಧರಿ ಬ್ರಾಹ್ಮಂ ಪ್ರಕಾಶ್ ಆಯುರ್ವೇದ ಚರಕ್ ಸಂಸ್ಥಾನ್ ನ್ಯೂಡೆಲ್ಲಿ ಇಲ್ಲಿ ಸಂಶೋಧನೆಗೆ ಒಳಪಟ್ಟು, ತಜ್ಞರಿಂದ ಉತ್ತಮ ಔಷಧ ಎಂದು ಮಾನ್ಯತೆ ಪಡೆದುಕೊಂಡಿದೆ. ಈ ಎಲ್ಲಾ ಅಧ್ಯಯನ ಪ್ರಯೋಗಗಳನ್ನು ಡಿಎಸ್‌ಎಂಬಿಯ ತೀವ್ರ ನಿಗಾದಲ್ಲಿ ನಡೆಸಲಾಗಿದೆ. ಐಸಿಎಂಆರ್‌ನ ಮಾಜಿ ಡೆಪ್ಯೂಟಿ ಡೈರೆಕ್ಟರ್ ಜನರಲ್ (ಹಿರಿಯ ಶ್ರೇಣಿ) ಡಾ. ನಂದಿನಿ ಕೆ. ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಆಯುಷ್‌ನ ತಜ್ಞರಿಂದ ಈ ಸಂಶೋಧನೆ ನಡೆಯಿತು. ಈ ಆಯುಷ್ ೬೪ ಮಾತ್ರೆ ಕೋವಿಡ್ ೧೯ರ ಮುಖ ಲಕ್ಷಣವಾಗಿರುವ ಜ್ವರವನ್ನು ನಿಯಂತ್ರಣಕ್ಕೆ ತರುತ್ತದೆ. ಅದರೊಂದಿಗೆ ಕೆಮ್ಮು, ಶೀತ, ನೆಗಡಿ ಮತ್ತು ತಲೆನೋವನ್ನು ಶಮನ ಮಾಡುತ್ತದೆ ಎಂದು ಸಂಶೋಧನೆ ದೃಢಪಡಿಸಿತು. ಆಯುಷ್ ೬೪ರ ಗುಣಮಟ್ಟದ ಬಗ್ಗೆ ಹೈದ್ರಾಬಾದಿನ ನ್ಯಾಶನಲ್ ಇನ್ಸಿಟ್ಯೂಟ್ ಆಫ್ ನ್ಯೂಟ್ರಿಶಿಯನ್ ಹಾಗೂ ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐಸಿಎಂಆರ್)ನಲ್ಲೂ ಸಂಶೋಧನೆಗೆ ಒಳಪಟ್ಟಿದೆ.

ಆಯುಷ್ ೬೪ ಮಾತ್ರೆ ಕೋವಿಡ್ ೧೯ ಲಕ್ಷಣಗಳಿಲ್ಲದ ಅಥವಾ ಸಣ್ಣಮಟ್ಟಿಗಿನ ಲಕ್ಷಣ ಇರುವ ವ್ಯಕ್ತಿಗಳ ಪಾಲಿಗೆ ರಾಮಬಾಣ. ಕರ್ನಾಟಕದ ಸುಪ್ರಸಿದ್ಧ ಆಯುರ್ವೇದ ಉತ್ಪನ್ನಗಳ ತಯಾರಿಕಾ ಸಂಸ್ಥೆ ಎಸ್‌ಡಿಪಿ ರೆಮೆಡೀಸ್ ಆಂಡ್ ರಿಸರ್ಚ್ ಸೆಂಟರ್ ಇದರ ಮುಖ್ಯಸ್ಥರಾದ ಡಾ.ಹರಿಕೃಷ್ಣ ಪಾಣಾಜೆ ಇದರ ಉತ್ಪಾದನೆ ಮಾಡಲಿದ್ದು, ಆಯುರ್ವೇದ ಉತ್ಪನ್ನಗಳ ರಖಂ ಹಾಗೂ ಬಿಡಿ ಮಾರಾಟ ಸಂಸ್ಥೆ ವಿವೇಕ್ ಟ್ರೇಡರ್ಸ್ ಹಾಗೂ ಆಯುರ್ ವಿವೇಕ್ ಮಾರುಕಟ್ಟೆಗೆ ತರುತ್ತಿದೆ.

ಹೀಗೆ ನಡೆಯಿತು ಪರೀಕ್ಷೆ:
ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ಒಳಗಾಗಿರುವ ವಿವಿಧ ಕೋವಿಡ್ ಸೊಂಕಿತರಿಗೆ ಆಯುಷ್ ಇಲಾಖೆ ಹಾಗೂ ಸಿಸಿಆರ್‌ಎಎಸ್ ಸಂಸ್ಥೆ ಅಲೋಪತಿ ಹಾಗೂ ಆಯುರ್ವೇದ ಔಷಧಗಳನ್ನು ನೀಡಿ ಪರೀಕ್ಷೆಗೆ ಒಳಪಡಿಸಿತು. ಕೋವಿಡ್ ಸೋಂಕಿತರಲ್ಲಿ ಯಾರು ಅಲೋಪತಿ ಹಾಗೂ ಆಯುರ್ವೇದ ಔಷಧಗಳನ್ನು ತೆಗೆದುಕೊಂಡಿದ್ದಾರೋ ಅವರನ್ನು ಸೂಕ್ಷ್ಮವಾಗಿ ಗಮನಿಸಲಾಯಿತು. ಹಾಗೆ ಸಂಶೋಧನೆ ನಡೆಸಿದ ನಂತರ ಕೋವಿಡ್ ೧೯ ಸಾಂಕ್ರಾಮಿಕ ರೋಗ ಬಂದಿರುವ, ಆದರೆ ಲಕ್ಷಣಗಳು ಇಲ್ಲದ ಅಥವಾ ಸಣ್ಣ ಪ್ರಮಾಣದ ಲಕ್ಷಣಗಳನ್ನು ಹೊಂದಿರುವ ಜನರಿಗೆ ಆಯುರ್ವೇದ ಶಾಸ್ತ್ರದ ಆಯುಷ್ ೬೪ ಮಾತ್ರೆ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು ಸಾಬೀತಾಯಿತು. ಇದರ ನಂತರ ಗುಜರಾತಿನ ಅಹಮದಾಬಾದ್, ಗಾಂಧಿನಗರ, ವಡೋದರ, ಭಾವನಗರ, ಜುನಾಘಡ್, ಸೂರತ್, ನರ್ಮದಾ ಹಾಗೂ ವಲಸಾಡ್‌ನ ಅನೇಕ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಆಯುಷ್ ೬೪ ಮಾತ್ರೆಗಳನ್ನು ವ್ಯಾಪಕವಾಗಿ ರೋಗಿಗಳಿಗೆ ನೀಡಲಾಗಿದೆ.

ಔಷಧಿ ತೆಗೆದುಕೊಳ್ಳುವ ವಿಧಾನ:
ಕೋವಿಡ್ ೧೯ ಸಾಮಾನ್ಯ ಲಕ್ಷಣ ಇರುವ ವ್ಯಕ್ತಿಗಳಿಗೆ ಆಯುಷ್ ೬೪ ಮಾತ್ರೆಗಳು ಗುಣಮುಖರಾಗಲು ಸಾಕು ಎಂದು ಪ್ರಯೋಗಗಳಿಂದ ಸಾಬೀತಾಗಿದೆ. ಆದರೆ ಅಂತಹ ವ್ಯಕ್ತಿಗಳು ವೈದ್ಯರ ಸಲಹೆಯೊಂದಿಗೆ ಮಾತ್ರೆಗಳನ್ನು ಸೇವಿಸಬೇಕು. ಇದರ ಜೊತೆಗೆ ಮಾರ್ಗಸೂಚಿಯನ್ನು ಪಾಲಿಸುವುದು ಅತೀ ಮುಖ್ಯ. ಯಾವುದೇ ಲಕ್ಷಣಗಳಿಲ್ಲದ ಕೋವಿಡ್ 19 ಸೋಂಕಿತ ವ್ಯಕ್ತಿಗಳು ಎರಡು ಮಾತ್ರೆಯಂತೆ ದಿನಕ್ಕೆ 2 ಸಲ 14 ದಿನ ಆಹಾರ ಸೇವಿಸಿದ ಒಂದು ಗಂಟೆಯ ನಂತರ ನೀರಿನೊಂದಿಗೆ ಈ ಮಾತ್ರೆಯನ್ನು ಸೇವಿಸಬೇಕು. ಕೋವಿಡ್ 19 ಸಾಮಾನ್ಯ ಲಕ್ಷಣಗಳಿರುವ ಜನರು ಎರಡು ಮಾತ್ರೆಯಂತೆ ದಿನಕ್ಕೆ 3 ಸಲ 20 ದಿನ ಆಹಾರ ಸೇವಿಸಿದ ಒಂದು ಗಂಟೆಯ ನಂತರ ನೀರಿನೊಂದಿಗೆ ಸೇವಿಸಬೇಕು. ಇನ್ನು ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ಅಗತ್ಯವಿರುವ ಔಷಧಿಗಳೊಂದಿಗೆ ಆಯುಷ್ ೬೪ ಮಾತ್ರೆಯನ್ನು ತೆಗೆದುಕೊಳ್ಳಬಹುದು. ಇನ್ನು ಮುಖ್ಯವಾಗಿ ವ್ಯಾಕ್ಸಿನೇಶನ್ ಪಡೆದವರು ಕೋವಿಡ್ ೧೯ ಪಾಸಿಟಿವ್ ಆದರೆ ಸಂಬಂಧಿಸಿದ ವೈದ್ಯರಿಗೆ, ಅಧಿಕಾರಿಗಳಿಗೆ ತಿಳಿಸಿ ಮಾತ್ರೆಗಳನ್ನು ಸೇವಿಸಬಹುದು. ಆಯುಷ್ ೬೪ ಎಲ್ಲಾ ಮೆಡಿಕಲ್ ಶಾಪ್‌ಗಳಲ್ಲಿ ಲಭಿಸಲಿದ್ದು, ಆಯುರ್ವೇದ ವೈದ್ಯರ ಅನುಮತಿಯೊಂದಿಗೆ ಸೇವಿಸಬೇಕು ಎಂದು ಡಾ. ಹರಿಕೃಷ್ಣ ಪಾಣಾಜೆ ತಿಳಿಸಿದರು.

 ಡಾ. ಹರಿಕೃಷ್ಣ ಪಾಣಾಜೆ 

ದೇಶದ ಪ್ರತಿಷ್ಠಿತ ೯ ಮೆಡಿಕಲ್ ಕಾಲೇಜುಗಳಲ್ಲಿ ಸಂಶೋಧನೆಗೊಂಡ `ಆಯುಷ್ ೬೪’ ಮಾತ್ರಗಳು ಸೆಂಟ್ರಲ್ ಕೌನ್ಸಿಲ್ ಫಾರ್ ರೀಸರ್ಚ್ ಇನ್ ಆಯುರ್ವೇದಿಕ್ ಸೈನ್ಸ್ (CCRAS) ಮತ್ತು ನ್ಯಾಷನಲ್ ರೀಸರ್ಚ್ ಡೆವಲಪ್‌ಮೆಂಟ್ ಕಾರ್ಪರೇಷನ್ (NRDC) ಇವರಿಂದ ಅನುಮೋದಿಸಲ್ಪಟ್ಟಿದೆ. ಇವರ ಪ್ರಕಾರ, ಆಯುಷ್ ೬೪ ಮಾತ್ರೆಗಳು ಲಕ್ಷಣಗಳಿಲ್ಲದ ಹಾಗೂ ಸಾಮಾನ್ಯ ಲಕ್ಷಣಗಳಿರುವ ಕೋವಿಡ್ ರೋಗಿಗಳಿಗೆ ಪರಿಣಾಮಕಾರಿ. ಅಲ್ಲದೆ ಸಂಶೋಧನೆಗೆ ಒಳಗಾದವರು ತೀವ್ರ ನಿಗಾ ವಿಭಾಗಕ್ಕೆ ಸಾಗಿಸುವ ಅಗತ್ಯ ಬರಲಿಲ್ಲ ಎಂದು ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿದೆ. ಕೋವಿಡ್‌ನ ಪ್ರಾರಂಭಿಕ ಹಂತದ ಲಕ್ಷಣಗಳಿಗೆ ಆಯುಷ್ ೬೪ ಪರಿಣಾಮಕಾರಿಯಾಗಿದ್ದು, ಇದರ ಉತ್ಪಾದನೆಗೆ ನಮ್ಮ ಸಂಸ್ಥೆಯಲ್ಲಿ ಅವಕಾಶ ಲಭಿಸಿದ್ದು ಸಂತೋಷದ ವಿಷಯ ಡಾ. ಹರಿಕೃಷ್ಣ ಪಾಣಾಜೆ, ಎಸ್‌ಡಿಪಿ ರೆಮಿಡೀಸ್ ಆಂಡ್ ರೀಸರ್ಚ್ ಸೆಂಟರ್, ಪರ್ಲಡ್ಕ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.