ಸವಣೂರಿನಲ್ಲಿ ಪೊಲೀಸ್ ರಿಂದ ಬಿಗು ತಪಾಸಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ/ವರದಿ: ಉಮಾಪ್ರಸಾದ್ ರೈ

ಸವಣೂರು ಪೇಟೆಯಲ್ಲಿ ಕರೋನಾ ಜಾಗೃತಿ ಮೂಡಿಸುತ್ತಿರುವ ಸವಣೂರು ಗ್ರಾಮ ಪಂಚಾಯತ್ ಗೆ ಬೆಳ್ಳಾರೆ ಎಸ್. ಐ ರವರಿಂದ ಅಭಿನಂದನೆ

ಪುತ್ತೂರು: ಸವಣೂರು ಪೇಟೆಯ ಮುಖ್ಯ ಸ್ಥಳದಲ್ಲಿ ಜೂ. 8 ರಂದು ಬೆಳ್ಳಾರೆ ಎಸ್.ಐ. ಅಂಜನೇಯ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಅನಗತ್ಯವಾಗಿ ಪೇಟೆಯಲ್ಲಿ ಸಂಚಾರಿಸುವ ವಾಹನಗಳ ತಪಾಸಣೆಯನ್ನು ಮಾಡಿದರು. ಅಲ್ಲದೇ ಕೋವೀಡ್ ನಿಯಮವನ್ನು ಪಾಲಿಸುವಂತೆ ಎಚ್ಚರಿಕೆ ಕೊಟ್ಡರು. ಪ್ರಯಾಣಿಕರು ಹೋಗುವ ವಾಹನದಲ್ಲಿ ಸಾಮಾಗ್ರಿಗಳನ್ನು ಹಾಕಿಕೊಂಡು ಹೋಗುತ್ತಿದ್ದ ವಾಹನವೊಂದರ ಚಾಲಕನಿಗೆ ಸಾರಿಗೆ ನಿಯಮವನ್ನು ತಿಳಿಯಪಡಿಸಿದರು. ಸವಣೂರು ಪೇಟೆಯಲ್ಲಿ ಅಂಗಡಿಗಳಿಗೆ ತೆರಳಿ ಕರೋನಾ ಜಾಗೃತಿ ಮೂಡಿಸುತ್ತಿರುವ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ಹಾಗೂ ಸದಸ್ಯರು ಮತ್ತು ಸಿಬ್ಬಂದಿಗಳ ಕಾರ್ಯವೈಖರಿಗೆ ಬೆಳ್ಳಾರೆ ಎಸ್.ಐ.ಅಂಜನೇಯ ರೆಡ್ಡಿ ಅಭಿನಂದನೆ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.