ಮೈಂದಡ್ಕ ಮೈದಾನಕ್ಕೆ ಪ್ರವೇಶ ನಿರ್ಬಂಧ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನೆಕ್ಕಿಲಾಡಿ ಗ್ರಾ.ಪಂ.ನಿಂದ ಸಾಮರಸ್ಯ ಒಡೆಯುವ ಹುನ್ನಾರ-ಜತೀಂದ್ರ ಶೆಟ್ಟಿ

ಪುತ್ತೂರು: ೩೪ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಂದಡ್ಕದಲ್ಲಿರುವ ಸಾರ್ವಜನಿಕ ಮೈದಾನಕ್ಕೆ ಪ್ರವೇಶಿಸದಂತೆ ಗ್ರಾಮ ಪಂಚಾಯತ್ ವತಿಯಿಂದ ಅಗಲು ನಿರ್ಮಿಸುವ ಮೂಲಕ ಸಮಾಜದ ಸಾಮರಸ್ಯ ಒಡೆಯುವ ಹುನ್ನಾರ ನಡೆಸಲಾಗಿದೆ ಎಂದು ಮೈಂದಡ್ಕದ ಶಾಂತಿ ಸೌಹಾರ್ದತೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಜತೀಂದ್ರ ಶೆಟ್ಟಿ ಅಲಿಮಾರರವರು ಆರೋಪಿಸಿದ್ದಾರೆ.

ಮೈದಾನಕ್ಕೆ ಅಗಲು ನಿರ್ಮಿಸಿರುವುದು

ಕಂದಾಯ ಇಲಾಖೆಯ ಸ್ವಾಧೀನದಲ್ಲಿರುವ ಮೈಂದಡ್ಕ ಮೈದಾನಕ್ಕೆ ಹೋಗದಂತೆ ಗ್ರಾಮ ಪಂಚಾಯತ್ ಯಾವ ಅಧಿಕಾರದಿಂದ ಪ್ರವೇಶ ನಿರ್ಬಂಧಿಸುವ ಕಾರ್ಯ ಮಾಡಿದೆ ಎಂದು ಅವರು ಪ್ರಶ್ನಿಸಿದ್ದಾರೆ.‌

ಸೌಹಾರ್ದತೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾನು ಎಂಟು ವರ್ಷ ಸತತ ಹೋರಾಟ ನಡೆಸಿ ಈ ಆಟದ ಮೈದಾನ ಜನರಿಗೆ ಉಪಯೋಗ ಆಗುವಂತಾಗಿದೆ. ನಾನು ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಪರಿಣಾಮ 55 ಸೆಂಟ್ಸ್ ಜಾಗ ಸಾರ್ವಜನಿಕ ಮೈದಾನಕ್ಕೆ ಸಿಕ್ಕಿದೆ. ಪ್ರಸ್ತುತ ಈ ಮೈದಾನ ಕಂದಾಯ ಇಲಾಖೆಯ ಸ್ವಾಧೀನದಲ್ಲಿದೆ. ಆದರೆ, ಗ್ರಾಮ ಪಂಚಾಯತ್ ಪ್ರೇರಿತವಾಗಿ ಕೆಲವು ಯುವಕರು ಮೈದಾನಕ್ಕೆ ತೆರಳುವ ದಾರಿಗೆ ಮಣ್ಣು ಹಾಕಿ ಬಂದ್ ಮಾಡಿದ್ದಲ್ಲದೆ, ಮಕ್ಕಳು ಆಟವಾಡಲು ತೆರಳದಂತೆ ನಿರ್ಬಂಧಿಸಿದ್ದರು. ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದ್ದು ಬಳಿಕ ಸಂಧಾನ ನಡೆಸಿ ಕೇಸ್ ಹಿಂಪಡೆಯಲಾಗಿದೆ. ಆದರೆ ಜೂ. 7ರಂದು ಏಕಾಏಕಿ ಮತ್ತೆ ಮೈದಾನಕ್ಕೆ ಹೋಗದಂತೆ ಮಣ್ಣು ಹಾಕಲಾಗಿದೆ. ಕಂದಾಯ ಇಲಾಖೆಯ ಸ್ವಾಮ್ಯದಲ್ಲಿ ಇರುವ ಈ ಜಾಗದಲ್ಲಿ ಗ್ರಾಮ ಪಂಚಾಯತ್ ಹೇಗೆ ದಾರಿ ಮುಚ್ಚುವ ಕಾರ್ಯ ಮಾಡಿದೆ ಎಂದು ಪ್ರಶ್ನಿಸಿದ ಜತೀಂದ್ರ ಶೆಟ್ಟಿಯವರು, ಈ ಮೈದಾನವನ್ನು ಒಂದು ಧರ್ಮಕ್ಕೆ ಮೀಸಲಿಡುವ ಹುನ್ನಾರ ನಡೆದಿದೆ, ಸಮಾಜದ ಸಾಮರಸ್ಯ ಒಡೆಯುವ ಪ್ರಯತ್ನ ನಡೆಯುತ್ತಿದೆ, ಸಂಬಂಧಪಟ್ಟವರು ಇದನ್ನು ಸರಿ ಪಡಿಸಿಕೊಂಡು ಎಂದಿನಂತೆ ಮಕ್ಕಳಿಗೆ ಆಟವಾಡಲು, ವಾಕಿಂಗ್ ಮಾಡಲು ಮತ್ತು ಸಾರ್ವಜನಿಕರಿಗೆ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಮತ್ತು ಮೈಂದಡ್ಕದ ಶಾಂತಿ ಸೌಹಾರ್ದತೆ ಉಳಿಸಿ ಹೋರಾಟ ಸಮಿತಿ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.