ಶಿಕ್ಷಣಾಧಿಕಾರಿ ನೇತೃತ್ವದ ತಂಡದ ಪರಿಶ್ರಮವನ್ನು ಬಿಂಬಿಸುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ವಿಡಿಯೋ ಸಾಕ್ಷ್ಯಚಿತ್ರ ರಿಲೀಸ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ಯೂಸುಫ್ ರೆಂಜಲಾಡಿ

  • ಸರ್ವೆ ಕಲ್ಪಣೆ ಶಾಲಾ ಶಿಕ್ಷಕಿ ಸುನಿತಾ ನಿರ್ಮಾಣದ ಸಾಕ್ಷ್ಯ ಚಿತ್ರ

ಪುತ್ತೂರು: ಕೊರೋನಾ ಮಹಾಮಾರಿ ವಕ್ಕರಿಸಿ ನಾಗರಿಕ ಸಮಾಜವೇ ಅಲ್ಲೋಲ ಕಲ್ಲೋಲವಾಗಿದೆ. ಅದರಲ್ಲಿ ಶಿಕ್ಷಣ ಕ್ಷೇತ್ರವೂ ಹೊರತಾಗಿಲ್ಲ. ೨೦೨೦-೨೧ನೇ ಸಾಲಿನ ಶೈಕ್ಷಣಿಕ ವರ್ಷ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕರು ಮಾತ್ರವಲ್ಲದೇ ಇಡೀ ನಾಗರಿಕ ಸಮಾಜವೇ ಚಿಂತಿತವಾಗಿದೆ. ಕೊರೋನಾ ನೂರಾರು ಸಮಸ್ಯೆಗಳನ್ನು ತಂದೊಡ್ಡಿದ್ದರೂ ಇವುಗಳ ಮಧ್ಯೆಯೇ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪುತ್ತೂರು ವಲಯ ವ್ಯಾಪ್ತಿಯಲ್ಲಿ ಇಲಾಖಾಧಿಕಾರಿಗಳು ಮತ್ತು ಶಿಕ್ಷಕರು ನಡೆಸಿರುವ ಪ್ರಯತ್ನಗಳು ಅವಿಸ್ಮರಣೀಯ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಾಧನೆಯ ಗುರಿಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮುಂದಾಳತ್ವದಲ್ಲಿ `ಉತ್ತೇಜನ’ ಎನ್ನುವ ವಿಶೇಷ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿತ್ತು. ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶಕ್ಕೆ ಅದರ ಕೈಪಿಡಿ ಮುದ್ರಿಸಿ ಹಂಚಲಾಗಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸುವ ಗುರಿಯೊಂದಿಗೆ ಶಾಸಕರು ಕೂಡಾ ಫೀಲ್ಡಿಗಿಳಿದಿದ್ದರು. ಈ ಬಾರಿ ವಿದ್ಯಾರ್ಥಿಗಳು ಕೊರೋನಾ ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸಾಧನೆ ಮಾಡಬೇಕೆನ್ನುವ ಉದ್ದೇಶ ಮತ್ತು ಮಹದಾಸೆ ಇಟ್ಟುಕೊಂಡಿದ್ದ ಇಲಾಖಾಧಿಕಾರಿಗಳು ಅದಕ್ಕಾಗಿ ಪ್ರಯತ್ನಗಳನ್ನು ಮುಂದುವರಿಸಿದ್ದರು.

ವಿಶೇಷವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ, ಮನಗಳನ್ನು ಮುಟ್ಟುವಲ್ಲಿ ಸಫಲವಾಗಿರುವ ಇಲಾಖಾಧಿಕಾರಿಗಳು ಮತ್ತು ಶಿಕ್ಷಕ ವೃಂದದವರ ಕಾರ್ಯ ಶ್ಲಾಘನೀಯ. ಅದರಲ್ಲೂ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಅವರು ಶೈಕ್ಷಣಿಕ ಸಾಲಿನ ಯೋಜನೆ, ಯೋಚನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕಿಳಿಸುವ ಮೂಲಕ ಕೊರೋನಾ ಕಾಲದಲ್ಲೂ ವಿದ್ಯಾರ್ಥಿಸ್ನೇಹಿ ಶಿಕ್ಷಣಾಧಿಕಾರಿಯಾಗಿ ಗುರುತಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಾಕ್ಷ್ಯಚಿತ್ರ ವಿಡಿಯೋ ರಿಲೀಸ್:
ಇದೀಗ ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸುನಿತಾ ಎನ್ ಅವರು `ಉತ್ತೇಜನ’ ಎನ್ನುವ ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮಕ್ಕೆ ಮಹತ್ವದ ಟಚ್ ನೀಡಿದ್ದಾರೆ. ಕರಾವಳಿಯ ಗಂಡು ಕಲೆಯೊಂದಿಗೆ ಪುತ್ತೂರು ತಾಲೂಕು ಶೈಕ್ಷಣಿಕ ಚಿತ್ರಣಗಳ ಚಟುವಟಿಕೆಗಳ ಸಮಗ್ರ ಚಿತ್ರಣಗಳನ್ನೊಳಗೊಂಡ `ಶಿಕ್ಷಣ ಜ್ಯೋತಿಯ ಸಹಯಾನ-ಶಿಕ್ಷಕರೆಲ್ಲರ ಸಹಯಾನ’ ಎನ್ನುವ ಸಾಕ್ಷ್ಯಚಿತ್ರದ ವಿಡಿಯೋ ಮೂಲಕ `ಉತ್ತೇಜನ’ಕ್ಕೆ ಇನ್ನಷು ಮೆರುಗು ನೀಡಿದ್ದಾರೆ. ಸ್ವತಃ ತಾವೇ ನಿರ್ದೇಶಿಸಿ, ನಿರ್ಮಾಣ ಮಾಡಿ, ಅತ್ಯುತ್ತಮ ಪರಿಕಲ್ಪನೆಯೊಂದಿಗೆ ರೂಪುರೇಷೆ ಕೊಟ್ಟು ಸಾಕ್ಷ್ಯ ಚಿತ್ರದ ವೀಡಿಯೋ ರಿಲೀಸ್ ಮಾಡಿದ್ದಾರೆ. ಇದಕ್ಕೆ ಹಲವರು ಸಹಕಾರ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಬಡಿದೆಬ್ಬಿಸಲು ಮತ್ತು ಶಿಕ್ಷಕರಿಗೆ ವೃತ್ತಿಯಲ್ಲಿ ಇನ್ನಷ್ಟು ಸಾಧನೆ ಮಾಡಲು, ಅಧಿಕಾರಿಗಳಿಗೆ ತಮ್ಮ ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮವನ್ನು ಮತ್ತೊಮ್ಮೆ ಮೆಲುಕು ಹಾಕಲು ಈ ಸಾಕ್ಷ್ಯಚಿತ್ರದ ವಿಡಿಯೋ ಉತ್ತೇಜನ ನೀಡುತ್ತಿದೆ. ಈ ಸಾಕ್ಷ್ಯಚಿತ್ರದ ಬಗ್ಗೆ ಶಿಕ್ಷಕ ವಲಯದಲ್ಲಿ ಮತ್ತು ಪೋಷಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಲಕ್ಷ್ಮೀನಾರಾಯಣ ಭಟ್ ಅವರ ಯಕ್ಷಗಾನದ ಹಾಡುಗಾರಿಕೆ ಈ ಸಾಕ್ಷ್ಯ ಚಿತ್ರ ವಿಡಿಯೋಗೆ ಮೆರುಗು ನೀಡಿದೆ.


ವೀಕ್ಷಕರಿಂದ ಮೆಚ್ಚುಗೆ:
ಪುತ್ತೂರು ತಾಲೂಕು ಶೈಕ್ಷಣಿಕ ಚಿತ್ರಣಗಳ ಚಟುವಟಿಕೆಗಳನ್ನೊಳಗೊಂಡ `ಉತ್ತೇಜನ’ ಎನ್ನುವ ಸಾಕ್ಷ್ಯಚಿತ್ರಗಳನ್ನು ವಿಡಿಯೋ ಮೂಲಕ ಅನಾವರಣಗೊಳಿಸಿರುವ ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಸುನಿತಾ ಮತ್ತು ಅದಕ್ಕೆ ಸಹಕಾರ ನೀಡಿದ ಬಳಗದವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಸಾಕಷ್ಟು ಸಂಖ್ಯೆಯ ಜನರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಾಧನೆಯನ್ನು ಉನ್ನತಮಟ್ಟಕ್ಕೆ ತಲುಪಸಬೇಕೆನ್ನುವ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ನಾವು ಕಾರ್ಯೋನ್ಮುಖರಾಗಿದ್ದೇವೆ. ವಿದ್ಯಾರ್ಥಿ ಸ್ನೇಹಿ `ಉತ್ತೇಜನ’ ಎನ್ನುವ ಕಾರ್ಯಕ್ರಮಕ್ಕೆ ಶಿಕ್ಷಕ ವೃಂದದವರು ಉತ್ತಮವಾಗಿ ಸಹಕಾರ ನೀಡಿದ್ದಾರೆ. ಪರೀಕ್ಷಾ ಫಲಿತಾಂಶ ಉತ್ತಮಪಡಿಸಬೇಕೆನ್ನುವ ಉದ್ದೇಶಕ್ಕೆ ಹಾಕಿಕೊಂಡಿರುವ ಕಾರ್ಯಕ್ರಮಕ್ಕೆ ಪೂರಕವಾಗಿ ಸರ್ವೆ ಸ.ಹಿ.ಪ್ರಾ.ಶಾಲಾ ಶಿಕ್ಷಕಿ ಸುನಿತಾ ಅವರ ನಿರ್ಮಾಣದಲ್ಲಿ ಮತ್ತು ಅನೇಕರ ಸಹಕಾರದೊಂದಿಗೆ ಪುತ್ತೂರು ತಾಲೂಕು ಶೈಕ್ಷಣಿಕ ಚಿತ್ರಣಗಳ ಚಟುವಟಿಕೆಗಳ ಚಿತ್ರಣಗಳನ್ನೊಳಗೊಂಡ ವಿಡಿಯೋ ಸಾಕ್ಷ್ಯಚಿತ್ರವನ್ನು ಹೊರತಂದಿರುವುದು ಖುಷಿಯ ವಿಚಾರ. ಕರಾವಳಿಯ ಪ್ರಮುಖ ಕಲೆಗಳಲ್ಲೊಂದಾಗಿರುವ ಯಕ್ಷಗಾನ ರೂಪದಲ್ಲಿ ಹೊರ ತಂದಿರುವ ಈ ಸಾಕ್ಷ್ಯ ಚಿತ್ರಕ್ಕೆ ಶಿಕ್ಷಣ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಲೋಕೇಶ್ ಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು

ಕೋವಿಡ್ ಮಹಮಾರಿಯಿಂದಾಗಿ ಸಂಕಷ್ಟ ಎದುರಿಸುತ್ತಿರುವ ವಿದ್ಯಾಥಿಗಳ ಭವಿಷ್ಯದ ದೃಷ್ಟಿಕೋನವನ್ನು ಇಟ್ಟುಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಯವರ ಮುಂದಾಳತ್ವದಲ್ಲಿ ಉತ್ತೇಜನ ಎನ್ನುವ ವೈಶಿಷ್ಯಪೂರ್ಣ ಕಾರ್ಯಕ್ರಮ ವಿದ್ಯಾರ್ಥಿಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದಕ್ಕೆ ಪೂರಕವಾಗಿ ನಮ್ಮ ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲಾ ಶಿಕ್ಷಕಿ ಸುನಿತಾ ಅವರ ನಿರ್ದೇಶನ ಮತ್ತು ನಿರ್ಮಾಣದಲ್ಲಿ `ಉತ್ತೇಜನ’ ಕಾರ್ಯಕ್ರಮದ ಸಾಕ್ಷ್ಯ ಚಿತ್ರಗಳನ್ನೊಳಗೊಂಡ ವಿಡಿಯೋ ಬಿಡುಗಡೆಗೊಂಡಿರುವುದು ಸಂತಸದ ವಿಚಾರ. ಶೈಕ್ಷಣಿಕ ಚಟುವಟಿಕೆಗಳ ವಿವಿಧ ಆಯಾಮಗಳಿಗೆ ಬೆಳಕು ಚೆಲ್ಲುವ ಪರಿಕಲ್ಪನೆ ಇದರಲ್ಲಿ ಮೂಡಿ ಬಂದಿದ್ದು ವಿದ್ಯಾರ್ಥಿಗಳಿಗೆ ಈ ಸಾಕ್ಷ್ಯಚಿತ್ರ ಉತ್ತೇಜನ ನೀಡಲಿದೆ ಕೆ.ಎಂ ಹನೀಫ್ ರೆಂಜಲಾಡಿ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರು ಸ.ಹಿ.ಪ್ರಾ.ಶಾಲೆ ಕಲ್ಪಣೆ ಸರ್ವೆ

ಸಾಕ್ಷ್ಯಚಿತ್ರ ವಿಡಿಯೋ 👇

https://youtu.be/JkR2H87T-Eg

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.