ತಿಂಗಳಾಡಿ: ಶಿಕ್ಷಕರಿಂದ ಆಶಾ ಕಾರ್ಯಕರ್ತೆಯರಿಗೆ ಧನಸಹಾಯ – ಶಿಕ್ಷಕರ ಕೆಲಸ ಸಮಾಜಕ್ಕೆ ಮಾದರಿಯಾಗಿದೆ: ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆದಂಬಾಡಿ, ಕೆಯ್ಯೂರು ಮತ್ತು ಒಳಮೊಗ್ರು ಗ್ರಾಮದಲ್ಲಿ ಕೊರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಶಿಕ್ಷಕರಿಂದ ಸಹಾಯಧನ ವಿತರಣಾ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರುರವರು ಆಶಾ ಕಾರ್ಯಕರ್ತೆಯರಿಗೆ ಧನಸಹಾಯ ವಿತರಣೆ ಮಾಡಿ ಮಾತನಾಡಿ, ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲಿ ಶಿಕ್ಷಕರು ತಮ್ಮ ಕೈಯಲ್ಲಾದ ಸಹಾಯವನ್ನು ನೀಡುವ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿದ್ದಾರೆ. ಶಿಕ್ಷಣ ಕಲಿಸುವ ಜೊತೆಯಲ್ಲಿ ಸಹಾಯಹಸ್ತ ನೀಡುವ ಕೆಲಸವನ್ನು ಮಾಡಿರುವುದು ಶ್ಲಾಘನೀಯ ಎಂದರು. ಕೆಯ್ಯೂರು ಕ್ಲಸ್ಟರ್‌ನ ಪ್ರಾಥಮಿಕ ಶಾಲಾ ,ಪ್ರೌಢ ಶಾಲಾ ಶಿಕ್ಷಕರು ಮತ್ತು ಪ. ಪೂ.ಕಾಲೇಜಿನ ಉಪನ್ಯಾಸಕರು ಮತ್ತು ಕುಂಬ್ರ ಕ್ಲಸ್ಟರ್ ನ ಪ್ರಾಥಮಿಕ ಶಾಲಾ ಶಿಕ್ಷಕರ ಸಹಭಾಗಿತ್ವದಲ್ಲಿಸಂಗ್ರಹ ಮಾಡಿದ ೩೯,೦೦೦ ಮೊತ್ತವನ್ನು ಆಶಾಕಾರ್ಯಕರ್ತೆಯರಿಗೆ ತಲಾ ೩,೦೦೦ದಂತೆ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ನಿಕಟ ಪೂರ್ವ ತಾಲೂಕುಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ್, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ರಾಮಕೃಷ್ಣ , ಶಿಕ್ಷಣ ಸಂಯೋಜಕ ಹರಿಪ್ರಸಾದ್, ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ೦ತಿ , ಕೆದಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸಭಾ ವೇದಿಕೆಯಲ್ಲಿದ್ದರು. ಪುತ್ತೂರುಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವೇದಾವತಿ, ಕ್ಷೇತ್ರಸಂಪನ್ಮೂಲ ಕೇಂದ್ರದ ಬಿಐಇಆರ್‌ಟಿ ತನುಜಾ,ನವೀನ್ ಕುಮಾರ್ ರೈ, ದೈ,ಶಿ,ರಾಮಣ್ಣರೈ, ಮುಖ್ಯ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ರೈ ಉಪಸ್ಥಿತರಿದ್ದರು. ಚೆನ್ನಾವರ ಶಾಲೆಯ ಮುಖ್ಯ ಶಿಕ್ಷಕಿ ಶಾಂತಾ ಪ್ರಾರ್ಥಿಸಿದರು. ಕೆಯ್ಯೂರು ಕೆಪಿಎಸ್ ಶಾಲಾ ಮುಖ್ಯಗುರು ಬಾಬು ಎಂ. ಸ್ವಾಗತಿಸಿದರು. ಕೆಯ್ಯೂರು ಸಿಆರ್‌ಪಿ ನಿರಂಜನ ಕಣಜಾಲು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಗಂಗಾಧರ್ ಕಟ್ಟತ್ತಾರು, ಕಿರಣ್‌ರಾಜ್ ಸಹಕರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.