ತಾ.ಪಂ ಕಾರ್ಯನಿರ್ವಹಣಾಧಿಕಾರಿಯಿಂದ ಸದ್ದಿಲ್ಲದ ಸೇವೆ-ಲಾಕ್‌ಡೌನ್ ಸಂಕಷ್ಟಕ್ಕೀಡಾದವರಿಗೆ ಆಹಾರದ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅಂಬೇಡ್ಕರ್ ಆಪತ್ಪಾಂಧವ ಟ್ರಸ್ಟ್‌ಗೆ ಆಹಾರದ ಕಿಟ್ ಹಸ್ತಾಂತರ

ಪುತ್ತೂರು: ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ತೀರಾ ಸಂಕಷ್ಟದಲ್ಲಿರುವವರಿಗೆ ಆಹಾರದ ಸಾಮಾಗ್ರಿ ಒದಗಿಸುವ ನಿಟ್ಟಿನಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ಸದ್ದಿಲ್ಲದೆ ತಮ್ಮ ಸೇವಾ ಕಾರ್ಯ ಮಾಡುತ್ತಿದ್ದು, ಜೂ.8ರಂದು ಅಂಬೇಡ್ಕರ್ ಆಪತ್ಪಾಂಧವ ಟ್ರಸ್ಟ್‌ಗೆ ಆಹಾರ ಸಾಮಾಗ್ರಿ ವಿತರಣೆ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಅನೇಕ ಕೊರಗ ಸಮುದಾಯಕ್ಕೆ ಈಗಾಗಲೇ ಆಹಾರದ ಕಿಟ್ ವಿತರಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಇದೀಗ ಅಂಬೇಡ್ಕರ್ ಆಪತ್ಪಾಂಧವ ಟ್ರಸ್ಟ್‌ಗೆ ಕಿಟ್‌ಗಳನ್ನು ಹಸ್ತಾಂತರಿಸಿದ್ದಾರೆ. ಅಗತ್ಯ ಆಹಾರದ ಕಿಟ್‌ಗಳನ್ನು ಪಡೆದುಕೊಂಡ ಟ್ರಸ್ಟ್‌ನ ಸ್ಥಾಪಕ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ ಅವರು ಮಾತನಾಡಿ ಯಾರು ತೀರಾ ಸಂಕಷ್ಟದಲ್ಲಿದ್ದಾರೋ ಅವರನ್ನು ಗುರುತಿಸಿ ಅವರಿಗೆ ಈ ಆಹಾರದ ಕಿಟ್‌ಗಳನ್ನು ಹಸ್ತಾಂತರಿಸಲಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಮುಖ್ಯಸ್ಥ ಜಗದೀಶ್ ಕಜೆ, ಗೌರವ ಸಲಹೆಗಾರ ಚಂದ್ರ ಪಿ ಅವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.